ಕನ್ನಡಪ್ರಭ ವಾರ್ತೆ ವಿಜಯಪುರ
ಇಂಧನ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಹತ್ತಾರು ಸಮಸ್ಯೆಗಳು ಹಾಗೆ ಉಳಿದಿವೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಬಾರಿ ಎಲ್ಲರಿಗೂ ಮನವಿ ಪತ್ರ ನೀಡಿದ್ದರೂ ಯಾವ ಪ್ರಯೋಜನವಾಗಿಲ್ಲ. ಹೀಗಾಗಿ ಸೆ.15 ರಂದು ಅಂಬೇಡ್ಕರ್ ಸರ್ಕಲ್ ಹತ್ತಿರ ಜೆನ್ ಝಿ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಇಂಧನ ಸಚಿವರು, ನಗರಾಭಿವೃದ್ಧಿ ಸಚಿವರು ಬಂದು ಸಮಸ್ಯೆ ಬಗೆಹರಿಸುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಗುಡುಗಿದರು.ನಮ್ಮ ಹಲವಾರು ಬೇಡಿಕೆಗಳಲ್ಲಿ ಅತೀ ಪ್ರಮುಖವಾದ ರಾಜ್ಯದ ವಿದ್ಯುತ್ ಗ್ರಾಹಕರು ಕಟ್ಟಿದ, ಕಟ್ಟುವ ಮನೆಗಳಿಗೆ ಹಾಗೂ ವ್ಯಾಪಾರ ಮಾಡುವ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ನಿರಂತರವಾಗಿ ನೀಡುವುದು, ಪ್ರತಿ ವರ್ಷ ಎಎಸ್‌ಡಿ ಹಣ ಕಟ್ಟಿಸಿಕೊಳ್ಳುತ್ತಿದ್ದು ಅದನ್ನು ಐಎಸ್ಡಿ ಹೆಡ್ಡಿನಲ್ಲಿ ಕಟ್ಟಿಸಿಕೊಳ್ಳಬೇಕು, ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಡಿಪಾಸಿಟ್ ಹಣ ಕಡಿಮೆ ಮಾಡಬೇಕು. ಬರಗಾಲ ಇರುವುದರಿಂದ ರೈತರಿಗೆ ಅನುಕೂಲವಾಗಲು ರೈತರ ಪಂಪ್‌ಸೆಟ್ ದಂಡದ ಹಣವನ್ನು ₹15,000ದಿಂದ ಶೂನ್ಯಕ್ಕಿಳಸಬೇಕು. ರೈತರ ಟಿಸಿ ವಿದ್ಯುತ್ ಪರಿವೀಕ್ಷಕರ ಫೀಯನ್ನು ₹3100-10,500 ಏರಿಸಿದ್ದು, ಅದನ್ನು ಪುನಃ ₹3100ಕ್ಕೆ ಇಳಿಸಬೇಕು. ಯಾವುದೇ ವಿದ್ಯುತ್ ಪರಿವೀಕ್ಷಕರ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಿದ ಮೇಲೆ ಅದಕ್ಕೆ ತುಂಬಿರುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳದೇ ಕೆಲಸ ಮುಗಿಯುವವರೆಗೆ ಅದರಲ್ಲಿಯೇ ಇರಬೇಕು ಅಥವಾ ಆ ಕೆಲಸ ಆಗದಿದ್ದರೇ ಅರ್ಜಿದಾರರಿಗೆ ಪುನಃ ಹಣ ನೀಡಬೇಕು. ಎಲ್ಲ ವಿದ್ಯುತ್ ಕಂಪನಿಗಳ ಅಧಿಕಾರಿಗಳ ಸಿಗ್ನೇಚರ್‌ನ್ನು ಡಿಜಿಟಲ್ ಆಗಿ ಪರಿವರ್ತಿಸಬೇಕು, 2024ರ ಡಿ.7 ರಿಂದ ಇಲ್ಲಿಯವರೆಗೆ ಹೊಸದಾಗಿ ಪಡೆದಿರುವ ವಿದ್ಯುತ್ ಸಂಪರ್ಕಗಳಿಗೆ ಉಚಿತ ಗೃಹಜ್ಯೋತಿ ಯೋಜನೆ ನೀಡಬೇಕು, ಗೃಹಜ್ಯೋತಿ ಯೋಜನೆಗೆ 2022 -23ರ ಸರಾಸರಿ ಯೂನಿಟ್‌ಗಳನ್ನು ತೆಗೆದುಕೊಳ್ಳುತ್ತಿದ್ದು ವರ್ಷಗಳು ಬದಲಾದಂತೆ ಸರಾಸರಿ ಯೂನಿಟ್‌ಗಳು ಬದಲಾವಣೆಯಾಗಬೇಕು, ಎಲ್ಲ ವಿದ್ಯುತ್ ಗುತ್ತಿಗೆದಾರರ ಕಾಮಗಾರಿಗಳ ಬಿಲ್‌ನ್ನು ಬೇಗನೆ ನೀಡಬೇಕು ಹಾಗೂ ಇಂಧನ ಇಲಾಖೆಯ ಉದ್ಯೋಗಿಗಳ ಮೆಡಿಕಲ್ ಬಿಲ್ ಹಾಗೂ ಲೀವ್ ಸೆರಂಡರ್ ಹಣವನ್ನು ಬೇಗನೆ ನೀಡಬೇಕು ಎಂದು ಆಗ್ರಹಿಸಿದರು.
ನಗರಾಭಿವೃದ್ಧಿ ಇಲಾಖೆಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ:
-ಮಲ್ಲಿಕಾರ್ಜುನ್ ಬಿ ಕೆಂಗನಾಳ, ರಾಜ್ಯಾಧ್ಯಕ್ಷರು ರೈತ ಭಾರತ ಪಕ್ಷ ಕರ್ನಾಟಕ.