ಹುಲ್ಲೆಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ
ಜನರ ಸಮಸ್ಯೆಗಳನ್ನು ಅವರಿದ್ದಲ್ಲಿಗೇ ತೆರಳಿ ಆಲಿಸಿ ಅವುಗಳನ್ನು ಬಗೆಹರಿಸುವ ಆಶಯ ಪ್ರಜಾಸೇವಾ ಆಂದೋಲನದ ಉದ್ದೇಶ ಎಂದು ತಹಸೀಲ್ದಾರ್ ಪೂರ್ಣಿಮಾ ಹೇಳಿದರು.
ಬೀರೂರು ಹೋಬಳಿ ಹುಲ್ಲೆಹಳ್ಳಿ ಗ್ರಾಪಂ ಆವರಣದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಇಲಾಖೆ ಅಧಿಕಾರಿಗಳು ಹಾಜರಿದ್ದು ಜನರ ಸಮಸ್ಯೆಯನ್ನು ಸ್ಥಳದಲ್ಲೆ ಆಲಿಸಿ ಪರಿಹರಿಸಬಹುದಾದಂತದ್ದನ್ನು ಇಲ್ಲಿಯೇ ಬಗೆಹರಿಸುವ, ಇಲ್ಲದಿದ್ದರೆ ಸಮಸ್ಯೆಗಳ ಪರಿಹಾರದ ಸಮಯ ತಿಳಿಸಿ ಜನರಿಗೆ ಸಮಸ್ಯೆ ಪರಿಹಾರ ನೀಡುವ ವಿಶಿಷ್ಠ ಕಾರ್ಯಕ್ರಮ ಇದಾಗಿದೆ ಎಂದರು.ಪ್ರಾಸ್ತಾವಿಕವಾಗಿ ತಾಲೂಕು ಪಂಚಾಯಿತಿ ಇಓ ಸಿಆರ್.ಪ್ರವೀಣ್ ಮಾತನಾಡಿ ಪ್ರಜಾಸೇವಾ ಆಂದೋಲನದ ಜೊತೆ ಗ್ರಾಮೀಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ಸೂಕ್ತ ಹಕ್ಕುಪತ್ರ ಅಥವಾ ದಾಖಲೆಗಳಿಲ್ಲದ ಮನೆಗಳಿಗೆ ವಿದ್ಯುತ್ ಬಿಲ್ ಆಧಾರದ ಮೇಲೆ ‘ಈ-ಸ್ವತ್ತು’ (ಇ-ಆಸ್ತಿ) ಒದಗಿಸುವ ‘ಭೂ ಗ್ಯಾರಂಟಿ’ ಯೋಜನೆ ನ. 2ನೇ ವಾರದಿಂದ ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ಯಾವುದೇ ನೋಂದಣಿ ಅಥವಾ ಇಸಿ ಅಗತ್ಯವಿಲ್ಲ.
ಗ್ರಾಮದ ಕೆಂಚೇಗೌಡ ಮಾತನಾಡಿ, ನಮ್ಮ ಹುಲ್ಲೇಹಳ್ಳಿ ಗ್ರಾಮದ ಸುಮಾರು 40ಕ್ಕು ಹೆಚ್ಚಿನ ಬಡವರ ರೇಷನ್ ಕಾರ್ಡ ಗಳು ರದ್ದಾದ ಪರಿಣಾಮ ಅನೇಕರು ಇಂದು ಬೀದಿಗೆ ಬಂದಿದ್ದಾರೆ. ಅನೇಕ ಎಕರೆಗಟ್ಟಲೆ ಅಡಕೆ ತೋಟಗಳಿರುವ ಸಾಹುಕಾರರು ಬಿಪಿಲ್ ಕಾರ್ಡ ಬಳಸುತ್ತಿದ್ದಾರೆ. ನಮ್ಮಂತ ರೈತ ಬಡಕುಟುಂಬಗಳ ರೇಷನ್ ಕಿತ್ತುಕೊಂಡಿರುವುದು ಯಾಕೆ ಆಹಾರ ಇಲಾಖೆಯ ಅಧಿಕಾರಿಗಳು ಉತ್ತರಿಸುವಂತೆ ಕೋರಿದರು.
ಪಿಂಚಣಿ ಸ್ಥಗಿತಗೊಂಡ ಬಗ್ಗೆ ಅನೇಕ ಮಹಿಳೆಯರು ಅರ್ಜಿ ಸಲ್ಲಿಸಿದ್ದರು, ಇದಕ್ಕೆ ಉತ್ತರ ನೀಡಿದ ತಹಸೀಲ್ದಾರ್ ಪೂರ್ಣಿಮ, ಸರ್ಕಾರ ಯಾರಿಗೆ 65ವರ್ಷ ಮೇಲ್ಪಟ್ಟು ವಯಸ್ಸಾಗಿದೆ ಅಂತವರನ್ನು ಗುರುತಿಸಿ ನೀಡುತ್ತಿದೆ. ಅರ್ಹ ಪಿಂಚಣಿದಾರರಿಗೆ ಪಿಂಚಣಿ ಮುಂದುವರೆಯಲಿದೆ ಎಂದರು.
ಹಂದಿಜೋಗಿ ಹಟ್ಟಿಯಲ್ಲಿ 40 ಕುಟುಂಬಗಳು ಗ್ರಾಮ ಠಾಣಾ ಅಲ್ಲದ ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಿ ದ್ದಾರೆ. ಅವರಿಗೆ ನಿವೇಶನ ಹಕ್ಕುಪತ್ರ ದೊರೆತಿಲ್ಲ ಎಂಬ ಅರ್ಜಿಗೆ ನಿಯಮಾವಳಿ ಪ್ರಕಾರ ಗ್ರಾಮ ಸಭೆ ನಡೆಸಿ ಕ್ರಮ ಕೈಗೊಳ್ಳ ಲಾಗುವುದು ಎಂದು ಸ್ಪಷ್ಟನೆ ನೀಡಿದರು.
12 ಗಂಟೆಯಾದರು ಸಲ್ಲಿಕೆಯಾಗದ ಅರ್ಜಿಗಳು:
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಆಡಳಿತಾಧಿಕಾರಿ ಬಿ.ಎಸ್.ಗೌಡರ, ಹಿಂದುಳಿದ ವರ್ಗಗಳ ಇಲಾಖೆಯ ದೇವರಾಜ್, ಸಮಾಜ ಕಲ್ಯಾಣಾಧಿಕಾರಿ P.ನಟರಾಜ್, ಪಶು ವೈದ್ಯಾಧಿಕಾರಿ ಡಾ.ಉಮೇಶ್, ಬೀರೂರು ಉಪತಹಸೀಲ್ದಾರ್ ರವಿ ಕುಮಾರ್, ಆರ್.ಐ ಶ್ರೀನಿವಾಸ್ , ವಿಎ ನವೀನ್, ಹುಲ್ಲೇಹಳ್ಳಿ ಪಿಡಿಓ ಸತೀಶ್ ಎಂ.ಬಿ. ಇದ್ದರು.
ಬೀರೂರು ಹೋಬಳಿ ಹುಲ್ಲೆಹಳ್ಳಿ ಗ್ರಾಪಂ ಆವರಣದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ವನ್ನು ತಹಸೀಲ್ದಾರ್ ಪೂರ್ಣಿಮ ಉದ್ಘಾಟಿಸಿದರು. ಇಒ ಸಿ.ಆರ್.ಪ್ರವೀಣ್, ಉಪತಹಸೀಲ್ದಾರ್ ರವಿಕುಮಾರ್, ಆರ್.ಐ ಶ್ರೀನಿವಾಸ್ , ವಿಎ ನವೀನ್, ಹುಲ್ಲೇಹಳ್ಳಿ ಪಿಡಿಓ ಸತೀಶ್ ಎಂ.ಬಿ. ಸೇರಿದಂತೆ ಮತ್ತಿತರಿದ್ದರು.