ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಯರಗೋಳ ಗ್ರಾಮದ ಕರವೇ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರೆ ಕರವೇ ಜಿಲ್ಲಾಧ್ಯಕ್ಷ ಟಿ. ಎನ್. ಭೀಮುನಾಯಕ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯ ಹಾಗೂ ಜೆ.ಜೆ.ಎಂ.ನಂತಹ ಜನಹಿತ ಯೋಜನೆಯು ಭ್ರಷ್ಟ ಅಧಿಕಾರಿಗಳಿಂದ ಹಳ್ಳ ಹಿಡಿದಿದ್ದು, ಕೂಡಲೇ ಇಂತಹ ಅಕ್ರಮಗಳ ಬಗ್ಗೆ ನಿಮ್ಮ ಗ್ರಾಮಗಳಲ್ಲಿ ಹೋರಾಟ ರೂಪಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ನೀವೆಲ್ಲರೂ ಜಾಗೃತರಾಗಿ ಅನ್ಯಾಯದ ವಿರುದ್ಧ ಧ್ವನಿಯಾಗಬೇಕಾಗಿದೆ ಎಂದು ಹೇಳಿದರು.
ಕರವೇ ಯಾದಗಿರಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ನಮ್ಮ ಸಂಘಟನೆಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕು ಅಭಿವೃದ್ಧಿ ಗ್ರಾಪಂ ಕಚೇರಿಗಳ ಅಭಿವೃದ್ಧಿಗೆ ಒತ್ತಾಯಿಸಿ ಹಾಗೂ ಇನ್ನಿತರ ವಿಷಯಗಳ ಕುರಿತು ನಾವೆಲ್ಲರೂ ಹೋರಾಟಕ್ಕೆ ಕಂಕಣ ಬದ್ಧರಾಗೋಣ ಎಂದ ಅವರು, ಭ್ರಷ್ಟ ಅಧಿಕಾರಿಗಳಿಗೆ ಕಾನೂನು ಹೋರಾಟದ ಪೆಟ್ಟು ಕೊಡಲು, ತಾವುಗಳು ಹೋರಾಟದ ರೂಪುರೇಷೆಗಳಿಗೆ ಬದ್ಧರಾಗಲೆಬೇಕೆಂದು ನೂತನ ಪದಾಧಿಕಾರಿಗಳಿಗೆ ತಿಳಿಸಿದರು.ನೂತನ ಪದಾಧಿಕಾರಿಗಳು: ಶರಣಪ್ಪ ಬಾನರ್ (ಅಧ್ಯಕ್ಷ), ಶರಣಪ್ಪ ಕೋಳಿ (ಪ್ರ. ಕಾರ್ಯದರ್ಶಿ), ಮಲ್ಲಪ್ಪ ನಾಯಕ, ದೊಡ್ಡ ಸಾಬು, (ಉಪಾಧ್ಯಕ್ಷರು), ರೆಡ್ಡೆಪ್ಪ ಬಂಡಿ, ಯಂಕಪ್ಪ ದಾಸರ್ (ಸಹ ಕಾರ್ಯದರ್ಶಿಗಳು), ಲಿಂಗಪ್ಪ ಸಂಕರೆಡ್ಡಿ, ರೆಡ್ಡೆಪ್ಪ ಚಿಕ್ಕ ಬಾನರ್, (ಸಂ.ಕಾರ್ಯದರ್ಶಿ) ಮಹೇಶ ಬಂಡಿ, ಈಶ್ವರ ಊರಮಾಳರ್, (ಪ್ರ. ಸಂಚಾಲಕರು) ಬಾಸುಮೀಯಾ ಎಲ್.ಕೆ. (ಖಜಾಂಚಿ ) ರವಿ ಮಾನೆಗಾರ, ಕೃಷ್ಣಪ್ಪ ಜಾಲಹಳ್ಳಿ, (ಸಂಚಾಲಕರು).
ಗ್ರಾಮದ ಯುವ ಘಟಕ: ಸಾಬಣ್ಣ ಬಂದಳ್ಳಿ (ಅಧ್ಯಕ್ಷರು), ಯಲ್ಲಪ್ಪ ಮುಕ್ಕಣೋರ್, ಅರುಣಕುಮಾರ ಚವ್ಹಾಣ, (ಉಪಾಧ್ಯಕ್ಷರು) ರೆಡ್ಡಿ ತಳವಾರ, (ಪ್ರ. ಕಾರ್ಯದರ್ಶಿ) ಮೋದಿನ ಸಾಬ್ ಇನಾಮ್ದಾರ, ಅಹ್ಮದ ಇನಾಮ್ದಾರ್, (ಸ.ಕಾರ್ಯದರ್ಶಿ) ಮಾರ್ತಂಡ, ಮರೆಯಪ್ಪ, (ಸಂ.ಕಾರ್ಯದರ್ಶಿ) ಸಾಬಣ್ಣ ಚೋಡಿಕೇರ್, ಶರೀಫ್ ಸಾಧಾಗರ, (ಪ್ರ. ಸಂಚಾಲಕರು) ಸೋಮು ಚವ್ಹಾಣ, ಸುನೀಲ್ ರಾಠೋಡ್, ಲಕ್ಷ್ಮಣ ಹತ್ತಿಕುಣಿ (ಸಂಚಾಲಕರು) ಜೋತೇಶ್ ದೇಸಿ (ಖಜಾಂಚಿ).ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ವೆಂಕಟೇಶ ರಾಠೋಡ, ಅರ್ಜುನ ಪವಾರ, ಅಬ್ದುಲ್ ಚಿಗಾನೂರ್, ಸುರೇಶ ಬೆಳಗುಂದಿ, ನಾಗಪ್ಪ ಗೋಪಾಳಪೂರ, ಚನ್ನಬಸ್ಸು ಯರಗೋಳ, ರಮೇಶ ಡಿ. ನಾಯಕ, ಹಾಗೂ ಹಲವು ಯರಗೋಳ ಗ್ರಾಮದ ಯುವಕರು ಕಾರ್ಯಕರ್ತರು ಇದ್ದರು.