ಕುಡಿವ ನೀರಿನ ಅಭಾವ ಆಗದಂತೆ ಮುನ್ನೆಚ್ಚರಿಕೆ ವಹಿಸಿ

KannadaprabhaNewsNetwork | Published : Mar 19, 2025 12:30 AM

ಸಾರಾಂಶ

ಬೇಸಿಗೆ ಆರಂಭವಾಗಿದ್ದು, ಕೆಲವು ಗ್ರಾಮಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಗಮನ ಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಬೇಸಿಗೆ ಆರಂಭವಾಗಿದ್ದು, ಕೆಲವು ಗ್ರಾಮಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಗಮನ ಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳಿಗೆ ಮನವಿ ಮಾಡಿದರು.

ಅಳ್ಳಿ ಮಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಚೆರ್ಚೆ ನಡೆಸಿದ ಸದಸ್ಯರು ಸಭೆಯಲ್ಲಿ ಮಾತನಾಡಿ. ಬೇವು ದೊಡ್ಡಿ ಮತ್ತು ವಾಡೆ ದೊಡ್ಡಿ ಗ್ರಾಮಗಳಲ್ಲಿ ಬೋರ್ವೆಲ್‌ಗಳಲ್ಲಿ ನೀರು ಬತ್ತಿದ್ದು ನೀರಿನ ಸಮಸ್ಯೆ ಹೆಚ್ಚಾಗಿದೆ.

ಸದಸ್ಯ ಮಂಜು ಕಿರಣ್ ಮಾತನಾಡಿ, ಗಾಣಾಳು ಗ್ರಾಮದಿಂದ ಹುಣಸೆ ಮರದ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ದೀಪಗಳಿಲ್ಲ ರಾತ್ರಿ ವೇಳೆ ಓಡಾಡುವ ಸಾರ್ವಜನಿಕರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ತಕ್ಷಣ ಅಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಚಿರತೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಬೇಕು ಮೃತಪಟ್ಟವರಿಗೆ ಶವಸಂಸ್ಕಾರದ ಸಹಾಯಧನವನ್ನು ವಿತರಣೆ ಮಾಡಬೇಕು ಎಂದು ತಿಳಿಸಿದರು.

ಸದಸ್ಯ ಲೋಹಿತ್ ಮಾತನಾಡಿ ಬೇಸಿಗೆ ಪ್ರಾರಂಭ ವಾಗಿದ್ದು ನೀರಿನ ಅಭಾವ ಸೃಷ್ಟಿಯಾಗಿದೆ ಕೆಲವರು ನೀರನ್ನು ಅನಾವಶ್ಯಕವಾಗಿ ಪೋಲು ಮಾಡುತ್ತಿದ್ದಾರೆ ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ನೀರಿನ ಮಿತ ಬಳಕೆ ಮಾಡುವಂತೆ ಜನರಿಗೆ ಅರಿವು ಮೂಡಿಸಬೇಕು ಈ ಸ್ವತ್ತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ಜನರ ಕೆಲಸ ಕಾರ್ಯಗಳು ವಿಳಂಬ ಆಗದಂತೆ ನೋಡಿಕೊಳ್ಳಿ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕ ವಾಗಿ ಜನರಿಗೆ ತಲುಪಿದೆ ಎಂದರು.

ಸದಸ್ಯೆ ಯಲ್ಲಮ್ಮ ಮಾತನಾಡಿ, ಹಬ್ಬ ಪ್ರಾರಂಭವಾಗುತ್ತಿವೆ ಕೆಲವು ಗ್ರಾಮಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿ ಕೊಂಡು ಸ್ವಚ್ಛತೆ ಇಲ್ಲದಂತಾಗಿದೆ, ಚರಂಡಿಗಳಲ್ಲಿ ಹೂಳೆತ್ತಿಸಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.

ಪ್ರಭಾರ ಪಿಡಿಒ ಕೃಷ್ಣ ಮಾತನಾಡಿ ನೀರಿನ ಸಮಸ್ಯೆ ಇರುವ ಬೇವು ದೊಡ್ಡಿ ಮತ್ತು ವಾಡೆ ದೊಡ್ಡಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎರಡು ಬೋರ್ ವೇಲ್ ಕೊರೆಸಲಾಗಿದೆ ಅದರಲ್ಲಿ ಒಂದು ಬೋರ್ ವೆಲ್‌ನಲ್ಲಿ ಮಾತ್ರ ನೀರು ಸಿಕ್ಕಿದೆ ಇನ್ನು ಕೆಲವು ಗ್ರಾಮಗಳಲ್ಲಿ ನೀರು ಕಡಿಮೆ ಯಾಗಿದ್ದು ಅಲ್ಲೂ ಸಹ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ 2025-26ನೇ ಸಾಲಿಗೆ 318 ಕೋಟಿ ವೆಚ್ಚದ ಮುಂಗಡ ಬಜೆಟ್ ಮಂಡನೆ ಮಾಡಿ ಸದಸ್ಯರಿಂದ ಅಂಗೀಕಾರ ಪಡೆದುಕೊಂಡರು. ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯನ್ನು ರಚನೆ ಮಾಡಲಾಯಿತು.

ಸಭೆಯಲ್ಲಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಸುಜಾತ, ಸದಸ್ಯ ದೇವರಾಜು,ಲಕ್ಷ್ಮಮ್ಮ, ಜ್ಯೋತಿಬಾಯಿ ಇದ್ದರು.

Share this article