ವಿವಿಧ ಮಠಗಳ ಸ್ವಾಮೀಜಿಗಳ ಬೆಳ್ಳಿ ರಥದಲ್ಲಿ ಮೆರವಣಿಗೆ

KannadaprabhaNewsNetwork |  
Published : Feb 12, 2025, 12:34 AM IST
58 | Kannada Prabha

ಸಾರಾಂಶ

ಪಟ್ಟಣದ ವಿಶ್ವಕರ್ಮ ಬೀದಿ ಸೇರಿದಂತೆ ಚಿತ್ರಮಂದಿರ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣ ವೃತ್ತ ಹಾಗೂ ಹೊಸ ತಿರುಮಕೂಡಲು ರಸ್ತೆಯ ಮಾರ್ಗವಾಗಿ ತ್ರಿವೇಣಿ ಸಂಗಮ ತಲುಪಿತು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಕುಂಭಮೇಳದಲ್ಲಿ ಭಾಗವಹಿಸುವ ವಿವಿಧ ಮಠಗಳ ಸ್ವಾಮೀಜಿ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಯಿತು.

ಅಲಂಕರಿಸಿದ್ದ ವಾಹನಗಳ ರಥದಲ್ಲಿ ಕುಳಿತಿದ್ದ ಮಠಾಧಿಪತಿಗಳ ಮೆರವಣಿಗೆ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭಗೊಂಡಿತು. ಪಟ್ಟಣದ ವಿಶ್ವಕರ್ಮ ಬೀದಿ ಸೇರಿದಂತೆ ಚಿತ್ರಮಂದಿರ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣ ವೃತ್ತ ಹಾಗೂ ಹೊಸ ತಿರುಮಕೂಡಲು ರಸ್ತೆಯ ಮಾರ್ಗವಾಗಿ ತ್ರಿವೇಣಿ ಸಂಗಮ ತಲುಪಿತು. ಮಂಗಳವಾದ್ಯ, ವೀರಗಾಸೆ, ವಚನಾ ತಂಡಗಳು, ಕೊಂಬು ಕಹಳೆ, ಕಳಶ ಒತ್ತ ಸುಮಂಗಲಿಯರು, ಕಂಸಾಳೆ ಪೂಜೆ ಕುಣಿತ, ಗರುಡಿ ಕುಣಿತ, ಕೋಲಾಟ, ವೀರ ಮಕ್ಕಳ ಕುಣಿತ, ಕೀಲು ಕುದುರೆ, ಪಟ್ಟ ಕುಣಿತ ತಮಟೆ, ಬ್ಯಾಂಡ್ ಸೆಟ್ ದೇವಾಳ ಮತ್ತು ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಕಳೆಯನ್ನು ತಂದವು. ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!