ಬಹುಮಾನಗಳನ್ನು ಬಾಚಿದ ಸುತ್ತೂರು ಜೆಎಸ್ಎಸ್ ಕ್ರೀಡಾಪಟುಗಳು

KannadaprabhaNewsNetwork |  
Published : Sep 18, 2024, 01:57 AM IST
60 | Kannada Prabha

ಸಾರಾಂಶ

ಬಾಲಕಿಯರ ವಿಭಾಗ : 800 ಮೀ. ಓಟ ರಂಜಿತ - ಪ್ರಥಮ ಸ್ಥಾನ, 1500 ಮೀ ಓಟ ಬಿ.ಡಿ. ಕಸ್ತೂರಿ ಪ್ರಥಮ ಸ್ಥಾನ, ತಟ್ಟೆ ಎಸೆತ ಇಸ್ನೇಹ ದ್ವಿತೀಯ ಸ್ಥಾನ

ಕನ್ನಡಪ್ರಭ ವಾರ್ತೆ ಸುತ್ತೂರುಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಂಜನಗೂಡಿನಲ್ಲಿ ನಡೆದ ತಾಲೂಕು ಮಟ್ಟದ ಮೇಲಾಟಗಳ 22ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಕ್ರೀಡಾಪಟುಗಳು ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗ : 100 ಮೀ. ಓಟ- ಶಿವಪ್ಪ ಪ್ರಥಮ ಸ್ಥಾನ, 1500 ಮೀ ಓಟ -ನಾಗರಾಜು ಪ್ರಥಮ ಸ್ಥಾನ, ಎತ್ತರ ಜಿಗಿತ ಯಶವಂತ್- ಪ್ರಥಮ ಸ್ಥಾನ, 3000 ಮೀ. ಓಟ ಬೋಜಪ್ಪ ಕೋಟಿ - ದ್ವಿತೀಯ ಸ್ಥಾನ, ಚಕ್ರ ಎಸೆತ, ಗುಂಡು ಎಸೆತ, ಯು.ಡಿ. ಪವನ್ - ದ್ವಿತೀಯ ಸ್ಥಾನ, 400 ಮೀ. ಓಟ ಈರಪ್ಪ -ತೃತೀಯ ಸ್ಥಾನ, 200 ಮೀ. ಓಟ- ಸಿದ್ರಾಮಯ್ಯ- ದ್ವಿತೀಯ ಸ್ಥಾನ, 4 x 400 ಮೀ. ರಿಲೇ ಓಟ- ನಾಗರಾಜು ಮತ್ತು ತಂಡ ಪ್ರಥಮ ಸ್ಥಾನ, 4x 100 ಮೀ. ರಿಲೇ ಅದ್ವೈತ್ ಮತ್ತು ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.ಬಾಲಕಿಯರ ವಿಭಾಗ : 800 ಮೀ. ಓಟ ರಂಜಿತ - ಪ್ರಥಮ ಸ್ಥಾನ, 1500 ಮೀ ಓಟ ಬಿ.ಡಿ. ಕಸ್ತೂರಿ ಪ್ರಥಮ ಸ್ಥಾನ, ತಟ್ಟೆ ಎಸೆತ ಇಸ್ನೇಹ ದ್ವಿತೀಯ ಸ್ಥಾನ, ಯಫಬಿ ಗುಂಡು ಎಸೆತ ಮತ್ತು ಭರ್ಜಿ ಎಸೆತ ದ್ವಿತೀಯ ಸ್ಥಾನ, 4x400 ಮೀ. ಓಟ ಕಸ್ತೂರಿ ಮತ್ತು ತಂಡ ಪ್ರಥಮ ಸ್ಥಾನ, 4x100 ಮೀ. ಕೀರ್ತನ ಮತ್ತು ತಂಡ ದ್ವಿತೀಯ ಸ್ಥಾನ, 3000 ಮೀ. ಓಟ ಬೋರಮ್ಮ - ದ್ವಿತೀಯ ಸ್ಥಾನ ಪಡೆದಿದ್ದಾರೆ.ಪ್ರೌಢಶಾಲಾ ವಿಭಾಗದ 14 ವರ್ಷದೊಳಗಿನ ವಿಭಾಗದಲ್ಲಿ ಶರತ್ ಪ್ರಸಾದ್ 100 ಮೀ ಓಟ ಪ್ರಥಮ, ವಿಜಯಕುಮಾರ್ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ಚಕ್ರ ಎಸೆತ ಮತ್ತು ಎತ್ತರ ಜಿಗಿತದಲ್ಲಿ ಯೋಗಿನಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯಸ್ಥರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ