ಹಿಂದೂಪರ ಮುಖಂಡನ ಅನುಮಾನಾಸ್ಪದ ಸಾವು

KannadaprabhaNewsNetwork |  
Published : Oct 24, 2026, 03:00 AM IST
ಪೊಟೋ ಅ.23ಎಂಡಿಎಲ್ 1. ಪ್ರಮೋದ ಮಲ್ಲಿಕಾರ್ಜುನ ಮಮದಾಪೂರ | Kannada Prabha

ಸಾರಾಂಶ

ಹಿಂದೂಪರ ಸಂಘಟನೆಯ ಮುಖಂಡ ಪ್ರಮೋದ ಮಲ್ಲಿಕಾರ್ಜುನ ಮಮದಾಪುರ (39) ಎಂಬುವವರ ಗುರುವಾರ ಮುಧೋಳದ ದತ್ತ ಕೆರೆಯಲ್ಲಿ ಶವವಾಗಿ ಸಿಕ್ಕಿದ್ದು, ಈ ಸಾವಿನಲ್ಲಿ ಸಂಶಯ ಇದೆ ಎಂದು ಮೃತನ ಅಳಿಯ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ಹಿಂದೂಪರ ಸಂಘಟನೆಯ ಮುಖಂಡ ಪ್ರಮೋದ ಮಲ್ಲಿಕಾರ್ಜುನ ಮಮದಾಪುರ (39) ಎಂಬುವವರ ಗುರುವಾರ ಮುಧೋಳದ ದತ್ತ ಕೆರೆಯಲ್ಲಿ ಶವವಾಗಿ ಸಿಕ್ಕಿದ್ದು, ಈ ಸಾವಿನಲ್ಲಿ ಸಂಶಯ ಇದೆ ಎಂದು ಮೃತನ ಅಳಿಯ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಗುರುವಾರ ಮಧ್ಯಾಹ್ನದತ್ತ ಕೆರೆಯಲ್ಲಿ ಮೃತದೇಹ ತೇಲುತ್ತಿರುವುದು ಕಂಡು ಸಾರ್ವಜನಿಕರು ಪೊಲೀಸರಿ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ಹೊರತೆಗೆದು ಶುಕ್ರವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಸ್ವಗ್ರಾಮ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮಕ್ಕೆ ಅಂತ್ಯಕ್ರಿಯೆ ಮಾಡಲು ಕಳಿಸಿಕೊಡಲಾಯಿತು. ಮೃತನಿಗೆ ಈಜಲು ಬರುತ್ತಿದ್ದರಿಂದ ಸಾವಿನಲ್ಲಿ ಸಂಶಯ ಇದೆ ಎಂದು ಮೃತನ ಅಳಿಯ ನಗರದ ಶ್ರೀಶೈಲ ಸೋಮಣ್ಣ ಹತ್ತಿ ಅವರು ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಧೋಳ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಮೋದ ಮಮದಾಪೂರ ಈತನು ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆ
ಚನ್ನಮ್ಮಳ ಶೌರ್ಯ, ದೇಶಪ್ರೇಮ ಮಹಿಳೆಯರಿಗೆ ಸ್ಫೂರ್ತಿ