ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಹಾಸನದಲ್ಲಿ ಡಿ.5ರಂದು ಹಮ್ಮಿಕೊಂಡಿರುವ ಸ್ವಾಭಿಮಾನಿ ಜನಾಂದೋಲನ ಸಮಾವೇಶದ ಪ್ರಚಾರ ರಥಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.ನಗರದ ಮಾನಸಗಂಗೋತ್ರಿ ಪ್ರವೇಶ ದ್ವಾರದ ಬಳಿಯ ಕುವೆಂಪು ಪ್ರತಿಮೆ ಎದುರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟಗಳು ಹಮ್ಮಿಕೊಂಡಿರುವ ಸಮಾವೇಶದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ, ಮೈಸೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮೈಸೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ನಗರದ ಪ್ರದೇಶದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ವಾಹನ ಸಂಚರಿಸಲಿದ್ದು, ಡಿ.4 ರಂದು ಮುಕ್ತಾಯಗೊಂಡು, ಡಿ.5 ರಂದು ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ಡಾ.ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು, ಸಿದ್ದರಾಮಯ್ಯ, ಶಾಸಕರು, ಜನಪ್ರತಿನಿಧಿಗಳ ಭಾವಚಿತ್ರಗಳು, ಸಮಾವೇಶದ ಉದ್ದೇಶ ಬಗ್ಗೆ ಪ್ರಚಾರ ವಾಹನದಲ್ಲಿ ಮಾಹಿತಿ ಇದೆ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. 45 ವರ್ಷಗಳ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ನಿಷ್ಕಳಂಕ ನೈತಿಕತೆ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. 2ನೇ ಬಾರಿ ಮುಖ್ಯಮಂತ್ರಿಯಾಗಿ ಅತ್ಯಂತ ಸಮರ್ಥ ಆಡಳಿತ ನಡೆಸುತ್ತಿದ್ದಾರೆ. ಇದನ್ನು ಸಹಿಸದ ರಾಜಕೀಯ ದುಷ್ಟಶಕ್ತಿಗಳು ಸಾಮಾನ್ಯ ಜನರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಗಟ್ಟಿಯಾಗಿ ನಿಲ್ಲಲು ಶೋಷಿತ, ಅಹಿಂದ ವರ್ಗಗಳು ಸೇರಿ ಸಮಾವೇಶ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಾಹಿತಿಗಳಾದ ಪ್ರೊ. ಕಾಳೇಗೌಡ ನಾಗವಾರ, ಪ್ರೊ.ಕೆ.ಎಸ್. ಭಗವಾನ್, ಸಮಾಜ ಸೇವಕ ಕೆ. ರಘುರಾಂ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಮುಖಂಡರಾದ ಎಸ್. ಯೋಗೀಶ್ ಉಪ್ಪಾರ, ಎಸ್. ರವಿನಂದನ್, ಶಿವಪ್ಪ ಕೋಟೆ, ಎನ್. ಭಾಸ್ಕರ್, ದ್ಯಾವಪ್ಪ ನಾಯಕ, ಎನ್.ಆರ್. ನಾಗೇಶ್, ಮೊಗಣ್ಣಚಾರ್, ದೇವಗಳ್ಳಿ ಸೋಮಶೇಖರ್, ಆನಂದ, ಮಂಜುನಾಥ್, ಶಿವಪ್ರಸಾದ, ನಟರಾಜ, ಲೋಕೇಶ್ ಕುಮಾರ್, ಮಹೇಂದ್ರ ಕಾಗಿನೆಲೆ, ಹರೀಶ್ ಮೊಗಣ್ಣ, ಸುನಿಲ್ ನಾರಾಯಣ, ಶಿವಶಂಕರ್, ದಿನೇಶ್ ಮೊದಲಾದವರು ಇದ್ದರು.ಇನ್ ಸ್ಪೇಸ್ ಜತೆ ಜೆಎಸ್‌ಎಸ್‌ಎಸ್ ಟಿ ವಿವಿ ಒಡಂಬಡಿಕೆಕನ್ನಡಪ್ರಭ ವಾರ್ತೆ ಮೈಸೂರುಭಾರತ ಸರ್ಕಾರದ ಅಧೀನದ ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಅಂಡ್ ಆಥರೈಜೇಷನ್ ಸೆಂಟ್ ಮತ್ತು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯು ಒಡಂಬಡಿಕೆ ಮಾಡಿಕೊಂಡಿದೆ.
ಬಾಹ್ಯಾಕಾಶ, ಉಪಗ್ರಹ ಯೋಜನೆ ಕುರಿತ ಅಧ್ಯಯನಕ್ಕೆ ನೆರವಾಗುವಂತೆ ಜೆಎನ್‌ಎಎನ್ಎಎಂ [ಜೆಎಸ್‌ಎಸ್ ನ್ಯಾನೋಸ್ಯಾಟಲೈಟ್ ಫಾರ್ ಅಫ್ಲಿಕೇಷನ್ಸ್ ಇನ್ ಮಿಡಿಸಿನ್] ಹೆಸರಿನ ಈ ಒಡಂಬಡಿಕೆಯಿಂದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ವಿದ್ಯಾರ್ಥಿಗಳ ಬಾಹ್ಯಾಕಾಶ ಕುರಿತ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚು ನೆರವಾಗಲಿದೆ.ಇಸ್ರೋ ಕೈಗೊಳ್ಳುವ ಉಪಗ್ರಹ ವಿನ್ಯಾಸ, ಪ್ರಯೋಗ ಮತ್ತು ಉಡಾವಣೆಯಲ್ಲಿ ಬಳಸಿಕೊಳ್ಳಲಾಗುತ್ತಿದ್ದು, 2025ರಲ್ಲಿ ಉಡಾವಣೆಗೊಳಿಸಲು ಉದ್ದೇಶಿಸಿರುವ ಆರ್ಬಿಟ್ ಸ್ಯಾಟಿಲೈಟ್ ನಲ್ಲಿ ಪಾಲ್ಗೊಳ್ಳಬಹುದು.