ಬಂಗಾರಪೇಟೆ:
ತಾಲೂಕಿನ ಹುಲಬೆಲೆ ಗ್ರಾಮದ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಂಘದ ಉಳಿವು ಮತ್ತು ಏಳಿಗೆ ಸಂಪೂರ್ಣವಾಗಿ ರೈತರ ಸಹಕಾರದ ಮೇಲೆಯೇ ನಿಂತಿದೆ. ಸಂಸ್ಥೆಯಿಂದ ಇದುವರೆಗೆ ಸುಮಾರು ₹7 ಕೋಟಿ ಸಾಲ ವಿತರಿಸಲಾಗಿದೆ. ಸಾಲ ಪಡೆದ ರೈತರು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿ ನವೀಕರಿಸಿಕೊಂಡರೆ ಮಾತ್ರ ಸಂಘಗಳು ಶಕ್ತಿಯುತವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.ಕಳೆದ ಎರಡು ವರ್ಷಗಳಿಂದ ಹಳೆಯ ಸಾಲಗಳ ನವೀಕರಣಕ್ಕಷ್ಟೇ ಅವಕಾಶ ಸಿಕ್ಕಿದ್ದು, ಹೊಸ ಸಾಲ ನೀಡಲು ಸಾಧ್ಯವಾಗಿರಲಿಲ್ಲ. ಮೇಲ್ಮಟ್ಟದ ಡಿಸಿಸಿ ಬ್ಯಾಂಕ್‌ನಲ್ಲಿ ಚುನಾಯಿತ ಸಮಿತಿ ಇಲ್ಲದೆ ಅಧಿಕಾರಿಗಳ ಆಡಳಿತವಿದ್ದ ಕಾರಣ ಈ ತೊಡಕು ಎದುರಾಗಿತ್ತು. ಜವಾಬ್ದಾರಿ ವಹಿಸಿಕೊಳ್ಳಲು ಅಧಿಕಾರಿಗಳು ಮುಂದಾಗದಿದ್ದರಿಂದ ಸಾಲ ವಿತರಣೆ ಸ್ಥಗಿತಗೊಂಡು ಸಂಘಗಳ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು " ಎಂದು ಕಳವಳ ವ್ಯಕ್ತಪಡಿಸಿದರು.ಇತ್ತೀಚೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತೆರವುಗೊಳಿಸಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ರಚನೆಗೆ ಶಾಸಕರಾದ ಕೊತ್ತೂರು ಮಂಜುನಾಥ್, ನಂಜೇಗೌಡ, ರೂಪಮ್ಮ ಮತ್ತಿತರ ನಾಯಕರು ಶ್ರಮಿಸಿದ್ದಾರೆ. ತಾಲೂಕಿನಿಂದ ರಂಗಾಚಾರ್ಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ನೂತನ ಸಮಿತಿಯು ರೈತರಿಗೆ ಹೊಸ ಸಾಲ ಕಲ್ಪಿಸಲು ಬದ್ಧವಾಗಿದೆ ಎಂದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಮಂಜುನಾಥಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್, ಉಪಾಧ್ಯಕ್ಷ ರಾಜಪ್ಪ, ನಿರ್ದೇಶಕರಾದ ಬಿ. ವೆಂಕಟೇಶಪ್ಪ, ಸಿ. ಅಶ್ವತ್ಥಪ್ಪ, ಜಿ. ಜನಾರ್ಧನ್, ಬಿ. ರಾಮಕೃಷ್ಣಪ್ಪ, ಜಿ.ವಿ. ರಾಮಪ್ಪ, ವೆಂಕಟೇಶಪ್ಪ, ಅಪ್ಪಾಲಪ್ಪ, ಹೆಚ್.ಕೆ. ಮಂಜುನಾಥ್, ಜಯಂತಿ ಆರ್.ವಿ., ನಾರಾಯಣಮ್ಮ, ಸಿಬ್ಬಂದಿಗಳಾದ ಹೆಚ್.ಡಿ. ರಂಗನಾಥ್, ಎಂ. ಸುಬ್ರಮಣಿ, ಜಯಸುಧಾ ಇದ್ದರು.