ಟಿಎಪಿಸಿಎಂಎಸ್ ಎ ಶ್ರೇಣಿಯ ಹೆಗ್ಗಳಿಕೆಗೆ ಪಾತ್ರವಾಗಿದೆ: ಅಧ್ಯಕ್ಷ ಬಿ.ಎಲ್.ದೇವರಾಜು

KannadaprabhaNewsNetwork | Published : Sep 24, 2024 1:46 AM

ಸಾರಾಂಶ

ಸಂಘವು 1.73 ಕೋಟಿ ರು. ಆಪದ್ಧನ ನಿಧಿಯಿದೆ. ರಸಗೊಬ್ಬರ, ಆಹಾರ ಉತ್ಪನ್ನಗಳು, ಕಬ್ಬಿಣ ಮತ್ತು ಜವಳಿ ಮಾರಾಟ, ಪಿ.ವಿ.ಸಿ ಪೈಪುಗಳ ಮಾರಾಟ, ಬ್ಯಾಂಕಿಗ್ ವ್ಯವಹಾರ, ಪೆಟ್ರೋಲ್ ಬಂಕ್ ವಹಿವಾಟು ಮತ್ತಿತರ ವ್ಯವಹಾರಗಳ ಮೂಲಕ ಸಂಘ ಪ್ರಸಕ್ತ ಸಾಲಿನಲ್ಲಿ 30,99,289 ರು. ಲಾಭ ಗಳಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯದ ಪ್ರಗತಿಪರ ಸಹಕಾರ ಸಂಘಗಳಲ್ಲಿ ಟಿಎಪಿಸಿಎಂಎಸ್ 2023-24ನೇ ಸಾಲಿಗೆ ಎ ಶ್ರೇಣಿ ಸಹಕಾರ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಸರ್ವ ಸದಸ್ಯರ ಸಹಕಾರ ಮುಖ್ಯ ಕಾರಣ ಎಂದು ಅಧ್ಯಕ್ಷ ಬಿ.ಎಲ್.ದೇವರಾಜು ಹೇಳಿದರು.

ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 2,06,81,329 ರು.ಗಳ ಚರ ಮತ್ತು ಸ್ಥಿರ ಆಸ್ತಿ ಸಂಘದಲ್ಲಿದ್ದು ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಡಿಪಾಸಿಟ್ ಹೊರತುಪಡಿಸಿ 1.20 ಕೋಟಿ ಷೇರು ಹಣವಿದೆ ಎಂದರು.

ಸಂಘವು 1.73 ಕೋಟಿ ರು. ಆಪದ್ಧನ ನಿಧಿಯಿದೆ. ರಸಗೊಬ್ಬರ, ಆಹಾರ ಉತ್ಪನ್ನಗಳು, ಕಬ್ಬಿಣ ಮತ್ತು ಜವಳಿ ಮಾರಾಟ, ಪಿ.ವಿ.ಸಿ ಪೈಪುಗಳ ಮಾರಾಟ, ಬ್ಯಾಂಕಿಗ್ ವ್ಯವಹಾರ, ಪೆಟ್ರೋಲ್ ಬಂಕ್ ವಹಿವಾಟು ಮತ್ತಿತರ ವ್ಯವಹಾರಗಳ ಮೂಲಕ ಸಂಘ ಪ್ರಸಕ್ತ ಸಾಲಿನಲ್ಲಿ 30,99,289 ರು. ಲಾಭ ಗಳಿಸಿದೆ ಎಂದರು.

ಸಂಘದ ವ್ಯವಾಹಾರಿಕ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ 60- ನಿವೇಶನ ಪಡೆದಿದ್ದು ಮತ್ತೊಂದು ನಿವೇಶನ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ರೈತರಿಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ, ಪಿವಿಸಿ ಪೈಪುಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡುತ್ತಿದೆ ಎಂದರು.

ತನ್ನ ಬ್ಯಾಂಕಿಂಗ್ ಶಾಖೆ ಮೂಲಕ ಸಂಘ ಇತರೆ ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಸಹಕಾರ ಕೇಂದ್ರ ಬ್ಯಾಂಕ್ ನೀಡುತ್ತಿರುವ ಬಡ್ಡಿ ದರಕ್ಕಿಂತ ಶೇ.01 ಹೆಚ್ಚಳದಷ್ಟು ಆಕರ್ಷಕ ಬಡ್ಡಿ ದರದಲ್ಲಿ ಫಿಕ್ಸೆಡ್ ಡಿಫಾಸಿಟ್ ಠವಣಿ ಸ್ವೀಕರಿಸುವ ಜೊತೆಗೆ ಇತರೆ ಬ್ಯಾಂಕ್‌ಗಳಿಗಿಂತ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣಗಳ ಸಾಲ ನೀಡುತ್ತಿದೆ ಎಂದರು.

ಸರ್ವ ಸದಸ್ಯರ ಸಭೆ ಆಹ್ವಾನ ಪತ್ರಿಕೆ ಸಾಕಷ್ಟು ಜನರಿಗೆ ತಲುಪಿಲ್ಲ. ಇದರ ಬಗ್ಗೆ ಅಧ್ಯಕ್ಷರು ನಿಗಾ ವಹಿಸಬೇಕು. ಕಳೆದ ಐದಾರು ವರ್ಷಗಳಿಂದ ಸಂಘಕ್ಕೆ ಕಾಯಂ ಕಾರ್ಯದರ್ಶಿಗಳ ನೇಮಕ ಮಾಡಿಲ್ಲ. ಕಾಯಂ ಕಾರ್ಯದರ್ಶಿಗಳ ನೇಮಕಕ್ಕೆ ಅಗತ್ಯ ಕ್ರಮ ವಹಿಸುವಂತೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಎಸ್.ಜಿ.ಮೋಹನ್, ನಿರ್ದೇಶಕರಾದ ಶೀಳನೆರೆ ಮೋಹನ್, ಕೆ.ಎಸ್.ದಿನೇಶ್, ಎಸ್.ಆರ್.ನವೀನ್ ಕುಮಾರ್, ಟಿ.ಬಲದೇವ್, ಎಸ್.ಮಂಜಪ್ಪ, ಐಚನಹಳ್ಳಿ ಶಿವಣ್ಣ, ಸಂಗಾಪುರ ಶಶಿಧರ್, ಟಿ.ಎಸ್.ಮಂಜುನಾಥ್, ನಾಗರಾಜು, ಸುಕನ್ಯ, ರುಕ್ಮಿಣಿ, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್ ಇದ್ದರು.

ಷೇರುದಾರ ಸದಸ್ಯರಾದ ಗೂಡೆಹೊಸಹಳ್ಳಿ ಜವರಾಯಿಗೌಡ, ನಾಟನಹಳ್ಳಿ ಗಂಗಾಧರ, ವಿಠಲಾಪುರ ಸುಬ್ಬೇಗೌಡ, ಅಗ್ರಹಾರಬಾಚಹಳ್ಳಿ ನಾಗೇಶ್, ವಕೀಲರಾದ ಎಸ್.ಸಿ.ವಿಜಯಕುಮಾರ್, ರಾಜೇಗೌಡ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದ್ದರು.

Share this article