ಬೇಸಿಗೆಯಲ್ಲಿ ಆರೋಗ್ಯ ಕಾಳಜಿ ವಹಿಸಿ: ಶಿವಣ್ಣಗೌಡ

KannadaprabhaNewsNetwork |  
Published : Mar 11, 2024, 01:17 AM IST
ಪೋಟೋ 10ಮಾಗಡಿ1: ಮಾಗಡಿ ತಾಲೂಕಿನ ಅಗಲಕೋಟೆ ಹ್ಯಾಂಡ್ ಪೋಸ್ಟ್ನ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಕೆಂಪೇಗೌಡ ರೈತ ಸಂಘಟನೆ ಸಂಜೀವಿನಿ ಕಲ್ಪ ಫೌಂಡೇಶನ್ ಹಾಗೂ ಸಪ್ತಗಿರಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ಮಾಗಡಿ: ಈ ಬಾರಿ ಬೇಸಿಗೆಯ ತಾಪಮಾನ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಆರೋಗ್ಯ ಕಾಳಜಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ರಾಜ್ಯ ಕೆಂಪೇಗೌಡ ರೈತರ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಾಳೇನಹಳ್ಳಿ ಶಿವಣ್ಣಗೌಡ ಹೇಳಿದರು.

ಮಾಗಡಿ: ಈ ಬಾರಿ ಬೇಸಿಗೆಯ ತಾಪಮಾನ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಆರೋಗ್ಯ ಕಾಳಜಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ರಾಜ್ಯ ಕೆಂಪೇಗೌಡ ರೈತರ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಾಳೇನಹಳ್ಳಿ ಶಿವಣ್ಣಗೌಡ ಹೇಳಿದರು.

ತಾಲೂಕಿನ ಅಗಲಕೋಟೆ ಹ್ಯಾಂಡ್ ಪೋಸ್ಟ್‌ ಬಳಿ ರಾಜ್ಯ ಕೆಂಪೇಗೌಡ ರೈತ ಸಂಘಟನೆ, ಸಂಜೀವಿನಿ ಕಲ್ಪ ಫೌಂಡೇಶನ್ ಹಾಗೂ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಹೋಗಬೇಕು. ತಾಪಮಾನ ಹೆಚ್ಚಿರುವುದರಿಂದ ನೀರು, ಎಳನೀರು, ತಂಪು ಪಾನೀಯಗಳನ್ನು ಸೇವಿಸಬೇಕು ಈಗ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳು ಬರುವುದರಿಂದ ನಿರ್ಲಕ್ಷ ಮಾಡದೆ ವೈದ್ಯರ ಸಲಹೆ ಪಡೆಯಬೇಕು ಎಂದರು.

ರಾಗಿ ಕಣ ಮಾಡುವ ರೈತರು ಧೂಳು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ರೈತರಿಗಾಗಿಯೇ ವಿಶೇಷವಾಗಿ ಶಿಬಿರ ಆಯೋಜಿಸಿದ್ದು ಮುಂದೆ ಕೂಡ ಇದೇ ರೀತಿ ಶಿಬಿರಗಳನ್ನು ಆಯೋಜಿಸಿ ರೈತರ ಪರಗಿ ನಮ್ಮ ಸಂಘಟನೆ ಕೆಲಸ ಮಾಡುತ್ತದೆ. ಬೆಂಬಲ ಬೆಲೆಯಲ್ಲಿ ರಾಗಿ ಕೊಂಡುಕೊಳ್ಳಲು ದಿನಾಂಕ ಪ್ರಕಟಣೆ ಮಾಡಬೇಕೆಂದು ಮನವಿ ಮಾಡಿದರು.

ರೈತ ಮುಖಂಡ ಚೆನ್ನೇಗೌಡ ಮಾತನಾಡಿ, ಆರೋಗ್ಯ ಚೆನ್ನಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಉಚಿತ ಶಿಬಿರಗಳು ಗ್ರಾಮೀಣರಿಗೆ ವರದಾನವಾಗಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಪ್ತಗಿರಿ ಆಸ್ಪತ್ರೆಯ ವೈದ್ಯರು ವಿವಿಧ ಕಾಯಿಲೆಗಳಿಗೆ ತಪಾಸಣೆ ಮಾಡಿದರು. ರೈತ ಸಂಘಟನೆಯ ಮುಖಂಡರಾದ ಬಾಚೇನಹಳ್ಳಿ ಮಹಾಂತೇಶ್, ಕೊಡಿಗೇಹಳ್ಳಿ ಸಾವಿತ್ರಿ, ಮುಖಂಡರಾದ ಗಂಗನರಸಿಂಹಯ್ಯ, ಬಸವರಾಜ್, ನರಸಿಂಹಮೂರ್ತಿ, ಮಹಿಳಾ ಅಧ್ಯಕ್ಷೆ ಕೋಮಲ, ಸಂಜೀವಿನಿ ಫೌಂಡೇಶನ್ ಇಂದಿರಾ ರಾಥೋಡ್, ಕಮಲ ಈಶ್ವರ್, ಮಾಗಡಿ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಸೋಮಶೇಖರ್ ಇತರರು ಭಾಗವಹಿಸಿದ್ದರು.

ಪೋಟೋ 10ಮಾಗಡಿ1:

ಮಾಗಡಿ ತಾಲೂಕಿನ ಅಗಲಕೋಟೆ ಹ್ಯಾಂಡ್ ಪೋಸ್ಟ್‌ ಬಳಿ ರಾಜ್ಯ ಕೆಂಪೇಗೌಡ ರೈತ ಸಂಘಟನೆ ಸಂಜೀವಿನಿ ಕಲ್ಪ ಫೌಂಡೇಶನ್ ಹಾಗೂ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...