ಅಕ್ಟೋಬರ್ 23 ಕ್ಕೆ ಮತದಾನ ನಡೆಯಲಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಣಲ್ಲಿರುವ ಎನ್ಡಿಎ ಹುರಿಯಾಳು, 5 ನೇ ಬಾರಿಗೆ ಆಯ್ಕೆ ಬಯಸಿರುವ ಶಶಿಲ್ ನಮೋಶಿ ಪರ 2 ದಿನಗಳಿಂದ ರಾಜಾಜಿನಗರ ಶಾಸಕ ಆಗಿರುವ ಎಸ್. ಸುರೇಶ ಕುಮಾರ್ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿಅಕ್ಟೋಬರ್ 23 ಕ್ಕೆ ಮತದಾನ ನಡೆಯಲಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಣಲ್ಲಿರುವ ಎನ್ಡಿಎ ಹುರಿಯಾಳು, 5 ನೇ ಬಾರಿಗೆ ಆಯ್ಕೆ ಬಯಸಿರುವ ಶಶಿಲ್ ನಮೋಶಿ ಪರ 2 ದಿನಗಳಿಂದ ರಾಜಾಜಿನಗರ ಶಾಸಕ ಆಗಿರುವ ಎಸ್. ಸುರೇಶ ಕುಮಾರ್ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ನಡೆಸಿದರು.ಬಸವ ಕಲ್ಯಾಣದಲ್ಲಿ ಬಸವೇಶ್ವರ, ಖೂಬಾ, ಐಡಿಯಲ್ ಕಾಲೇಜುಗಳಲ್ಲಿ ಶಿಕ್ಷಕರ ಸಭೆ ನಡೆಸಿ ಮತ ಯಾಚಿಸಿದರು. ಇದಲ್ಲದೆ ಹಿರೇಮಠ ಕಾಲೋನಿ ಭೇಟಿ ನೀಡಿ ಪ್ರಚಾರ ನಡೆಸಿದರು.ಮಂಗಳವಾರ ಬಸವ ಕಲ್ಯಾಣ ಸೇರಿದಂತೆ ಬೀದರ್ನ ಜಿಲ್ಲೆಗಳಲ್ಲಿ ಹಲವು ಶಾಲೆಗಳನ್ನು ಸುತ್ತಿ ಶಿಕ್ಷಕರನ್ನು ಕಂಡು ನಮೋಶಿ ಪರ ಮತ ಯಾಚಿಸಿದ ಸುರೇಶ ಕುಮಾರ್ ಬುಧವಾರದ ಕಲಬುರಗಿಯ ಸರ್ಕಾರಿ ಮಹಿಳಾ ಪದವಿ ಕಾಲೇಜು, ನೂತನ ವಿದ್ಯಾಲಯ, ಶಂಕರ ಲಾಲ್ ಲಹೋಟಿ ಕಾನೂನು ವಿದ್ಯಾಲಯಗಳಲ್ಲಿ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.ಎಸ್ಎಸ್ಎಲ್ ಕಾಲೇಜಿನ ಪ್ರಾಚಾರ್ಯೆ ಮಹೇಶ್ವರಿ ಹಿರೇಮಠ ಮಾತನಾಡಿ, ಸುರೇಶ ಕುಮಾರ್ ಅವರು ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದವರು. ಇವರು ತಮ್ಮ ಕಾಲೇಜಿಗೆ ಬಂದಿರೋದು ಹೆಮ್ಮೆಯ ಸಂಗತಿ ಎಂದರು. ವಿಜಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಬಿ ಆರ್ ಕೊಂಡಾ, ನರೇಂದ್ರ ಬಡಸೇಷಿ, ಮಹಾದೇವಯ್ಯ ಕರದಳ್ಳಿ ಇದ್ದರು.
*ಅನುದಾನಿತ- ಸರ್ಕಾರಿ ಶಿಕ್ಷಕರಲ್ಲಿ ತಾರತಮ್ಯ: ಮಾಜಿ ಸಚಿವ ಸುರೇಶ ಕುಮಾರ್ ಜೊತೆ ಪ್ರೇಮ ಕುಮಾರ್ ಸಹಿತ ವಿಜಿ ಮಹಿಳಾ ವಿದ್ಯಾಲಯ, ಲಹೋಟಿ ಕಾಲೇಜಿನ ಕೆಲವು ಶಿಕ್ಷಕರು ಸಂವಾದ ನಡೆಸಿದರು. ರಾಜ್ಯ ಸರ್ಕಾರದ ಆರೋಗ್ಯ ವಿಮೆ ಯೋಜನೆ, ಅನುಕಂಪ ಆಧಾರದ ನೌಕರಿ ನೀಡುವ ವಿಷಯದಲ್ಲಿ ಅನುದಾನಿತ ಪದವಿ ಕಾಲೇಜಿನಲ್ಲಿ ಕೆಲಸ ಮಾಡುವ ಬೋಧಕ, ಬೋಧಕೇತರ ಸಿಬ್ಬಂದಿ ಜತೆಗೇ ತುಂಬಾ ತಾರತಮ್ಯ ಮಾಡಲಾಗುತ್ತಿರುವುದನ್ನು ವಿವರಿಸಿದರು. ಅನುದಾನಿತ ಪದವಿ ತಾಲೇಜಿನಲ್ಲಿ ಆರೋಗ್ಯ ಯೋಜನೆ, ಅನುಕಂಪ ನೌಕರಿ ಲಾಭ ನಮಗೆ ಇಲ್ಲದಂತಾಗಿದೆ ಎಂದು ಗಮನ ಸೆಳೆದಾಗ ಈ ವಿಚಾರದ ಬಗ್ಗೆ ಸಹಮತ ವ್ಯಕ್ತಪಡಿಸಿದ ಸುರೇಶ ಕುಮಾರ್ ಅವರು ತಾವು ಇದನ್ನು ಂಗಭೀರವಾಗಿ ಪರಿಗಣಿಸಿದ್ದು ಬರುವ ದಿನಗಳಲ್ಲಿ ಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿಗಳು, ಸಚಿವರಿಗೆ ಮನಕ್ಕೆ ತಂದು ಪರಿಹಾರ ಕಲ್ಪಿಸುವ ಭರವಸೆ ನೀಡಿದರು.ಕಲಬುರಗಿಯಲ್ಲಿ 8 ಕಿಮೀ ಸೈಕ್ಲಿಂಗ್: ಮಾಜಿ ಸಚಿವ ಸುರೇಶ ಕುಮಾರ್ ಅವರು ಸೈಕ್ಲಿಂಗ್ ಪಟುವಾಗಿದ್ದು, ತರುಪತಿ, ಪಾಂಡಿಚೇರಿ, ಕನ್ಯಾಕುಮಾರಿ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳಿಗೆ ಸೈಕಲ್ ಸವಾರಿ ಮಾಡುತ್ತಲೇ ಸಂಚಾರ ಮಾಡಿ ಗಮನ ಸೆಳೆದಿರುವ ಸುರೇಶ ಕುಮಾರ್ ಕಲಬುರಗಿಯ ತಮ್ಮ 2 ದಿನಗಳ ಭೇಟಿಯಲ್ಲೂ ಬುಧವಾರ ಬೆಳಗ್ಗೆ ತಾವಿರುವ ಜಗತ್ ವೃತ್ತದ ಬಳಿಯ ಖಾಸಗಿ ಹೋಟಲ್ನಿಂದ ಗುಲ್ಬರ್ಗಾ ವಿವಿವರೆಗೂ ಸೈಕ್ಲಿಂಗ್ ನಡೆಸಿ ಗಮನ ಸೆಳೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.