ಭಟ್ಕಳ: ಮುರ್ಡೇಶ್ವರದ ಸಾರ್ವಜನಿಕರ ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್ ಇದರ 50ನೇ ವರ್ಷದ ಗಣೇಶೋತ್ಸವವನ್ನು ಸುವರ್ಣ ಸಂಭ್ರಮದ ಹೆಸರಿನಲ್ಲಿ 11 ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಶಂಕರ ಭಟ್ರಹಿತ್ಲು ಹೇಳಿದರು.
ಸೆ. 17ರಂದು ಗಣಹೋಮ, ಮಹಾಪೂಜೆ, ಸಂಜೆ 6 ಗಂಟೆಗೆ ಮೂಡಗಣಪತಿ ಸೇವೆ, ನೃತ್ಯ ಸ್ಪರ್ಧೆ, ರಾತ್ರಿ ನಾಟ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಸೆ. 18ರಂದು ಬೆಳಗ್ಗೆ ಸಾರ್ವಜನಿಕ ಗಣಹೋಮ, ಮಧ್ಯಾಹ್ನ ಮಹಾಅನ್ನಸಂತರ್ಪಣೆ, ಸಂಜೆ 5 ಗಂಟೆಗ ವೀರಚಂದ್ರಹಾಸ ಯಕ್ಷಗಾನ, ರಾತ್ರಿ 9 ಗಂಟೆಗೆ ಝೇಂಕಾರ ಮೆಲೋಡಿಸ್‌ನಿಂದ ಸಂಗೀತ ರಸಮಂಜರಿ ನಡೆಯಲಿದೆ. ಸೆ. 19ರಂದು ಬೆಳಗ್ಗೆ ಲಕ್ಷ ದುರ್ವಾರ್ಚನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಭರತನಾಟ್ಯ, ರಂಗಪೂಜೆ, ಶಾರದಾ ಕಲಾ ಸೌರಭ, ರಾತ್ರಿ ಶಿವೋಹಂ ನಾಟಕ ಪ್ರದರ್ಶನ ನಡೆಯಲಿದೆ. ಸೆ. 20ರಂದು ಬೆಳಗ್ಗೆ 10 ಗಂಟೆಯಿಂದ ಉಚಿತ ಕಣ್ಣಿನ ಚಿಕಿತ್ಸೆ ಮತ್ತು ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಅಂದು ಮಧ್ಯಾಹ್ನ ಮಹಾಪೂಜೆ, ಸಂಜೆ ಸಭಾ ಕಾರ್ಯಕ್ರಮ, ರಾತ್ರಿ 7.30ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಸೆ. 21ರಂದು ಬೆಳಗ್ಗೆ 10.30ಕ್ಕೆ ಶಿವಸ್ತಂಭ ಮತ್ತು ವಿದ್ಯುತ್ ದೀಪಗಳ ಸಮರ್ಪಣೆ, ಸೋಮನಾಥೇಶ್ವರ ದಿವ್ಯ ಜ್ಯೋತಿರ್ಲಿಂಗದ ಆಗಮನ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಕಲಾವಿದರಿಂದ ಗಾಯನ, ರಾತ್ರಿ 7.30ಕ್ಕೆ ಕುದ್ರೋಳಿ ಗಣೇಶ ಬಳಗದವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ. ಸೆ. 22ರಂದು ಬೆಳಗ್ಗೆ ಲಕ್ಷ ಕುಂಕುಮಾರ್ಚನೆ, ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ವಿದ್ಯಾರ್ಥಿಗಳಿಂದ ಕಾವ್ಯ ಗಾಯನ, ಸಭಾ ಕಾರ್ಯಕ್ರಮ, ರಾತ್ರಿ ಡಾನ್ಸ್ ಕಾರ್ಯಕ್ರಮ, ಸೆ. 23ರಂದು ಬೆಳಗ್ಗೆ ವೈಯಕ್ತಿಕ ಗಣಹೋಮ, ಮಹಾಪೂಜೆ, ಸಂಜೆ ಕಾವ್ಯಗಾಯನ, ಸಭಾ ಕಾರ್ಯಕ್ರಮ, ಮಹಾಪೂಜೆ, ರಾತ್ರಿ ಗೋಲ್ಡನ್ ನೈಟ್ -2026 ಕಾರ್ಯಕ್ರಮ ಆಯೋಜಿಸಲಾಗಿದೆ. ಸೆ. 24ರಂದು ಮಧ್ಯಾಹ್ನ ಮಹಾಪೂಜೆ, ಮಧ್ಯಾಹ್ನ 3 ಗಂಟೆಯಿಂದ ಅದ್ಧೂರಿ ನಗರೋತ್ಸವ ಮೆರವಣಿಗೆ, ಸಂಜೆ ಸಭಾ ಕಾರ್ಯಕ್ರಮ, ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದ್ದು, 11 ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಟ್ರಸ್ಟಿನ ಪ್ರಮುಖರಾದ ಎಸ್.ಎಸ್. ಕಾಮತ್, ಕೃಷ್ಣಾ ನಾಯ್ಕ ಜಮೀನ್ದಾರ, ದೇವಿದಾಸ ಗುಡಿಗಾರ, ಸಂತೋಷ ನಾಯ್ಕ, ಲಕ್ಷ್ಮಣ ನಾಯ್ಕ, ಶಂಭು ಹೆಗಡೆ, ಈಶ್ವರ ದೊಡ್ಮನೆ, ಸುರೇಶ ನಾಯ್ಕ, ಸುನೀಲ್ ನಾಯ್ಕ, ನಯನಾ ನಾಯ್ಕ, ರಾಜು ನಾಯ್ಕ, ಎಂ.ವಿ. ಹೆಗಡೆ, ನಾಗೇಶ ನಾಯ್ಕ ಮುಂತಾದವರಿದ್ದರು.