ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಅವರು ಶುಕ್ರವಾರ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಫೆಬ್ರವರಿ ತಿಂಗಳಲ್ಲಿ ಬೆಳ್ಳೂರಿನಲ್ಲಿ ನಡೆದ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವಿ,ಸವಿ ನೆನಪು ಹಾಗೂ ಕ.ಸಾ.ಪ ದಿಂದ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಗೆ ಪೋಡಿಯಂ ಹಾಗೂ ಸ್ಕ್ರೀನ್ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬೆಳ್ಳೂರು ಗ್ರಾಮವು ಸಾಂಸ್ಕೃತಿಕವಾಗಿ ಅತ್ಯಂತ ಮುಂದುವರಿದ ಗ್ರಾಮವಾಗಿದೆ, 1980 ರ ದಶಕದಲ್ಲಿ ನಾಟಕ,ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಇಲ್ಲಿ ಜಾನಪದ ಕಲಾವಿದರಿದ್ದಾರೆ. 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ನನಗೆ ನೀಡಿದ್ದು ಕ.ಸಾ.ಪ ಪದಾಧಿಕಾರಿಗಳು, ಗ್ರಾಮಸ್ಥರು ನನ್ನನ್ನು ಗೌರವಯುತವಾಗಿ ನಡೆಸಿಕೊಂಡರು.ನಾನು 35 ವರ್ಷ ಅಧ್ಯಾಪಕನಾಗಿ ಕೆಲಸ ಮಾಡಿದ್ದು ಕನ್ನಡದ ವಿಷಯವನ್ನೇ ಬೋಧನೆ ಮಾಡಿದ್ದರಿಂದ ನನಗೆ ಹಲವು ಕವಿಗಳು,ಸಾಹಿತಿಗಳ ಒಡನಾಟವಿದೆ. ತಾಲೂಕು ಕ.ಸಾ.ಪ ಅಧ್ಯಕ್ಷ ಪೂರ್ಣೇಶ್ ಬರೆದ ಕವಿತೆಗಳನ್ನು ಒಟ್ಟುಗೂಡಿಸಿ ಅದನ್ನು ನವಂಬರ್ ತಿಂಗಳಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.
10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ವಕೀಲ ಎಸ್.ಎಸ್.ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಫೆಬ್ರವರಿಯಲ್ಲಿ ಬೆಳ್ಳೂರಿನಲ್ಲಿ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅರ್ಥಪೂರ್ಣವಾಗಿ ನಡೆಯಿತು. ಎಲ್ಲಾ ಗೋಷ್ಠಿಗಳು ಸಹ ಚೆನ್ನಾಗಿ ನಡೆದಿದೆ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬೆಮ್ಮನೆ ದಯಾನಂದ್ ಅವರ ಅಧ್ಯಕ್ಷೀಯ ನುಡಿಗಳಲ್ಲಿ ಸರ್ಕಾರಿ ಶಾಲೆಗಳ ಮಚ್ಚುವಿಕೆ, ಅಡಿಕೆ ಹಳದಿ ರೋಗ ಸೇರಿದಂತೆ ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕುು ಎಂಬುದೇ ಕನ್ನಡ ಸಾಹಿತ್ಯ ಪರಿಷತ್ ಉದ್ದೇಶವಾಗಿದೆ. ಪ್ರತಿಯೊಬ್ಬರೂ ದಿನ ಪತ್ರಿಕೆ, ಗ್ರಂಥಗಳನ್ನು ಓದಬೇಕು ಎಂದು ಕರೆ ನೀಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಹನಿ,ಹನಿ ಗೂಡಿದರೆ ಹಳ್ಳ ಎಂಬಂತೆ ಎಲ್ಲರ ಸಹಕಾರದಿಂದ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಗ್ರಾಮೀಣ ಪ್ರದೇಶವಾದ ಬೆಳ್ಳೂರಿನಲ್ಲಿ ಅದ್ಬುತವಾಗಿ ನಡೆದಿದೆ.ಸಮ್ಮೇಳನಕ್ಕಾಗಿ ಸ್ವಾಗತಿ ಸಮಿತಿ ಹಾಗೂ ಉಪ ಸಮಿತಿ ರಚನೆ ಮಾಡಿದ್ದು ಪ್ರತಿ ಸಮಿತಿಯವರು, ಗ್ರಾಮಸ್ಥರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಹಾಗೂ ಬೆಳ್ಳೂರು ಶಾಲೆಯವರು ಸಹಕಾರ ನೀಡಿದ್ದರು. ಸಮ್ಮೇಳನದ ಮೆರವಣಿಗೆ ಹಾಗೂ ಗೋಷ್ಠಿಗಳಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಅದ್ಬುತವಾಗಿ ಮಾತನಾಡಿ ಗೋಷ್ಠಿಗಳಿಗೆ ಹೆಚ್ಚು ಮೌಲ್ಯ ತಂದುಕೊಟ್ಟಿದ್ದರು ಎಂದು ತಮ್ಮ ನೆನಪು ಹಂಚಿಕೊಂಡರು.