ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲದಿದ್ದರೆ ಬಿಇಒ ಅವರನ್ನೇ ಹೊಣೆಗಾರರನ್ನಾಗಿಸಿ ನಿಮ್ಮ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಬಿಇಒ ವೆಂಕಟೇಶಪ್ಪ ರವರನ್ನು ತರಾಟೆಗೆ ತೆಗೆದುಕೊಂಡರು.
ಸೌಲಭ್ಯವಿದ್ದರೂ ಪ್ರಗತಿ ಶೂನ್ಯಬಹುತೇಕ ಬಡವರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಶಾಲೆಯ ಶಿಕ್ಷಕರಿಗೆ ಲಕ್ಷಾಂತರ ರೂ.ಗಳ ಸಂಬಳ ನೀಡಲಾಗುತ್ತಿದೆ. ಆದರೆ ಶಿಕ್ಷಣದ ಪ್ರಗತಿ ಮಾತ್ರ ಶೂನ್ಯ. ಹಲವು ಶಿಕ್ಷಕರು ಶಾಲಾ ಸಮಯದಲ್ಲಿ ಶಾಲೆಗೆ ಚಕ್ಕರ್ ಹೊಡೆದು ಜಾತ್ರೆ, ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರ ಇತ್ಯಾಥಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೆಲ್ಲ ಗಮನಿಸಿದರೆ ಅಧಿಕಾರಿಗಲೂ ಶಿಕ್ಷಕರ ಜೊತೆ ಶಾಮೀಲಾಗಿದ್ದಿರಾ ಎನ್ನುವ ಸಂಶಯ ಬರುತ್ತೆ. ಅಧಿಕಾರಿಗಳಿಗೆ ಶಿಕ್ಷಕರ ಮೇಲೆ ಹಿಡಿತವಿಲ್ಲ. ತಾವು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶೇ.50 ರಷ್ಟು ಶಿಕ್ಷಕರು ಶಾಲಾ ಸಮಯದಲ್ಲಿ ಇರಲೇ ಇಲ್ಲ. ತಾಲೂಕಿನ ಬಿಳ್ಳೂರು ಶಾಲೆಯ ಶಿಕ್ಷಕರೊಬ್ಬರು 10.30 ಶಾಲೆಗೆ ಬಂದಿರಲಿಲ್ಲ. ಇನ್ನೊಬ್ಬ ಶಿಕ್ಷಕ ಸರ್ಕಾರಿ ಸಂಬಳ ಪಡೆದು ಖಾಸಗಿ ಕಾರು ಚಾಲಕನಾಗಿ ಕೆಲಸಕ್ಕೆ ಹೋಗುತ್ತಾನೆ. ಇದೇ ರೀತಿಯಲ್ಲಿ ಬಹುತೇಕ ಶಿಕ್ಷಕರು ಶಾಲೆಗೆ ಹೋಗದೆ ಓಡಿಕೊಂಡಿರುತ್ತಾರೆ ಇಲ್ಲಿ ಏನು ನಡೆಯುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ
ಕಳೆದ 3 ವರ್ಷಗಳಲ್ಲಿ 140 ಕೋಟಿ ರು.ಗಳ ಅನುದಾನ ರಸ್ತೆ ಅಭಿವೃದ್ದಿಗಾಗಿ ಬಿಡುಗಡೆಯಾಗಿದೆ. ಆದರೆ ರಸ್ತೆಗಳು ಮಾತ್ರ ಸರಿಯಾಗಿಲ್ಲ, ನಿಮ್ಮ ಇಲಾಖೆಗೆ ಎಷ್ಟು ಹಣ ಬಂದಿದೆ ಎನ್ನುವ ಮಾಹಿತಿ ಸಹ ನಿಮಗೆ ಇಲ್ಲ, ಕೋಟ್ಯತರ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಗಳಲ್ಲಿ ಕೆಲವರು ರಸ್ತೆ ಅಗೆದು ಹಾಳು ಮಾಡಿದ್ದಾರೆ ಆದರೆ ನೀವು ಅವರ ವಿರುದ್ದ ಏಕೆ ಕ್ರಮಕೈಗೊಂಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ಪ್ರದೀಪ್ ರವರನ್ನು ಪ್ರಶ್ನಿಸಿದ ಶಾಸಕರು, ರಸ್ತೆ ಹಾಳು ಮಾಡುವವರ ವಿರುದ್ದ ಕೇಸ್ ಹಾಕುವಂತೆ ಸೂಚಿಸಿದರು.
.