ಹಿಮಾಚಲದಲ್ಲಿ ಟೇಕ್ವಾಂಡೋ ಸ್ಪರ್ಧೆ ರಾಜ್ಯದ ಅಕ್ಕ-ತಮ್ಮಗೆ ಪದಕಗಳು

KannadaprabhaNewsNetwork |  
Published : Jun 08, 2026, 01:15 AM IST
ಪೋಟೋ 7 : ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ   ಸಾಧನೆ ಮಾಡಿದ ಅಕ್ಕತಮ್ಮ | Kannada Prabha

ಸಾರಾಂಶ

ದಾಬಸ್‍ಪೇಟೆ: ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ ಅಕ್ಕ-ತಮ್ಮ ಇಬ್ಬರು ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ

ದಾಬಸ್‍ಪೇಟೆ: ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ ಅಕ್ಕ-ತಮ್ಮ ಇಬ್ಬರು ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಅಂತಾರಾಷ್ಟ್ರೀಯ ಟೇಕ್ವಾಂಡೋ ಫೆಡೆರೇಷನ್ ಆಫ್ ಇಂಡಿಯಾದಿಂದ ಹಿಮಾಚಲಪ್ರದೇಶದ ಡಾಲೋಸಿಯಲ್ಲಿ ನಡೆದ 35ನೇ ನಾರ್ತ್ ಈಸ್ಟ್ ಟೇಕ್ವಾಂಡೋ ಚಾಂಪಿಯನ್‍ಶಿಪ್ ಹಾಗೂ ಮಾರ್ಷಲ್ ಆಟ್ರ್ಸ್ ಸ್ಪರ್ಧೆಯಲ್ಲಿ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೆಹಳ್ಳಿಯ 12ನೇ ತರಗತಿಯ ಸೌಜನ್ಯ ಮಂಜುನಾಥ್ 2 ಬೆಳ್ಳಿ ಮತ್ತು 1 ಕಂಚು ಪಡೆದರು.

ಅದೇ ರೀತಿ, ಈಕೆಯ ತಮ್ಮ 10ನೇ ತರಗತಿಯ ಶಶಾಂಕ್ ಮಂಜುನಾಥ 4 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ರವಿಶಂಕರ್ ವಿದ್ಯಾಮಂದಿರ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಕೊಡಗಿಹಳ್ಳಿಯ ಸೌಜನ್ಯ ಮಂಜುನಾಥ್ ಹಾಗೂ ಶಶಾಂಕ್ ಮಂಜುನಾಥ್ ನಿರಂತರ ಪರಿಶ್ರಮದ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದು, ಅಕ್ಕ-ತಮ್ಮನ ಈ ಸಾಧನೆ ಕಂಡು ಶಾಲಾ ಆಡಳಿತ ಮಂಡಳಿ, ಮುಖಂಡರು, ಪೋಷಕರು ಹಾಗೂ ಪೋಷಕರಾದ ತಂದೆ ಮಂಜುನಾಥ್ ಮತ್ತು ತಾಯಿ ಕವಿತಾ, ಸ್ನೇಹಿತರು ಸಂತೋಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಪೋಟೋ 7 :

ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಸಾಧನೆ ಮಾಡಿದ ಅಕ್ಕತಮ್ಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಕ್ ಉಗ್ರರ ಜತೆ ಮತ್ತಷ್ಟು ಜನಕ್ಕೆ ನಂಟು ಸಾಧ್ಯತೆ!: ರಾಜನಹಳ್ಳಿ ಶಿವಕುಮಾರ ಶಂಕೆ
ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಸಲೀಂಗೆ ಸಚಿವ ಸ್ಥಾನಕ್ಕೆ ಒತ್ತಾಯ