ಕನ್ನಡಪ್ರಭ ವಾರ್ತೆ ಹನೂರು
ಚೆಸ್ಕಾಂ ಎ ಇ. ಇ ರಂಗಸ್ವಾಮಿ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಬಗ್ಗೆ ನಿಮ್ಮ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಎಂ.ಡಿ ಜೊತೆ ಮಾತನಾಡಿದ್ದೇನೆ. ಅವರ ಕುಟುಂಬದವರಿಗೆ ನಿಮ್ಮ ಇಲಾಖೆ ವತಿಯಿಂದ ಸಿಗುವ ಸೂಕ್ತ ಪರಿಹಾರವನ್ನು ಸಕಾಲದಲ್ಲಿ ನೀಡಲು ಕ್ರಮ ಕೈಗೊಳ್ಳಿ. ಜೊತೆಗೆ ಅನುಕಂಪದ ಆಧಾರದ ಮೇಲೆ ಅವರ ಪತ್ನಿಗೆ ಕೆಲಸ ನೀಡಲು ಕ್ರಮ ಕೈಗೊಳ್ಳಿ ಎಂದರು.
ನಂತರ ಕುಟುಂಬದವರಿಗೆ ಸ್ವಾಂತ್ವಾನ ಹೇಳಿ ಈ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಘಟನೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ಕುಟುಂಬಕ್ಕೆ ಸೇರಬೇಕಾಗಿರುವ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಸಹ ಯಾವುದೇ ವಿಚಾರಗಳಿದ್ದರೂ ನಮ್ಮ ಗಮನಕ್ಕೆ ತನ್ನಿ ತಕ್ಷಣ ಸ್ಪಂದಿಸುವುದಾಗಿ ತಿಳಿಸಿದರುಮಳೆಗಾಲ ಸಂದರ್ಭದಲ್ಲಿ ಕೆಲಸ ನಿರ್ವಹಿಸುವ ಚೆಸ್ಕಾಂ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯುತ್ ಅವಘಡಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.