ತಮಿಳುನಾಡಿನ ಯುನೈಟೆಡ್ ಸ್ಟ್ರೈಕರ್ಸ್ ತಂಡ ಪ್ರಥಮ

KannadaprabhaNewsNetwork |  
Published : Jun 10, 2026, 01:30 AM IST
9ಎಚ್ಎಸ್ಎನ್11 :  | Kannada Prabha

ಸಾರಾಂಶ

ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಮೂರು ದಿನಗಳ ಹೊನಲು ಬೆಳಕಿನ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೇರಳದ ಕೆಎಸ್‌ಇಬಿ ತಂಡವನ್ನು ಮಣಿಸಿ ತಮಿಳುನಾಡಿನ ಯುನೈಟೆಡ್ ಸ್ಟ್ರೈಕರ್ಸ್ ತಂಡ ಪ್ರಥಮ ಸ್ಥಾನ ಗಳಿಸಿತು. ಅಂತಿಮ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಆಟಗಾರರಿಗೆ ಅಭಿನಂದನೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಮೂರು ದಿನಗಳ ಹೊನಲು ಬೆಳಕಿನ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೇರಳದ ಕೆಎಸ್‌ಇಬಿ ತಂಡವನ್ನು ಮಣಿಸಿ ತಮಿಳುನಾಡಿನ ಯುನೈಟೆಡ್ ಸ್ಟ್ರೈಕರ್ಸ್ ತಂಡ ಪ್ರಥಮ ಸ್ಥಾನ ಗಳಿಸಿತು.

ಮೂರು ಸುತ್ತುಗಳಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲ ಸೆಟ್ಟಿನಲ್ಲಿ ೧೪-೨೫ ಅಂಕಗಳಿಂದ ಹಿನ್ನೆಡೆ ಅನುಭವಿಸಿದ್ದ ತಮಿಳುನಾಡು ತಂಡ ನಂತರ ೨೫- ೨೩ ಅಂಕಗಳಿಸಿ ಸಮಬಲದ ಹೋರಾಟ ನೀಡಿ ಅಂತಿಮ ಸೆಟ್ಟಿನಲ್ಲಿ ೨೫- ೨೧ ಅಂಕಗಳಿಂದ ಗೆಲುವನ್ನು ತಮ್ಮದಾಗಿಸಿಕೊಂಡಿತು.ಮೂರು ದಿನಗಳಿಂದ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ತಮ್ಮ ನೆಚ್ಚಿನ ಆಟಗಾರರ ಆಟವನ್ನು ನೋಡುವುದರ ಜೊತೆಗೆ ಆಟಗಾರರ ಹೆಸರನ್ನು ಕೂಗುತ್ತಾ ಆಟಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದುದು ಕಂಡುಬಂತು. ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಮುಂಬೈ ತಂಡ ಹಾಗೂ ಹಿರೀಸಾವೆ ಅಣ್ಣಯ್ಯ ತಂಡ ೩೦ ಅಂಕಗಳ ಒಂದು ಸೆಟ್ನಲ್ಲಿ ಮುಂಬೈ ತಂಡ ಗೆಲುವು ಸಾಧಿಸಿತು.

ಅಂತಿಮ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಆಟಗಾರರಿಗೆ ಅಭಿನಂದನೆ ತಿಳಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಆಟಗಾರರನ್ನ ಹಾಗೂ ಸಂಘಟಕರನ್ನು ತೀರ್ಪುಗಾರರನ್ನ ಅಭಿನಂದಿಸಿದರು.

ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಸಿ. ಎಸ್ ಪುಟ್ಟೇಗೌಡ ಮಾತನಾಡಿ, ರಾಜಕಾರಣದಲ್ಲಿ ದ್ವೇಷ, ಅಸೂಯೆ ಹೆಚ್ಚಿರುವ ದಿನಗಳಲ್ಲಿ, ಅವುಗಳನ್ನು ತಮ್ಮ ರಾಜಕೀಯ ಜೀವನುದ್ದಕ್ಕೂ ಮೈಗಂಟಿಸಿಕೊಳ್ಳದೇ ೫ ದಶಕಗಳಿಗೂ ಹೆಚ್ಚು ಕಾಲ ಉತ್ತಮ ರಾಜಕಾರಣಿಯಾಗಿದ್ದವರು ಮಾಜಿ ಸಚಿವ ಎಚ್.ಸಿ.ಶ್ರೀಕಂಠಯ್ಯನವರು ಎಂದು ತಿಳಿಸಿದರು.ರಾಜಕೀಯವಾಗಿ ಅವರನ್ನು ಹತ್ತಿರದಿಂದ ಬಲ್ಲವನು ನಾನು, ಅವರ ಎದುರು ಸೋತವನು, ಗೆದ್ದವನು, ನನಗೆ ರಾಜಕೀಯವಾಗಿ ಶಕ್ತಿ ಮತ್ತು ವೈಚಾರಿಕತೆ ಇದೆ ಎಂದರೇ ಅವರ ಒಡನಾಟ ಕಾರಣ. ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವವನ್ನು ಅವರ ಮೊಮ್ಮೊಗ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್ ಮತ್ತು ಎಚ್.ಎಸ್.ವಿಜಯಕುಮಾರ್ ಕುಟುಂಬ ಅತ್ಯಂತ ವಿಜೃಂಭಣೆಯಿಂದ ಮಾಡುತ್ತಿದೆ. ಅದಕ್ಕೆ ತಾಲೂಕಿನ ಪ್ರತಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಜನಸಾಮಾನ್ಯರು ಸಹಕಾರ ನೀಡಬೇಕು. ಈಗಾಗಲೇ ಯುವಕರಿಗೆ ಕೌಶಲ್ಯ ತರಬೇತಿ, ಸ್ಪೀಕಿಂಗ್ ಕೋಸ್ನಂತಹ ತರಬೇತಿ ನೀಡುತ್ತಿದ್ದು, ಯುವಕರನ್ನು ಕ್ರೀಡೆಯತ್ತ ಆಸಕ್ತಿ ಮೂಡಿಸುವ ಸಲುವಾಗಿ ರಾ?ಮಟ್ಟದ ವಾಲಿಬಾಲ್ ಪಂದ್ಯಾವಳಿ ಅಯೋಜಿಸಿದ್ದು ಅವರ ಪ್ರಯತ್ನಕ್ಕೆ ಶುಭವಾಗಲಿ ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ಮಾತನಾಡಿ, ತಾಲೂಕಿನಲ್ಲಿ ಶ್ರೀಕಂಠಯ್ಯನವರ ಮಾಡಿರುವ ಅಭಿವೃದ್ಧಿ ಕಾರ್ಯಗಳು ಶಾಶ್ವತ ನೆಲೆಗಟ್ಟಿನವು, ಸಹಕಾರ ಸಕ್ಕರೆ ಕಾರ್ಖಾನೆ, ಬಸ್‌ನಿಲ್ದಾಣ, ಕೋರ್ಟ್ ಸಂಕೀರ್ಣ, ಸರ್ಕಾರಿ ಶಾಲಾ ಕಾಲೇಜುಗಳ ಕೊಡುಗೆಗಳನ್ನು ಜನ ಎಂದೆಂದಿಗೂ ಸ್ಮರಿಸುತ್ತಾರೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯ್‌ಕುಮಾರ್, ಮತ್ತು ಕವಿಕಾ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಖಂಡರಾದ ಎಂ.ಎ. ರಂಗಸ್ವಾಮಿ, ಜೆ.ಎಂ.ರಾಮಚಂದ್ರ, ಎಂ.ಶಂಕರ್, ಎನ್.ಡಿ.ಕಿಶೋರ್, ಸಿ.ಟಿ.ಅಶೋಕ್‌ಕುಮಾರ್, ದಿಡಗ ಬಾಲಣ್ಣ, ಅಣತಿ ಆನಂದ್‌ಕುಮಾರ್, ಎಂ.ಕೆ.ಮಂಜೇಗೌಡ, ಎ.ಬಿ.ನಂಜುಂಡೆಗೌಡ, ವಿ.ಜಿ. ಅಶೋಕ್ ಉದಯ್‌ಕುಮಾರ್, ವಾಸು, ಸುಹೀಲ್ ಪಾಷಾ, ಸೇರಿ ಪುರಸಭಾ ಮಾಜಿ ಸದಸ್ಯರು, ಗ್ಯಾರೆಂಟಿ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು ಹಾಗೂ ಎಚ್.ಸಿ.ಶ್ರೀಕಂಠಯ್ಯ ಸೇವಾಸಮಿತಿ ಪದಾಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಹಾಕಲು ಕ್ರಮ ವಹಿಸಿ
ಕ್ರಾಫರ್ಡ್ ಆಸ್ಪತ್ರೆ ಸಮಗ್ರ ಅಭಿವೃದ್ಧಿಗೆ ಒತ್ತು