ಹುಬ್ಬಳ್ಳಿ:
ನಗರದಲ್ಲಿ ಮಂಗಳವಾರ ನಗರದ ಚೆನ್ನಮ್ಮ ವೃತ್ತದಿಂದ ಮಿನಿವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆಟೋ ಚಾಲಕರು, ಪರವಾನಗಿ ಪಡೆಯದೆ ಓಡಾಡುವ ಖಾಸಗಿ ಕಂಪನಿಗಳ ವಾಹನ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, ಅಗತ್ಯ ವಸ್ತು, ಬಿಡಿ ಭಾಗಗಳು, ಪೆಟ್ರೋಲ್-ಡೀಸೆಲ್ ಹಾಗೂ ಎಲ್‌ಪಿಜಿ, ಸಿಎನ್‌ಜಿ ಬೆಲೆ ಏರಿಕೆಯಿಂದ ಆಟೋ ಚಾಲಕರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಾಲ ಪಡೆದು ಆಟೋ ರಿಕ್ಷಾ ಓಡಿಸುವ ಕೆಲಸ ಮಾಡುತ್ತಿದ್ದು, ಕಂತು ತುಂಬಲಾಗದೆ ಸಾಕಷ್ಟು ತೊಂದರೆಯಾಗಿದೆ. ಇಂತಹ ಸಮಯದಲ್ಲಿ ಖಾಸಗಿ ಕಂಪನಿ ವಾಹನಗಳ ಓಡಾಟದಿಂದ ಆಟೋ ಚಾಲಕರಿಗೆ ಮತಷ್ಟು ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡರು.ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಜೀವನ ಉತ್ಕುರಿ, ದಾವಲಸಾಬ್ ಕುರಹಟ್ಟಿ, ಮುರಳಿ ಇಂಗಳಹಳ್ಳಿ, ಲೋಕೇಶ ಚಿಕ್ಕಮಗಳೂರ, ಪರಶುರಾಮ ಪೂಜಾರ, ರಫೀಕ ಕುಂದಗೋಳ, ರಾಜೇಶ ಬಿಜವಾಡ, ದಾವೂದ ಅಲಿಶೇಖ, ಮಹಾವೀರ ಬಿಲಾನ ಸೇರಿ ಹಲವರಿದ್ದರು.