ವಸತಿ ನಿಲಯ ಮಕ್ಕಳ ಮೇಲೆ ಕಾಳಜಿ ವಹಿಸಿ

KannadaprabhaNewsNetwork | Published : Jun 26, 2024 12:44 AM

ಸಾರಾಂಶ

ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯುವ ಮಕ್ಕಳು ಬಡವರಾಗಿದ್ದು, ಅವರ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಿ, ಸಮಾಜದ ಮುಖ್ಯವಾಹಿನಿಗೆ ಬರಲಿ ಎಂಬ ಉದ್ದೇಶದಿಂದ ಸರಕಾರ ಬಡಮಕ್ಕಳಿಗಾಗಿ ವಸತಿ ನಿಲಯಗಳನ್ನು ಪ್ರಾರಂಭಿಸಿದೆ. ವಸತಿ ನಿಲಯಗಳ ಮೇಲೆ ಸದಾ ನಿಗಾ ವಹಿಸಬೇಕು. ವಸತಿ ನಿಲಯದಲ್ಲಿರುವ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯುವ ಮಕ್ಕಳು ಬಡವರಾಗಿದ್ದು, ಅವರ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಿ, ಸಮಾಜದ ಮುಖ್ಯವಾಹಿನಿಗೆ ಬರಲಿ ಎಂಬ ಉದ್ದೇಶದಿಂದ ಸರಕಾರ ಬಡಮಕ್ಕಳಿಗಾಗಿ ವಸತಿ ನಿಲಯಗಳನ್ನು ಪ್ರಾರಂಭಿಸಿದೆ. ವಸತಿ ನಿಲಯಗಳ ಮೇಲೆ ಸದಾ ನಿಗಾ ವಹಿಸಬೇಕು. ವಸತಿ ನಿಲಯದಲ್ಲಿರುವ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ಸೋಮವಾರ ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳು ದೇವರ ಸಮಾನ. ಇವರ ಸೇವೆಯಲ್ಲಿ ದೇವರನ್ನು ಕಾಣಿ. ವಸತಿ ನಿಲಯದ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದರು.

ತಾಲೂಕಿನಾದ್ಯಂತ ವಸತಿ ನಿಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ದೂರುಗಳು ಬಂದಿವೆ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನದ ಕೋಣೆಗಳ ವ್ಯವಸ್ಥೆ ಮಾಡಬೇಕು. ಕಳಪೆಮಟ್ಟದ ಆಹಾರ ಪೊರೈಕೆ ಮಾಡಬಾರದು. ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ವಸತಿ ನಿಲಯಗಳು ಸ್ವಚ್ಛವಾಗಿಡಬೇಕು. ಗುಣಮಟ್ಟದ ಆಹಾರ ನೀಡಬೇಕು. ಸರಕಾರದ ನಿಯಮದ ಪ್ರಕಾರ ವಸತಿ ನಿಲಯದ ಮಕ್ಕಳಿಗೆ ನಿಯಮದ ಪ್ರಕಾರ ಆಹಾರ ವಿತರಣೆ ಆಗಬೇಕು ಎಂದು ಹೇಳಿದರು.

ಸಂಬಂಧಿಸಿದ ವಸತಿ ನಿಲಯದ ಮೇಲಧಿಕಾರಿಗಳು ತಾಲೂಕಿನ ಪ್ರತಿ ವಸತಿ ನಿಲಯಗಳಿಗೆ ಭೇಟಿ ನೀಡಬೇಕು. ಸಮಸ್ಯೆಗಳಿದ್ದರೆ ಬಗೆ ಹರಿಸಬೇಕು. ಹೆಚ್ಚಿನ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕು. ಸರಕಾರದ ಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸುತ್ತೇನೆ ಎಂದರು.ಮಾಡುವ ಕೆಲಸದಲ್ಲಿ ಶ್ರದ್ಧ ಇರಲಿ:

ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ಅವಧಿಯಲ್ಲಿ ಮಾಡಿದ ಸುಧಾರಣೆಗಳು ಜನರು ಮಾತನಾಡುವಂತಾಗಬೇಕು. ನಿಮ್ಮ ಮನೆಯ ಮಕ್ಕಳಿಗೆ ಕಾಳಜಿ ಮಾಡಿದ ಹಾಗೆ ವಸತಿ ನಿಲಯದ ಮಕ್ಕಳಿಗೂ ಪ್ರೀತಿಯಿಂದ ನೋಡಿಕೊಳ್ಳಬೇಕು. ಮಕ್ಕಳಲ್ಲಿಯೇ ಆನಂದ ಕಾಣಬೇಕು. ಯಾರು ನೋಡುವುದಿಲ್ಲ ಎಂದು ತಿಳಿಯಬೇಡಿ, ಯಾರೂ ನೋಡದಿದ್ದರೂ ಭಗವಂತನ ನೋಡುತ್ತಾನೆ.ದೇವರ ಬಗ್ಗೆಯಾದರೂ ಭಯ ನಿಮ್ಮಲ್ಲಿ ಇರಲಿ ಎಂದು ಹೇಳಿದರು.

ಎಸಿ ಅಬೀದ ಗದ್ಯಾಳ, ತಹಸೀಲ್ದಾರ್‌ ಬಿ.ಎಸ್‌. ಕಡಕಭಾವಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಹಾಗೂ ಬಿಸಿಎಂ ಇಲಾಖೆ ಜಿಲ್ಲಾ ಪ್ರಭಾರಿ ಉಪನಿರ್ದೇಶಕ ಪುಂಡಲೀಕ ಮಾನವರ್, ಶಿಶು ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ.ಕೆ ಚವ್ಹಾಣ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಿ.ಜೆ ಇಂಡಿ, ತಾಲೂಕು ಬಿ.ಸಿ.ಎಂ ಅಧಿಕಾರಿ ಮಹಾಂತಯ್ಯಾ ಮಠ, ತಾಲೂಕಿನ ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ವಸತಿ ನಿಲಯಗಳ ನಿಲಯ ಪಾಲಕರು ಸಭೆಯಲ್ಲಿದ್ದರು.

--

ಕೋಟ್‌

ಒಬ್ಬ ನಿಲಯಪಾಲಕನಿಗೆ ಒಂದೇ ವಸತಿ ನಿಲಯಕ್ಕೆ ನೋಡಿಕೊಳ್ಳುವುದು ಆಗುವುದಿಲ್ಲ. ಆದರೆ ಎರಡು ಮೂರು ವಸತಿ ನಿಲಯಗಳ ನಿರ್ವಹಣೆ ಹೊರಿಸಿದರೆ ಕಾರ್ಯಭಾರ ಮಾಡುವುದು ಅಸಾಧ್ಯ. ವಸತಿ ನಿಲಯದ ನಿಲಯಪಾಲರಿಗೆ ಅವರ ಮೂಲಸ್ಥಳಗಳಿಗೆ ಕಳುಹಿಸಬೇಕು.

-ಯಶವಂತರಾಯಗೌಡ ಪಾಟೀಲ ಶಾಸಕ

Share this article