ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕರ್ನಾಟಕದಲ್ಲಿ ಹುಟ್ಟಿರುವ ನಾವುಗಳು ಮೊದಲು ಕನ್ನಡವನ್ನು ಕಲಿತು ಇತರರಿಗೆ ಕನ್ನಡವನ್ನು ಕಲಿಸಿ ಬೆಳೆಸುವ ಕಾರ್ಯದಲ್ಲಿ ಮುಂದಾಗಬೇಕೆಂದು ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ರೇ.ಫಾ.ಅರುಳ್ ಸೆಲ್ವಕುಮಾರ್ ಹೇಳಿದರು.ಶನಿವಾರ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಕರ್ನಾಟಕ 50ರ ಅಂಗವಾಗಿ ಹೋಬಳಿ ಮಟ್ಟದ ಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸೆಬಾಸ್ಟೀನ್ ವಹಿಸಿದ್ದರು. ವೇದಿಕೆಯಲ್ಲಿ ವಿಜಯ ಪ್ಲಾಂಟೇಶನ್ ವ್ಯವಸ್ಥಾಪಕ ಶಶಾಂಕ್, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸೇಲ್ವರಾಜ್, ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾವತಿ, ಸು.ಹೋ.ಕ.ಸಾ.ಪ. ಕೋಶಾಧಿಕಾರಿ ಸತೀಶ್ ಶೇಟ್, ಬಿ.ಎಸ್.ಆಶೋಕ್ ಶೇಟ್, ಸು.ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಗೀತಾ ಬಸಪ್ಪ, ವಿವಿಧ ಶಾಲೆಗಳ ಸಹಶಿಕ್ಷಕರು ಇದ್ದರು.ಪ್ರತಿ ಶಾಲಾ ಮಟ್ಟದಲ್ಲಿ ಸುವರ್ಣ ಕರ್ನಾಟಕ 50 ರ ಅಂಗವಾಗಿ ಸ್ಪರ್ಧೆಗಳನ್ನು ಶಾಲಾ/ಕಾಲೇಜುಗಳಲ್ಲಿ ನಡೆಸಲಾಗಿದ್ದು, ವಿಜೇತ ಮಕ್ಕಳಿಗೆ ಹೋಬಳಿ ಮಟ್ಟದ ಸ್ಪರ್ಧೆಗಳನ್ನು ಶನಿವಾರ ನಡೆಸಲಾಯಿತು.
ಈ ಸ್ಪರ್ಧೆಗೆ ಹೋಬಳಿಯ ವ್ಯಾಪ್ತಿಯ 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಕಾನ್‌ಬೈಲ್, ಸುಂಟಿಕೊಪ್ಪ ಶಾಲೆಗಳ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತ್ಯೇಕವಾಗಿ ಕನ್ನಡ ನಾಡು ನುಡಿಗೆ ಸಂಬಂದಿಸಿದ ಭಾವಗೀತೆ ಗಾಯನ ಸ್ಪರ್ಧೆ, ಜಾನಪದ ಗೀತೆ ಗಾಯನ ಸ್ಪರ್ಧೆ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳ ಬಗ್ಗೆ ಪ್ರಬಂಧ ಸ್ಪರ್ಧೆ, ಕನ್ನಡ ನಾಡು ನುಡಿಗೆ ಸಂಬಂಧಿಸಿದ ಚಿತ್ರ ಕಲಾ ಸ್ಪರ್ಧೆಗಳನ್ನು ನಡೆಸಲಾಯಿತು.* ಸ್ಪರ್ಧೆಯ ಫಲಿತಾಂಶಪ್ರಾಥಮಿಕ ಶಾಲಾ ವಿಭಾಗದಲ್ಲಿ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆಯ ಕೆ.ಎಸ್.ಅನ್ವಿ ಪ್ರಥಮ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಾನ್‌ಬೈಲ್‌ನ ಪಿ.ಜಿ.ರಂಜಿನಿ ದ್ವಿತೀಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಾನ್‌ಬೈಲ್‌ನ ಎ. ಪುಣ್ಯ ತೃತೀಯ ಸ್ಥಾನ ಪಡೆದುಕೊಂಡರು. ಪ್ರೌಢಶಾಲಾ ವಿಭಾಗದಲ್ಲಿ ಕೊಡರಹಳ್ಳಿಯ ಸುಂಟಿಕೊಪ್ಪ ನಾಡು ಶಾಲೆಯ ಎಂ.ಎ.ನಿಯಾಜ್ ಪ್ರಥಮ, ಸರ್ಕಾರಿ ಪ್ರೌಢಶಾಲೆ ಕಾನ್‌ಬೈಲ್‌ನ ಎಚ್.ಜಿ.ಚಸ್ಮಿತ್ ದ್ವಿತೀಯ, ಶಾಂತಿನೀಕೇತನ ಪ್ರೌಢಶಾಲೆಯ ಎಸ್.ಧನ್ಯಶ್ರೀ ತೃತೀಯ ಸ್ಥಾನ ಪಡೆದರು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಲಿನಾ ಡಿಸೋಜ ಪ್ರಥಮ, ಸಂತಮೇರಿ ಆಂಗ್ಲ ಪಿಯು ಕಾಲೇಜಿನ ಎಚ್.ಎ.ಅನುಷಾ ದ್ವಿತೀಯ, ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಜ್ಮೀಯ ತೃತೀಯ ಸ್ಥಾನ ಪಡೆದುಕೊಂಡರು.ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಇಸ್ನಾ ಪೆಬಿನ್ ಪ್ರಥಮ, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ನಿವೇದ ದ್ವಿತೀಯ, ಅತ್ತೂರು ನಲ್ಲೂರು ಶಾಲೆಯ ಕೆ.ಎಂ.ಸಿಂಚನ ತೃತೀಯ ಸ್ಥಾನಗಳನ್ನು ಪಡೆದುಕೊಂಡರು. ಪ್ರೌಢಶಾಲಾ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಕಾನ್‌ಬೈಲ್‌ನ ಪಿ.ಆರ್.ಶಾಕೀರ ಪ್ರಥಮ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಪ್ಲೋರಿಯ ರಾಡ್ರಿಗಸ್ ದ್ವಿತೀಯ, ಕೊಡರಹಳ್ಳಿಯ ಸುಂಟಿಕೊಪ್ಪ ನಾಡು ಶಾಲೆಯ ಎ.ಎಸ್.ಶ್ರೀಶಾ ತೃತೀಯ ಸ್ಥಾನ ಪಡೆದರು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಭಾಗದಲ್ಲಿ ಎಂ.ಜಿ.ಶ್ವೇತಾ ಪ್ರಥಮ, ಸಂ.ಮೇ. ಪ.ಪೂ.ಕಾ. ಎಸ್.ಕೀರ್ತಿ ದ್ವಿತೀಯ, ಸಂ.ಮೇ. ಪ.ಪೂ.ಕಾ ಮೇಲಿಷ ಡಿಸೋಜ ತೃತೀಯ ಸ್ಥಾನ ಪಡೆದುಕೊಂಡರು.
ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಮಹಮ್ಮದ್ ಸುಹಾನ್ ಪ್ರಥಮ, ಶಾಂತಿನಿಕೇತನ ಶಾಲೆಯ ಸನಾತೀನಿ ಶೆಟ್ಟಿ ದ್ವಿತೀಯ, ಶಾಂತಿನಿಕೇತನ ಶಾಲೆಯ ಶಿವಪ್ರಸಾದ್ ತೃತೀಯ. ಪ್ರೌಢಶಾಲೆ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಜಸ್ಮಿತಾ ಶ್ರೀಹರಿ ಪ್ರಥಮ, ಸಂತಮೇರಿ ಶಾಲೆಯ ಎಂ.ವಿಸ್ಮಯ್ ದ್ವಿತೀಯ, ಸಂತ ಮೇರಿ ಶಾಲೆಯ ರೂಮನ್ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಧುಮಿತ ಪ್ರಥಮ, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಆಯಿಷಾ ದ್ವಿತೀಯ, ಸರ್ಕಾರಿ ಪದವಿಪೂರ್ವ ಕಾಲೇಜಿನ ಕಿಶೋರ್ ತೃತೀಯ ಸ್ಥಾನ ಪಡೆದರು.ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಪ್ರಣಮೀಯ ಪ್ರಥಮ, 7ನೇ ಹೊಸಕೋಟೆ ದೀಪ್ತಿ ಶಾಲೆಯ ಅಜ್ಮೀಯ ದ್ವಿತೀಯ, ಅತ್ತೂರು ನಲ್ಲೂರು ಶಾಲೆಯ ಶಾಹನ ತೃತೀಯ ಸ್ಥಾನ ಪಡೆದುಕೊಂಡರು. ಪ್ರೌಢಶಾಲೆ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಕೆ.ಪ್ರೀತಿ ಪ್ರಥಮ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಅನುಕುಮಾರಿ ದ್ವಿತೀಯ, ಶಾಂತಿನಿಕೇತನ ಶಾಲೆಯ ದಿಕ್ಷೀತ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸಾನ ಪರ್ವಿನ್ ಪ್ರಥಮ, ಸರ್ಕಾರಿ ಪದವಿಪೂರ್ವ ಕಾಲೇಜಿನ ಐಶ್ವರ್ಯ ದ್ವಿತೀಯ, ಸರ್ಕಾರಿ ಪದವಿಪೂರ್ವ ಕಾಲೇಜಿನ ಮಹಮ್ಮದ್ ಹರ್ಷದ್ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.