ದಾಸೋಹ ಸೇವಾ ಕೈಂಕರ್ಯ ಸಮಿತಿಯಿಂದ ವಚನ ಮಂಗಲೋತ್ಸವ ಕಾರ್ಯಕ್ರಮ
ಬಸವಣ್ಣನ ಹಾದಿಯಲ್ಲಿ ಮುಂದುವರೆದ ಎಡೆಯೂರು ಸಿದ್ದಲಿಂಗೇಶ್ವರರು ಒಂದು ಜಾತಿಗೆ ಸೀಮಿತವಾಗದೇ ಪ್ರತಿಯೊಬ್ಬರಿಗೂ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡುತ್ತಾ ಷಟ್‌ಸ್ಥಲ ಸಾರಾಮೃತ ಎಂಬ ವಚನ ಸಂಗ್ರಹವನ್ನು ಮಾಡಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ತತ್ವ ಸಿದ್ಧಾಂತಗಲು ಹಾಗೂ ವಚನಗಳನ್ನು ಸರ್ಕಾರ ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಭಕ್ತರ ನಡೆಸುವ ದಾಸೋಹ ಇಲ್ಲಿರುವ ಎಲ್ಲರೂ ಕೂಡ ಅನ್ನದಾತರು ನೀವು ನೀಡುವ ಉದಾರವಾದ ದವಸ ಧಾನ್ಯದಿಂದ ಸಿದ್ದಲಿಂಗೇಶ್ವರನ ಭಕ್ತರಿಗೆ ಅನ್ನ ನೀಡಲು ಸಾಧ್ಯ. ಪ್ರತಿಯೊಬ್ಬರ ಆತ್ಮದಲ್ಲಿ ಸಿದ್ದಲಿಂಗೇಶ್ವರ ಕುಳಿತು ಪ್ರೇರಣೆ ನೀಡುತ್ತಾರೆ. ಇಂತಹ ಭಕ್ತರ ದಾಸೋಹ ಕರ್ನಾಟಕ ರಾಜ್ಯದಲ್ಲಿ ಇದೆ ಮೊದಲು ಉಚಿತ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ದೇವಾಲಯಕ್ಕೆ ಬರುತ್ತಿದ್ದಾರೆ. ಇಲ್ಲಿ ನೀಡುವ ಉಚಿತ ದಾಸೋಹಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದರು.ಧರ್ಮಸ್ಥಳ ದಾಸೋಹ ನಿಂತರೂ ಕೂಡ ಸಿದ್ದಲಿಂಗೇಶ್ವರರ ಎಡೆಯೂರು ದಾಸೋಹ ಎಂದು ನಿಂತಿಲ್ಲ. ಈ ಸಮಿತಿಯ ಸದಸ್ಯರ ಜವಾಬ್ದಾರಿ ಅಷ್ಟು ಮುಖ್ಯವಾಗಿದೆ. ಎಲ್ಲರೂ ಹಿಂದೆ ಬುಳ್ಳ ಮಾನ್ವಿ ಅವರ ಜವಾಬ್ದಾರಿಯಿಂದ ಈಗಿನ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಶ್ರೀಕ್ಷೇತ್ರ ಎಡೆಯೂರಿನಲ್ಲಿ ದಾಸೋಹ ಸೇವಾ ಕೈಂಕರ್ಯ ಸಮಿತಿ ಏರ್ಪಡಿಸಿದ್ದ ವಚನ ಮಂಗಲೋತ್ಸವ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಹಲವಾರು ದಾನಿಗಳನ್ನು ಅಭಿನಂಧಿಸಲಾಯಿತು.