ಕಿನ್ನಿಗೋಳಿ ಯಕ್ಷಲಹರಿ ಮತ್ತು ಯುಗಪುರುಷ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ನಡೆದ ತಾಳಮದ್ದಲೆ
ಕನ್ನಡಪ್ರಭ ವಾರ್ತೆ ಮೂಲ್ಕಿ
ಯಕ್ಷಗಾನ, ತಾಳಮದ್ದಳೆಯಿಂದ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ಧರ್ಮದ ಜಾಗೃತಿ ಮೂಡಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು. ಕಿನ್ನಿಗೋಳಿ ಯಕ್ಷಲಹರಿ ಮತ್ತು ಯುಗಪುರುಷ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ನಡೆದ ತಾಳಮದ್ದಲೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಟೀಲು ದೇವಸ್ಥಾನದ ಅರ್ಚಕ ವೇದಮೂರ್ತಿ ಲಕ್ಷ್ಮೀ ನಾರಾಯಣ ಆಸ್ರಣ್ಣ ಮಾತನಾಡಿ, ಸಿನಿಮಾವನ್ನು ಎರಡು ಅಥವಾ ಮೂರು ಬಾರಿ ನೋಡಬಹುದು. ಆದರೆ ದೇವಿ ಮಹಾತ್ಮ್ಯೆ ಯಂತಹ ಯಕ್ಷಗಾನವನ್ನು ಎಷ್ಟು ಸಾರಿ ನೋಡಿದರೂ ಬೇಡ ಆಂತ ಆಗುವುದಿಲ್ಲ. ಪ್ರತಿ ದಿನ ಹೊಸತನವಿರುತ್ತದೆ ಎಂದು ಹೇಳಿದರು.
ಯಕ್ಷ ಲಹರಿ ವತಿಯಿಂದ ಯಕ್ಷಕವಿ ನಾರಾಯಣ ಹೊಳ್ಳ ಅವರನ್ನು ಕವಿ- ಕಲಾವಿದ ನೆಲೆಯಲ್ಲಿ ಗೌರವಿಸಲಾಯಿತು. ಕಿನ್ನಿಗೋಳಿ ಪಟ್ಲ ಪೌಂಡೇಶನ್ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಶಾಸಕ ಉಮಾನಾಥ ಕೋಟ್ಯಾನ್ , ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿನಯ ಆಚಾರ್ ಹೊಸಬೆಟ್ಟು, ಉಮೇಶ್ ನೀಲಾವರ, ಶ್ರೀ ವತ್ಸ, ಅಶ್ವಥ್ ರಾವ್, ರಂಜಿತ್ ಆಚಾರ್ಯ, ಭವಿಷ್ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು. ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ದಿನಕರ ಮೆಂದ ಸಮ್ಮಾನ ಪತ್ರ ವಾಚಿಸಿದರು. ಯುಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ಸ್ವಾಗತಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ವಂದಿಸಿದರು. ಕಾರ್‍ಯದರ್ಶಿ ವಸಂತ ದೇವಾಡಿಗ ಕಾರ್‍ಯಕ್ರಮ ನಿರೂಪಿಸಿದರು. ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶಬರ ಶಂಕರ ವಿಲಾಸ , ಶಾಪಾನುಗ್ರಹ ತಾಳಮದ್ದಲೆ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.