ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಿ

KannadaprabhaNewsNetwork | Published : Jul 5, 2024 12:50 AM

ಸಾರಾಂಶ

ಪ್ರತಿ ಮಗುವಿಗೆ ಅಕ್ಷರ, ಅನ್ನ, ಆರೋಗ್ಯ ಅವಶ್ಯವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು

ಗಜೇಂದ್ರಗಡ: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸಂಸ್ಕಾರ ಸಂಸ್ಕೃತಿ ಮುಖ್ಯವಾಗಿದ್ದು, ಮಾನವೀಯ ಮೌಲ್ಯ ರೂಢಿಸುವ ಮೂಲಕ ಅಕ್ಷರ ಅಭ್ಯಾಸದ ಮೂಲ ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.

ಪಟ್ಟಣದ ತುಳಜಾಭವಾನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ನರ್ಸರಿ,ಎಲ್.ಕೆ.ಜಿ. ಯು.ಕೆ.ಜಿ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ ಮುದು ಮಕ್ಕಳು ತಮ್ಮ ಶೈಕ್ಷಣಿಕ ಜೀವನ ಪ್ರಾರಂಭದ ಮೊದಲು ಇಂತಹ ಧಾರ್ಮಿಕ ಕಾರ್ಯಗಳ ಮೂಲಕ ಮಾಡಿದಾಗ ಮಕ್ಕಳು ಉನ್ನತ ಸ್ಥಾನಕ್ಕೆ ಏರಲು ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿವೆ ಎಂದರು.

ಸಂಸ್ಥೆಯ ಸಂಸ್ಥಾಪಕ ಲಾಲಪ್ಪ ರಾಠೋಡ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದ ಬಗೆಗೆ ಪ್ರೀತಿ ಹುಟ್ಟಿಸುವ ಕಲಿಕೆಯು ಬದುಕಿನ ಮೊದಲ ಆದ್ಯತೆಯಾಗಬೇಕಾದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ರಾಜನಾರಾಯಣ ಪೂಜಾರ ಶಾಸ್ತ್ರೋಕ್ತ ನಡೆಸಿಕೊಟ್ಟರು ಎಂದರು.

ಕಾಲಕಾಲೇಶ್ವರ ದೇವಾಲಯದ ಅರ್ಚಕ ರಾಜನಾರಾಯಣ ಪೂಜಾರ ಮಾತನಾಡಿ, ಪ್ರತಿ ಮಗುವಿಗೆ ಅಕ್ಷರ, ಅನ್ನ, ಆರೋಗ್ಯ ಅವಶ್ಯವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವಂತೆ ಮುಂದಾಗಬೇಕು. ದೇವರ ಮೇಲೆ ಭಕ್ತಭಾವದಿಂದ ಪ್ರಾರ್ಥಿಸಿ ಅಕ್ಷರ ಅಭ್ಯಾಸ ಮಾಡಿಸುವುದು ಹಿಂದಿನಿಂದಿಲೂ ನಡೆದುಕೊಂಡ ಬಂದಿರುವ ಸಂಪ್ರದಾಯ ಆದರೆ, ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ವಿರಳ ಅದಕ್ಕಾಗಿ ಈ ಶಾಲೆಯ ಕಾರ್ಯವೂ ನಿಜಕ್ಕೂ ಶ್ಲಾಘನೀಯ ಎಂದರು.

ಈ ವೇಳೆ ಲೋಕಪ್ಪ ರಾಠೋಡ, ಬಿ.ಎಂ.ತುಗ್ಗಲದ್ದಿನಿ, ಮಹಾಂತೇಶ ಪೂಜಾರ, ವೈ.ಎಲ್.ನದಾಫ, ಮುಖ್ಯ ಶಿಕ್ಷಕಿ ರೇಖಾ ಮಾನೆ, ಮಂಜುಳಾ ಭಜೆಂತ್ರಿ, ಸಾವಿತ್ರಿ ಹಿರೇಮನಿ, ಸುನೀತಾ ಹವಾಲ್ದಾರ, ಉಮಾ ಯಂಕಚಿ, ಸರಸ್ವತಿ ರಾಠೋಡ, ಸುಮಂಗಲಾ ಗೊರವರ, ವಿಜಯಲಕ್ಷ್ಮೀ ತಾಸಿನ, ವಿದ್ಯಾ ದಾಸರ ಸೇರಿ ಇತರರು ಇದ್ದರು.

Share this article