ಸಾಲಬಾಧೆಗೆ ಟೈಲರ್‌ ನೇಣಿಗೆ ಶರಣು

KannadaprabhaNewsNetwork |  
Published : Feb 07, 2026, 04:15 AM IST
ಜಮಖಂಡಿ ಆತ್ಮ ಹತ್ಯೆಗೆ ಶರಣಾದ ಆನಂದ ಬೆಳವಡಿ | Kannada Prabha

ಸಾರಾಂಶ

ಜಮಖಂಡಿ ನಗರದ ರಾಮೇಶ್ವರ ಕಾಲೋನಿಯ ನಿವಾಸಿ ವೃತ್ತಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾಲದಿಂದ ಮನನೊಂದು ಗುರುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ರಾಮೇಶ್ವರ ಕಾಲೋನಿಯ ನಿವಾಸಿ ವೃತ್ತಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾಲದಿಂದ ಮನನೊಂದು ಗುರುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಮೇಶ್ವರ ಕಾಲೋನಿ ನಿವಾಸಿ ಆನಂದ ಅರವಿಂದ ಬೆಳವಡಿ (36) ಮೃತ ವ್ಯಕ್ತಿ. ಕಾಲೋನಿ ಸಮುದಾಯ ಭವನದ ಹತ್ತಿರದ ಅಂಗಡಿಯೊಂದರಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂದ್ದ. ಕೆಲವು ದಿನಗಳಿಂದ ಸಾಲ ಮಾಡಿಕೊಂಡು ಅದನ್ನು ಮರಳಿಸಲಾಗದೆ ಆತ್ಮಹತ್ಯೆಗೆ ಮೊರೆ ಹೋಗಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಅನೀಲ ಕುಂಬಾರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ