ತಿಪಟೂರು: ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ತಮ್ಮ ವಿದ್ವತ್ ಪಾಂಡಿತ್ಯದಿಂದ ಶ್ರೀಮಠದ ಕೀರ್ತಿಯನ್ನ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕೆಲವರು ವಿನಾಕಾರಣ ಷಡ್ಯಂತ್ರ ಮಾಡುತ್ತಿದ್ದು ಅದಕ್ಕೆ ಗುರುಗಳು ಧೃತಿಗೆಡುವ ಅಗತ್ಯವಿಲ್ಲ ಎಂದು ತಾ.ಪಂ ಮಾಜಿ ಸದಸ್ಯ ಹರಿಸಮುದ್ರ ಗಂಗಾಧರ್ ತಿಳಿಸಿದರು .
ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ಸ್ಥಾಪನೆ ಮಾಡಿ, ಅಕ್ಷರ, ಅನ್ನ, ಜ್ಞಾನ ದಾಸೋಹದ ನೀಡಿರುವುದಲ್ಲದೆ ಅವರೊಬ್ಬ ಸರ್ವಜನ ಹಿತಚಿಂತಕರು. ಹಲವಾರು ಅಡೆತಡೆಗಳನ್ನ ಮೆಟ್ಟಿನಿಂತು ಅಸ್ಪೃಶ್ಯತೆ ವಿರೋಧಿ ಹೋರಾಟ, ಮದ್ಯಪಾನ ವಿರೋಧಿ ಹೋರಾಟ ಮಾಡಿ ಸಮಾಜ ಸರಿದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದ್ದಾರೆ. ಆದರೆ ಕೆಲ ಶಕ್ತಿಗಳು ಶ್ರೀಮಠ ಹಾಗೂ ಮಹಾಸ್ವಾಮೀಜಿಗಳ ವಿರುದ್ದ ಶಡ್ಯಂತ್ರ ರೂಪಿಸಿದ್ದು, ಮಠದಲ್ಲಿ ತಾತ್ಕಾಲಿಕ ಕಾರ್ಮೋಡ ಕವಿಯುವಂತೆ ಮಾಡಿದೆ. ಪೂಜ್ಯರು ಧೃತಿಗೆಡುವ ಅಗತ್ಯವಿಲ್ಲ. ಶ್ರೀಮಠದ ಭಕ್ತರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳ ಬೆಂಬಲಕ್ಕಿದ್ದು ಹಾಲ್ಕುರಿಕೆ ಶ್ರೀಮಠದ ಭಕ್ತರು ಸೇರಿದಂತೆ ಸುತ್ತಮತ್ತಲ ಗ್ರಾಮಗಳ ಸರ್ವಭಕ್ತರು ಪೂಜ್ಯರ ಬೆಂಬಲಕ್ಕಿರುತ್ತೇವೆ ಎಂದರು.
ಶ್ರೀ ಮಠದ ವಿರುದ್ದ ಗುರುಪೀಠದ ವಿರುದ್ದ ಷಡ್ಯಂತ್ರಗಳು ಹೊಸದೇನಲ್ಲ. ಲಿಂಗೈಕ್ಯ ಜಗದ್ಗುರುಗಳ ವಿರುದ್ದವೂ ಸಹ ಹಲವಾರು ಷಡ್ಯಂತ್ರಗಳು ನಡೆದಿವೆ. ಎಲ್ಲಾ ಷಡ್ಯಂತ್ರಗಳನ್ನ ಮೆಟ್ಟಿನಿಂತು ಶ್ರೀ ಶಿವಮೂರ್ತಿ ಶಿವಾಚಾರ್ಯರು ಹೊರಬರುವ ಕಾಲದೂರವಿಲ್ಲ. ಹಾಗಾಗಿ ಅವರ ಬೆಂಬಲಕ್ಕೆ ಸರ್ವಜನಾಂಗ ಹಾಗೂ ಮಠದ ಸಧ್ಬಕ್ತರು ಇರುತ್ತೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಧು ವೀರಶೈವ ಸಮಾಜದ ತಾ ಅಧ್ಯಕ್ಷ ಪಟ್ರೇಹಳ್ಳಿ ನಂಜುಂಡಪ್ಪ ಲಿಂಗೈಕ್ಯ ಶ್ರೀಗಳು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು, ನಮ್ಮ ಮಠದ ಭಕ್ತರಿಗೆ ಬರಬಾರದು ಎನ್ನುವ ದೃಷ್ಠಿಯಿಂದ ನಾಲ್ಕು ದಶಕಗಳ ಕಾಲ ರಾಜ್ಯಾದ್ಯಾಂತ ಸಂಚರಿಸಿ ಮಠದ ಭಕ್ತರಿಗೆ ದಾರಿ ದೀಪವಾಗಿದ್ದಾರೆ. ಅವರ ದಾರಿಯಲ್ಲಿಯೇ ನಡೆದು, ಗುರುಮೆಚ್ಚಿದ ಶಿಷ್ಯರಾಗಿರುವ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ವೀರಭದ್ರಪ್ಪ, ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯೋಪಾಧ್ಯಾಯ ವಿಜಯ್‌ಕುಮಾರ್, ಸ್ಥಳೀಯ ಸಲಹ ಸಮಿತಿ ಸದಸ್ಯ ವೇದಮೂರ್ತಿ, ಪ್ರಕಾಶ್‌ಹೂಲಿಹಳ್ಳಿ, ವಿಜಯ್ ಕುಮಾರ್ ಹೆಚ್.ಸಿ ಎಂ.ಜಿ ಕಾಲೇಜು ಮುಖ್ಯೋಪಧ್ಯಾಯ ವೀರಣ್ಣಗೌಡ ಮುಂತಾದವರು ಉಪಸ್ಥಿತರಿದ್ದರು.