ಕನ್ನಡಪ್ರಭ ವಾರ್ತೆ ನಂಜನಗೂಡು
ವಸತಿ ನಿಲಯದ ಧ್ಯೇಯೋದ್ದೇಶ ಸಾಕಾರಗೊಳಿಸುವ ನಿಟ್ಟಿನಲ್ಲಿ ಜನಪದ ಗೀತೆ, ಭಾವಗೀತೆ, ನೃತ್ಯ, ಪ್ರಬಂಧ, ಚರ್ಚೆ, ಆಶು ಭಾಷಣ, ರಂಗೋಲಿ ಮುಂತಾದ ಪಠ್ಯೇತರ ಚಟುವಟಿಕೆಗಳನ್ನಾಧಾರಿತ ಪ್ರತಿಭೆ ಅಭಿವ್ಯಕ್ತಿಗೊಳಿಸಲು ದಿನದ ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಲಿ ಎಂದು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್ ತಿಳಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಅವರು ಜೆಎಸ್‌ಎಸ್ ಕಾಲೇಜು ಸಮುಚ್ಛಯದ ವಸತಿ ನಿಲಯದಲ್ಲಿ ಪ್ರವೇಶ ಪಡೆದು ಪಿಯುಸಿ, ಪದವಿ ಹಾಗೂ ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಪೂರಕ ಮತ್ತು ಅಗತ್ಯವಿರುವ ಪೂರ್ಣ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಯರು ಸೌಲಭ್ಯದ ಸದುಪಯೋಗಪಡಿಸಿಕೊಂಡು ವಿದ್ಯಾಭ್ಯಾಸ ಪೂರ್ಣಗೊಳಿಸಿ ವ್ಯಕ್ತಿಯಿಂದ ವ್ಯಕ್ತಿತ್ವಗಳಾಗಿ ಪರಿವರ್ತನೆಗೊಂಡು ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಟ್ಟಿರುವ ವಿದ್ಯಾಸಂಸ್ಥೆಗೆ, ಪೋಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿ ಮತ್ತು ಯಶಸ್ಸನ್ನು ತರುವಂತಾಗಲಿ ಎಂದು ಆಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.ವಸತಿ ನಿಲಯಪಾಲಕಿ ಆರ್.ಎಂ. ಹೇಮಾ, ಗ್ರಂಥಾಲಯ ಸಹಾಯಕಿ ಎಂ. ಲತಾಮಣಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಇದ್ದರು.
ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಂಚನಾ ಮತ್ತು ಮಹೇಶ್ವರಿ ಪ್ರಾರ್ಥಿಸಿದರು, ಸೃಷ್ಟಿಗೌಡ ಸ್ವಾಗತಿಸಿದರು, ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಕಾವೇರಿ ವಂದಿಸಿದರು.ಪ್ರತಿಭಾವಂತ ಮಕ್ಕಳಿಗೆ ವಸತಿ ನಿಲಯದಲ್ಲಿನ ವೃತ್ತಿನಿರತ ಮಹಿಳೆಯರಿಂದ ಬಹುಮಾನ ವಿತರಿಸಲಾಯಿತು.