ಕನ್ನಡಪ್ರಭ ವಾರ್ತೆ ಚಿಂತಾಮಣಿ
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಕರೆಯಿಸಿ ಅವರಿಂದ ಹಿತನುಡಿಗಳನ್ನು ತಿಳಿಸಿ, ಅವರ ಮಾರ್ಗದರ್ಶನದ ಮಾತುಗಳನ್ನು ತಿಳಿದು ನೀವು ಸಹ ಹೆಮ್ಮರವಾಗಬೇಕೆಂಬ ಮಹದಾಸೆಯನ್ನು ವ್ಯಕ್ತಪಡಿಸಿದರು.
ಸಮುದಾಯ ಭವನಕ್ಕೆ ೫ ಕೋಟಿ ರು. ಅನುದಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ್ದು, ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ರವರು ಸಮುದಾಯಕ್ಕೆ ಸ್ಥಳಾವಕಾಶ ಒದಗಿಸುವ ಭರವಸೆ ನೀಡಿದ್ದಾರೆ. ಅವರಿಗೆ ಸಮುದಾಯದ ಪರ ಕೃತಜ್ಞತೆಗಳನ್ನು ತಿಳಿಸಿದರು.ಸಮುದಾಯದ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯಮ ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗಾವಕಾಶ ಒದಗಿಸುವಂತೆ ಕರೆ ನೀಡಿದರು.ಚಂದ್ರಯಾನ ೩ರ ಪರೀಕ್ಷಾ ವಿಭಾಗದ ವಿಜ್ಞಾನಿ ಸುರೇಶ್ ಕುಮಾರ್, ಸಮುದಾಯದ ವಿದ್ಯಾರ್ಥಿಗಳು ಮತ್ತು ಸಮುದಾಯದ ಏಳಿಗೆಗೆ ಒತ್ತು ನೀಡಬೇಕಾದರೆ ಶಿಕ್ಷಣ ಪಡೆಯಬೇಕೆಂದು ತಿಳಿಸಿ, ವಿದ್ಯಾರ್ಥಿಗಳನ್ನು ತಾಂತ್ರಿಕ ಯುಗದಲ್ಲಿ ಕಾರ್ಯಕ್ಷಮತೆಯನ್ನು ತೋರಬೇಕೆಂಬುದರ ಬಗ್ಗೆ ತಿಳಿಸಿದರು.
ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ಅಧ್ಯಕ್ಷ ದೇವಗಾಣಿಗ, ರಾಜ್ಯಾಧ್ಯಕ್ಷ ಕೆ.ವಿ.ರಮೇಶ್, ಕೆ.ಆರ್.ನರಸಿಂಹಯ್ಯ, ಬಾಲಾಜಿ ಬಸ್ ಮಾಲೀಕ ವೆಂಕಟಾಚಲಮಯ್ಯ, ಖಜಾಂಚಿ ಕೆಇಬಿ ಆಂಜಿನಪ್ಪ, ಕಾರ್ಯದರ್ಶಿ ಬರ್ಕಲಿ ರವೀಂದ್ರ, ಮೈಲಾಂಡ್ಲಹಳ್ಳಿ ಅಶ್ವತ್ಥನಾರಾಯಣ, ದೊಡ್ಡಬೊಮ್ಮನಹಳ್ಳಿ ನಾಗರಾಜ್, ಸೀಕಲ್ ರಾಜಕುಮಾರ್, ಐಮರೆಡ್ಡಿಹಳ್ಳಿ ಗಂಗಿಶೆಟ್ಟಿ, ಮುಖಂಡ ಮುತ್ತಕದಹಳ್ಳಿ ನಾರಾಯಣಸ್ವಾಮಿ, ಯಲ್ಲಂಪಲ್ಲಿ ರಮೇಶ್, ಅನಿಲ್, ಗೌರವಾಧ್ಯಕ್ಷರು ಸಿ.ವಿ.ರಾಮಸ್ವಾಮಿ, ಶಾಕ್ಯ ಶಾಲೆಯ ಧನುಷ್, ಶಿಲ್ಪ ಶಾಲೆಯ ನಿರ್ಮಲಮ್ಮ, ಶಾಮಿಯಾನ ರಮೇಶ್, ಎಸ್‌ಆರ್‌ಇಟಿ ಶಂಕರ, ನಿವೃತ್ತ ಶಿಕ್ಷಕಿ ಭಾಗ್ಯಮ್ಮ, ಮುಖ್ಯ ಶಿಕ್ಷಕಿ ಪ್ರೇಮಾ, ಬಿಎಸ್‌ಎನ್‌ಎಲ್ ನಿವೃತ್ತ ಇಂಜಿನಿಯರ್ ಹೇಮಾವತಿ, ಗಂಜೂರು ಕರಿಯಪ್ಪ ಉಪಸ್ಥಿತರಿದ್ದರು.