ಪಡಿತರ ಅಕ್ಕಿಯ ಕಾಳಸಂತೆ ಮಾರಾಟ ತಡೆಗೆ ಟಾಸ್ಕ್ ಫೋರ್ಸ್ ರಚನೆ

KannadaprabhaNewsNetwork |  
Published : Jul 24, 2025, 12:47 AM IST
ಜಿಲ್ಲಾಧಿಕಾರಿ  | Kannada Prabha

ಸಾರಾಂಶ

ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಪಡಿತರ ಸಂಗ್ರಹಣೆ ಹಾಗೂ ಸಾಗಾಣಿಕೆ ಮಾಡುವ ಸಂಭವವಿರುವುದರಿಂದ ಇದನ್ನು ತಡೆಯಲು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಆದೇಶಿಸಿದ್ದಾರೆ.

ಕಾರವಾರ: ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ನೀಡುತ್ತಿರುವ ಅಕ್ಕಿಯನ್ನು ಕಾಳಸಂತೆಕೋರರು ಪಡಿತರ ಚೀಟಿದಾರರಿಂದ ಕಡಿಮೆ ದರದಲ್ಲಿ ಖರೀದಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಪಡಿತರ ಸಂಗ್ರಹಣೆ ಹಾಗೂ ಸಾಗಾಣಿಕೆ ಮಾಡುವ ಸಂಭವವಿರುವುದರಿಂದ ಇದನ್ನು ತಡೆಯಲು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಆದೇಶಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ಆರಕ್ಷಕ ಇಲಾಖೆ ಒಳಗೊಂಡಂತೆ ತಪಾಸಣೆ ತಂಡವನ್ನು ರಚನೆ ಮಾಡಿದ್ದು, ಈ ತಂಡದಲ್ಲಿ ತಾಲೂಕು ತಹಸೀಲ್ದಾರರು ಅಧ್ಯಕ್ಷರಾಗಿದ್ದು, ಆಹಾರ ಶಿರಸ್ತೇದಾರರು, ಪೊಲೀಸ್ ಉಪನಿರೀಕ್ಷಕರು, ಕಂದಾಯ ನಿರೀಕ್ಷಕರು, ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರು ಮತ್ತು ಮೋಟರ್‌ ವಾಹನ ನಿರೀಕ್ಷಕರು ಸದಸ್ಯರಾಗಿದ್ದು, ಆಹಾರ ನಿರೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಈ ತಂಡದವರು ಪಡಿತರ ಅಕ್ಕಿ ಕಾಳಸಂತೆಯಲ್ಲಿ ಸಂಗ್ರಹಣೆ ಮತ್ತು ಮಾರಾಟವಾಗುವ ಮಾರ್ಗಗಳಾದ ಅಕ್ಕಿ ಮಿಲ್. ಹೊಟೇಲ್, ಕಿರಾಣಿ ಅಂಗಡಿಗಳು, ಗೋದಾಮು ಹಾಗೂ ಸಾರಿಗೆ ಮೂಲಕ ಸಾಗಾಟವನ್ನು ತಪಾಸಣೆ ಮಾಡಬೇಕು ಮತ್ತು ತಪಾಸಣೆ ಸಂದರ್ಭದಲ್ಲಿ ಪಡಿತರ ಸಂಗ್ರಹಣೆ ಮತ್ತು ಮಾರ್ಗಾಂತರ ಮಾಡುವುದು ಕಂಡುಬಂದರೆ ಆವಶ್ಯಕ ವಸ್ತುಗಳ ಕಾಯ್ದೆ 1955 ರಡಿಯಲ್ಲಿ ಪ್ರಕರಣ ದಾಖಲು ಮಾಡಿ, ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಅವರಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''