ಕನ್ನಡದ ಅಭಿಮಾನ ಹೆಚ್ಚಿಸಿಕೊಳ್ಳಬೇಕು

KannadaprabhaNewsNetwork |  
Published : Nov 02, 2024, 01:27 AM IST
68 | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಮನೋರಂಜನೆ ಮತ್ತು ಸ್ವೇಚ್ಛಚಾರಕ್ಕೆ ಬಳಸಲಾಗುತ್ತಿದೆ.

-ಕನ್ನಡಪ್ರಭ ವಾರ್ತೆ ಟಿ. ನರಸೀಪುರಇತ್ತೀಚಿನ ದಿನಮಾನದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕನ್ನಡ ಭಾಷೆ ಬಳಕೆ ಗಣನೀಯವಾಗಿ ಕ್ಷೀಣಿಸುತ್ತಿದ್ದು, ಕನ್ನಡಿಗರಾದ ನಮ್ಮ ಭಾಷೆಯನ್ನು ಹೆಚ್ಚು ಪ್ರೀತಿಸುವುದರೊಂದಿಗೆ ಎಲ್ಲ ಕಡೆ ಕನ್ನಡ ಭಾಷೆಯನ್ನು ಬಳಸಬೇಕು ಎಂದು ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಸಲಹೆ ನೀಡಿದರು.ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಮನೋರಂಜನೆ ಮತ್ತು ಸ್ವೇಚ್ಛಚಾರಕ್ಕೆ ಬಳಸಲಾಗುತ್ತಿದೆ. ರಾಜ್ಯದ ಪ್ರಮುಖ ನಗರಳಾದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ಕೀಳಿರಿಮೆ ಎಂದು ಭಾವಿಸಲಾಗುತ್ತಿದೆ. ಹಾಗಾಗಿ ಕನ್ನಡಿಗರು ಎಲ್ಲ ಕ್ಷೇತ್ರದಲ್ಲೂ ಹಿಂಜರಿಕೆ ಇಲ್ಲದೆ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಸಲಹೆ ನೀಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಮಾತನಾಡಿ, ಪುರಾತನ ಭಾಷೆಗಳಲ್ಲಿ ಕನ್ನಡವೂ ಒಂದು. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಭಾಷೆ ಲಿಪಿಗಳ ರಾಣಿ ಎಂಬ ಬಿರುದು ಪಡೆದುಕೊಂಡಿದೆ. ಹಾಗಾಗಿ ಕನ್ನಡ ಭಾಷೆ ಕಲಿಯಲು ಮತ್ತು ಮಾತನಾಡಲು ನಿರರ್ಗಳ ಭಾಷೆ. ಹಾಗಾಗಿ ಅನ್ಯ ದೇಶಿಕರು ಕೂಡ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿತು ಮಾತನಾಡುತ್ತಿದ್ದಾರೆ ಎಂದರು.ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಮತ್ತು ಕವಿಗೋಷ್ಠಿಯಲ್ಲಿ ವಿಜೇತರಾದ ವಿವಿಧ ಶಾಲೆಯ ಮಕ್ಕಳನ್ನು ಗೌರವಿಸಲಾಯಿತು. ವಿವಿಧ ಶಾಲೆಯ ಮಕ್ಕಳು ನೃತ್ಯ ಕಾರ್ಯಕ್ರಮ ನೀಡಿ ಸಭಿಕರನ್ನು ರಂಜಿಸಿದರು.ಪುರಸಭೆ ಅಧ್ಯಕ್ಷ ವಸಂತ ಶ್ರೀಕಂಠ, ತಾಪಂ ಇಒ ಪಿ.ಎಸ್. ಅನಂತರಾಜು, ಎಚ್.ಸಿ. ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ. ಕೆ. ವಸಂತಕುಮಾರಿ, ಆರ್. ಹೇಮಂತ್ ರಾಜ್, ಸಹಾಯಕ ನಿರ್ದೇಶಕ ಸುಹಾಸಿನಿ, ಶಾಂತ, ಶ್ವೇತ, ಲಿಂಗರಾಜು, ಕೋಮಲ, ರಾಜಣ್ಣ, ಪಂಚಲಿಂಗಪ್ಪ, ರಾಮೇಗೌಡ, ಕೈಲಾಸ ಮೂರ್ತಿ,ತಾ. ಪಂ. ಯೋಜನಾಧಿಕಾರಿ ರಂಗಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಟಿ. ಎಂ. ನಂಜುಂಡಸ್ವಾಮಿ, ಸದಸ್ಯರಾದ ಬಾದಾಮಿ ಮಂಜು, ಪ್ರೇಮ ಮರಯ್ಯ, ತುಂಬಲ ಪ್ರಕಾಶ್, ಗ್ರೇಡ್ -2 ತಹಸೀಲ್ದಾರ್ ರಾಜಾಕಾಂತ್, ತಾಲೂಕು ಬಾಬು ಜಗಜೀವನ್ ರಾಂ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ಕಾರ್ಮಿಕ ಸಂಘದ ಆಲಗೂಡು ಪುಟ್ಟಮಲ್ಲಯ್ಯ, ತಾಪಂ ಸದಸ್ಯರಾದ ರಾಮಲಿಂಗಯ್ಯ, ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ್, ನಿಂಗರಾಜು, ಡಾ. ಪ್ರದೀಪ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...