ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ

KannadaprabhaNewsNetwork |  
Published : Sep 18, 2025, 01:12 AM IST
13ಐಎನ್‌ಡಿ1, ಇಂಡಿ ಪಟ್ಟಣದ ಆ್ಯಪಲ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ವಿಭಾಗದ ವಿದ್ಯಾರ್ಥಿ ನಾಯಕತ್ವ ಪದಗ್ರಣ ಸಮಾರಂಭವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಯಶಸ್ಸನ್ನು ರೂಪಿಸುವಲ್ಲಿ ನಾಯಕತ್ವದ ಗುಣಗಳು ಮಹತ್ವದ ಪಾತ್ರ ವಹಿಸುತ್ತವೆ

ಕನ್ನಡಪ್ರಭ ವಾರ್ತೆ ಇಂಡಿ

ವೇಗದ ಜಗತ್ತಿನಲ್ಲಿ ಪ್ರತಿ ವಿದ್ಯಾರ್ಥಿಯು ಸಮೃದ್ಧ ಭವಿಷ್ಯ ಹೊಂದಲು ತಮ್ಮ ಜೀವನದಲ್ಲಿ ನಾಯಕತ್ವ ಗುಣಗಳನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಯಶಸ್ಸನ್ನು ರೂಪಿಸುವಲ್ಲಿ ನಾಯಕತ್ವದ ಗುಣಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ಆ್ಯಪಲ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ವಿಭಾಗದ ವಿದ್ಯಾರ್ಥಿಗಳ ನಾಯಕತ್ವ ಪದಗ್ರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ನಾಯಕತ್ವ ಪ್ರದರ್ಶಿಸುವ ವಿದ್ಯಾರ್ಥಿಗಳು ದೇಶದ ಭವಿಷ್ಯತ್ತಿನ ನಾಯಕರಾಗಬೇಕು. ಶಾಲೆಯಲ್ಲಿ ಗುರುಗಳು ಹೇಳಿದ ಪಾಠ, ಪ್ರವಚನ ಶ್ರದ್ಧೆಯಿಂದ ಕೇಳಿ, ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಸಾಧಿಸಲು, ನಿರ್ವಹಿಸಲು ನಾಯಕತ್ವ ಗುಣಗಳು ಅನುಕೂಲವಾಗಲಿದೆ. ಜವಾಬ್ದಾರಿ, ಸಮಗ್ರತೆ, ಕಾರ್ಯ ಸಾಧ್ಯತೆ, ಸ್ಫೂರ್ತಿಯನ್ನು ನಾಯಕತ್ವ ವಹಿಸಿಕೊಳ್ಳುವುದರಿಂದ ಲಭಿಸಲಿದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆ ಶ್ರೇಯೊಭಿವೃದ್ಧಿ ಹೊಂದಲು ಆಡಳಿತ ಮಂಡಳಿಗಿಂತ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಲೆಯನ್ನು ಮೂರ್ತಿಯನ್ನಾಗಿ ಮಾಡುವ ಶಕ್ತಿ ಶಿಕ್ಷಕರಲ್ಲಿ ಇದೆ. ಶಿಕ್ಷಕರು ಶ್ರದ್ಧೆ, ನಿಷ್ಠೆ, ಭಕ್ತಿ ಇಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವು ನೀಡಬೇಕು. ಹಿಂದುಳಿದ ಗಡಿಭಾಗದಲ್ಲಿ ಕಷ್ಟಪಟ್ಟು ಆ್ಯಪಲ್‌ ಇಂಟರ್‌ ನ್ಯಾಷನಲ್‌ ಶಾಲೆ ಆರಂಭಿಸಿದ್ದು, ಶಾಲೆ ಮುಂಬರುವ ದಿನದಲ್ಲಿ ಉತ್ತರೊತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಮಕ್ಕಳನ್ನು ರಾಜಕಾರಣಿ ಆಗಬೇಕು ಎಂದು ಹೇಳಬೇಡಿ. ಇಂದು ರಾಜಕೀಯ ಕಲುಷಿತಗೊಂಡಿದೆ. ವಿರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆಯವರಂತ ಕಾಲದ ರಾಜಕಾರಣ ಇಂದು ಉಳಿದಿಲ್ಲ. ಹೀಗಾಗಿ ಮಕ್ಕಳಿಗೆ ಡಾ.ರಾಧಾಕೃಷ್ಣನ್‌, ಅಬ್ದುಲ್‌ ಕಲಾಂನಂತ ದೇಶ ಪ್ರೇಮಿಗಳಂತೆ ಆಗಬೇಕು ಎಂದು ತಿಳಿವಳಿಕೆ ನೀಡಬೇಕು ಎಂದರು. ಈ ಸಂಸ್ಥೆಗೆ ಸಾಧ್ಯವಾದಷ್ಟು ಅನುದಾನದ ಸಹಾಯ ಮಾಡುವೆ. ಕೇಂದ್ರ ಸರ್ಕಾರದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಸಾಕಷ್ಟು ಯೋಜನೆಗಳು ಇವೆ. ನನ್ನ ಗಮನಕ್ಕೆ ತಂದರೆ, ಯೋಜನೆ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಇಂಗ್ಲಿಷ್ ಶಾಲೆಯ ಜತೆಗೆ ಕನ್ನಡಕ್ಕೂ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದರು.

ಸಿಆರ್‌ಸಿ ರಮೇಶ ಬಗಲೂರ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಯಲು ಅವಕಾಶ ನೀಡುತ್ತದೆ. ಮಕ್ಕಳು ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆ ಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಧಿಕಾರ, ನಾಯಕತ್ವ ವಹಿಸುವುದು ಹೆಚ್ಚು ಮಹತ್ವ ಪಡೆದಿದೆ. ಶಾಲೆಯ ಪ್ರತಿಯೊಂದು ಚಟುವಟಿಕೆ ಹಾಗೂ ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಪುರಸಭೆ ಸದಸ್ಯರಾದ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಪ್ರಾಂಶುಪಾಲರಾದ ಸುಕನ್ಯಾ ಜವಳಿ, ಆಡಳಿತಾಧಿಕಾರಿ ಚಿದಾನಂದಗೌಡ ಬಿರಾದಾರ ವೇದಿಕೆ ಮೇಲೆ ಇದ್ದರು. ವಿಜು ಮಾನೆ, ಬತ್ತು ಸಾಹುಕಾರ ಹಾವಳಗಿ, ರಾಮಸಿಂಗ ಕನ್ನೊಳ್ಳಿ, ಸಂಜು ದಶವಂತ, ಅಶೋಕ ಅಕಲಾದಿ, ಲಾಯಪ್ಪ ದೊಡಮನ, ಶಿವು ಬಗಲಿ, ಮಲ್ಲು ವಾಲಿಕಾರ, ಸಚೀನ ಬೊಳೆಗಾಂವ, ದತ್ತಾ ಬಂಡೆನವರ, ಸಂತೋಷ ಪರಸೆನವರ, ಭಾಗೇಶ ಮಲಘಾಣ, ಮಂಜು ದೇವರ, ಸಾಗರ ಬಿರಾದಾರ, ಶಿಕ್ಷಕರು, ಸಿಬ್ಬಂದಿ, ಪಾಲಕರು ಸೇರಿ ಮೊದಲಾದವರು ಇದ್ದರು.

PREV

Recommended Stories

ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ
ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ