ಕಾರವಾರ: ಉದಯ್ ಪಿ. ಮಾದನಗೇರಿ ಕಾರವಾರ ಅವರ ಪುತ್ರ ಸೂರಜ್ ವಾಯುಪಡೆಯಲ್ಲಿ ಫ್ಲೈಯಿಂಗ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಸೂರಜ್ ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಅವರು ತಮ್ಮ ಶಾಲಾ ಶಿಕ್ಷಣವನ್ನು ಕೈಗಾ ಮತ್ತು ಗುಜರಾತ್‌ನ ಕಾಕ್ರಾಪಾರಾನಲ್ಲಿನ ಅಟಾಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್‌ನಲ್ಲಿ ಮಾಡಿದ್ದಾರೆ.
ಸೂರಜ್ ತಂದೆ ಕೈಗಾ ಪರಮಾಣು ವಿದ್ಯುತ್ ಯೋಜನೆಯ 5 ಹಾಗೂ 6ನೇ ಘಟಕದ ಯೋಜನಾ ನಿರ್ದೇಶಕರು. ಅವರ ತಾಯಿ ಕಲ್ಪನಾ ಗೃಹಿಣಿ. ಸೂರಜ್ ಸಹೋದರ ಕರಣ್, ಪತ್ನಿ ರಚನಾ ಅವರೊಂದಿಗೆ ಯುಎಸ್ಎಯ ಟೆಕ್ಸಾಸ್‌ನಲ್ಲಿ ವಾಸಿಸುತ್ತಿದ್ದಾರೆ.ಸೂರಜ್ ಐಎಎಫ್‌ಗೆ ಆಯ್ಕೆಯಾಗಿರುವುದು ಅವರ ಕುಟುಂಬಕ್ಕೆ ಮತ್ತು ಇಡೀ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ಇಂಡಿಯನ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ವಿಮಾನಗಳನ್ನು ನಿರ್ವಹಿಸುವ ಅವರ ಕೌಶಲ್ಯ ನೋಡಿ, ಅವರನ್ನು ಫೈಟರ್ ಪೈಲಟ್ ತರಬೇತಿಗೆ ಆಯ್ಕೆ ಮಾಡಲಾಗಿದೆ.