ಕನ್ನಡಪ್ರಭ ವಾರ್ತೆ ಬೀಳಗಿಗ್ರಾಮೀಣ ಭಾಗದಲ್ಲಿನ ರೈತಾಪಿ ಜನರು ಬಡವರ, ಕೂಲಿ ಕಾರ್ಮಿಕರು ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಸ್ವಗ್ರಾಮದಲ್ಲಿ ವೈದ್ಯಕೀಯ ಎಲ್ಲ ಮೂಲಭೂತ ಸೌಭ್ಯವುಳ್ಳ ಹೈಟೆಕ್ ಆಸ್ಪತ್ರೆಯಲ್ಲಿ ಜನವರಿ 31ರವರೆಗೆ ಉಚಿತ ಆರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಾಡಗಂಡಿಯ ಎಸ್.ಆರ್.ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಆವರು ಮಾತನಾಡಿದರು.ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕನಸು ಮತ್ತು ಮಾಜಿ ರಾಷ್ಟ್ರಪತಿ ಎಪಿಜಿ ಡಾ.ಅಬ್ದುಲ್ ಕಲಾಂ ಅವರ ಪುರಿಕಲ್ಪನೆಯಂತೆ ಪಟ್ಟಣಗಳ ಜನರು ಹಳ್ಳಿಯುತ್ತ ಮುಖ ಮಾಡಬೇಕೆನ್ನುವ ಉದ್ದೇಶದಿಂದ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ, ಅಂತಾರಾಷ್ಟ್ರೀಯ ಶಾಲೆ, ಸಕ್ಕರೆ ಕಾರ್ಖಾನೆ, ಸಹಕಾರಿ ಕ್ಷೇತ್ರದ ವಿವಿಧ ಬ್ಯಾಂಕ್‌ಗಳು ತೆರೆಯಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಪ್ರೀತಿ, ವಿಶ್ವಾಸವು ಪಟ್ಟಣಗಳಲ್ಲಿ ಪಡೆಯಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ ಜನರಿಗೆ ಒಂದು ಒಳ್ಳೆಯ ಆರೋಗ್ಯ ಸೇವೆ ಸಿಗಲಿ ಎನ್ನುವ ಉದ್ದೇಶದಿಂದ ಈ ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯನಿರ್ವಹಿಸುವ ಎಲ್ಲ ವೈದ್ಯರು ತಮ್ಮ ವೈಧ್ಯಕಿಯ ವೃತ್ತಿಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಈಗಾಗಲೇ ಸಾಕಷ್ಟು ಉಚಿತ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲಾಗಿದೆ. ಅಲ್ಲದೇ ನಮ್ಮ ಆಸ್ಪತ್ರೆಯ ವೈದ್ಯರ ತಂಡವು ಪ್ರತಿಯೊಂದು ಗ್ರಾಮದಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಿದ್ದು ನನಗೆ ತೃಪ್ತಿ ತಂದಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ ಮಾತನಾಡಿ, ಉತ್ತರ ಕರ್ನಾಟಕದ ಜನರ ಕನಸು ನನಸು ಮಾಡಿರುವ ಈ ಭಾಗದ ಭಗೀರಥ ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಸಾಹೇಬರ ಆಸ್ಪತ್ರೆಯಲ್ಲಿ ಅನುಭವಿ ತಜ್ಞ ವೈದ್ಯರು 24x7 ಸೇವೆ ಲಭ್ಯ ಇದ್ದು, ಪ್ರತಿಯೊಂದು ಉಚಿತ ಆರೋಗ್ಯ ತಪಾಸಣೆಯಲ್ಲಿ ತೊಡಗಿದ ರೋಗಿಗಳಿಗೆ ಔಷಧೋಪಚಾರ ಮೆಡಿಷನ್ ಉಚಿತವಾಗಿ ವಿತರಣೆ ಮಾಡಲಾಗಿದೆ. ಇದರಿಂದ ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.ಮಧುಮೇಹ, ಸ್ತ್ರೀ ರೋಗ ಪ್ರಸೂತಿ, ಶಸ್ತ್ರಚಿಕಿತ್ಸೆ, ಕೀಲು ಮೂಳೆ ವಿಭಾಗ, ಚಿಕ್ಕ ಮಕ್ಕಳ ವಿಭಾಗ, ದಂತ ವಿಭಾಗ, ನೇತ್ರ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ಸುಸಜ್ಜಿತ ಶಸ್ತ್ರ ಚಿಕಿತ್ಸೆ, ರಕ್ತ ಭಂಡಾರ, ತುರ್ತು ವಾಹನ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಪ್ರತಿ ಹಳ್ಳಿಯಿಂದ ಪ್ರತಿದಿನ 1200 ಹೆಚ್ಚು ರೋಗಿಗಳ ತಪಾಸಣೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಈ ಹೈಟೆಕ್ ಆಸ್ಪತ್ರೆಯಿಂದ ಈ ಭಾಗದ ಜನರಿಗೆ ಉಪಯೋಗವಾಗುತ್ತಿದೆ ಎಂದರು.
ಆಸ್ಪತ್ರೆ ಡೀನ್ ಡಾ.ಧರ್ಮರಾಯ ಇಂಗಳೆ, ವೈದ್ಯಕೀಯ ಅಧೀಕ್ಷಕ ಡಾ.ವಿಜಯಾನಂದ ಹಳ್ಳಿ, ಡಾ.ರಾಘವೇಂದ್ರ ಪಾಟೀಲ, ಹಯಾತಿ ಬಿ.ಮೆರಾಸಾಬ, ಜಿ.ಎನ್.ನಿರಲಕೇರಿ ಹಾಗೂ ಇನ್ನೂ ಅನೇಕರು ಇದ್ದರು.