ಕಾನೂನು ಬಾಹಿರ ಕಟ್ಟಡಗಳ ಟಾಸ್ಕ್ ಫೋರ್ಸ್ ನಿಗಾ

KannadaprabhaNewsNetwork |  
Published : Aug 13, 2025, 12:30 AM IST

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಅಭಿವೃದ್ಧಿಗಳ ಮೇಲೆ ಟಾಸ್ಕ್ ಫೋರ್ಸ್ ನಿಗಾ ವಹಿಸಿ ತಡೆಗಟ್ಟಲಿದೆ.

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಅಭಿವೃದ್ಧಿಗಳ ಮೇಲೆ ಟಾಸ್ಕ್ ಫೋರ್ಸ್ ನಿಗಾ ವಹಿಸಿ ತಡೆಗಟ್ಟಲಿದೆ.

ಡಿವೈಎಸ್ಪಿ ಸೇರಿದಂತೆ 10 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಟಾಸ್ಕ್ ಫೋರ್ಸ್‌ನಲ್ಲಿದ್ದಾರೆ. ಇವರೆಲ್ಲರು ಅನ್ಯ ಕಾರ್ಯ ನಿಮಿತ್ತ (ಓಓಡಿ) ಆಧಾರದ ಮೇಲೆ ಮಾತ್ರ ಒಂದು ವರ್ಷದ ಅವಧಿವರೆಗೆ ಷರತ್ತಿಗೊಳಪಟ್ಟು ಟಾಸ್ಕ್ ಫೋರ್ಸ್ ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈಗ ಯೋಜನಾ ಪ್ರಾಧಿಕಾರಗಳು-ನಗರಾಭಿವೃದ್ಧಿ ಪ್ರಾಧಿಕಾರಗಳು ಪಟ್ಟಣದ ಕೇಂದ್ರ ಕಾರ್ಯಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿವೆ. ಸದರಿ ಯೋಜನಾ ಪ್ರಾಧಿಕಾರಿಗಳು-ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಬೆರಳಣಿಕೆಯಷ್ಟು ತಾಂತ್ರಿಕ ಸಿಬ್ಬಂದಿಗಳ ಸೇವೆಯನ್ನು ಉಪಯೋಗಿಸಿಕೊಂಡು ಮಹಾ ಯೋಜನೆ ತಯಾರಿಕೆ - ಪರಿಷ್ಕರಣೆ ಹಾಗೂ ದೈನಂದಿನ ಕಚೇರಿ ಕಾರ್ಯಗಳನ್ನು ನಿರ್ವಹಿಸುತ್ತಿವೆ.

ಬಹು ವಿಸ್ತಾರವಾದ ಬಾಹುಳ್ಯವಿರುವ ಯೋಜನಾ ಪ್ರಾಧಿಕಾರದಲ್ಲಿ ಅನಧಿಕೃತ ಕಟ್ಟಡ - ಬಡಾವಣೆ ಅಭಿವೃದ್ಧಿಗಳನ್ನು ಭೌತಿಕವಾಗಿ ನಿಯಂತ್ರಿಸಲು ಸಾಧ್ಯವಾಗದ ಕಾರಣದಿಂದಲೇ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.

ಟಾಸ್ಕ್ ಫೋರ್ಸ್ ಕಾರ್ಯಗಳೇನು ?

ಈ ಟಾಸ್ಕ್ ಫೋರ್ಸ್ ಬೆಂಗಳೂರು ಮಹಾನಗರ ಪ್ರದೇಶದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ-ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಭೂ ಉಪಯೋಗದಲ್ಲಿನ ಬದಲಾವಣೆ ಮತ್ತು ಕಟ್ಟಡಗಳನ್ನು ಹಾಗೂ ವಲಯ ನಿಬಂಧನೆಗಳು ಮತ್ತು ಅನುಮೋದಿತ ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಲಾಗಿರುವ ಕಾನೂನು ಬಾಹಿರ ಕಟ್ಟಡಗಳನ್ನು ಗುರುತಿಸಲಿದೆ.

ಅನಧಿಕೃತ ಬಡಾವಣೆಗಳ ರಚನೆ, ಜಮೀನು ಮತ್ತು ಸ್ವತ್ತಿನಲ್ಲಿ ಅತಿಕ್ರಮ ಆಕ್ರಮಿಸುವಿಕೆ ಪ್ರಕರಣ ಗುರುತಿಸುತ್ತದೆ. ಜೊತೆಗೆ ಅನಧಿಕೃತ ಕಾರ್ಯಗಳನ್ನು ನಿಲ್ಲಿಸಲು ಕಾನೂನಿನ ಪ್ರಕಾರ ನೋಟಿಸ್ ಮತ್ತು ಆದೇಶಗಳನ್ನು ಜಾರಿಗೊಳಿಸುತ್ತದೆ. ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಗಳು ಮತ್ತು ಮಾಲೀಕರ ವಿರುದ್ಧ ಟಾಸ್ಕ್ ಫೋರ್ಸ್ ಶಿಸ್ತು ಕ್ರಮ ಕೈಗೊಳ್ಳಲಿದೆ.ಬಾಕ್ಸ್ ..................

ಟಾಸ್ಕ್ ಫೋರ್ಸ್ ನಲ್ಲಿ ಯಾರಿದ್ದಾರೆ ?

ಡೆಪ್ಯೂಟಿ ಸೂಪರಿಡೆಂಟೆಂಡ್ ಆಫ್ ಪೊಲೀಸ್ , ಪೊಲೀಸ್ ಇನ್ಸ್ ಪೆಕ್ಟರ್ , ತಹಸೀಲ್ದಾರ್ , ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಟೌನ್ ಪ್ಲಾನಿಂಗ್ , ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ,ರೆವಿನ್ಯೂ ಇನ್ಸ್ ಪೆಕ್ಟರ್ , ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ , ಫಸ್ಟ್ ಡಿವಿಸನ್ ಅಸಿಸ್ಟೆಂಟ್ , ಡಾಟಾ ಎಂಟ್ರಿ ಆಪರೇಟರ್.

ಬಾಕ್ಸ್‌.................

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಯೋಜನಾ ಪ್ರಾಧಿಕಾರಿಗಳು - ನಗರಾಭಿವೃದ್ಧಿ ಪ್ರಾಧಿಕಾರಗಳ ಯೋಜನಾ ಪ್ರದೇಶ ವಿವರಕ್ರ.ಸಂ.ಪ್ರಾಧಿಕಾರದ ಹೆಸರ ಗ್ರಾಮಗಳು ವಿಸ್ತೀರ್ಣ(ಚ.ಕಿ.ಮೀ)

1ಬೆಂ.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ294 430.69

2ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ294 772.76

3ಮಾಗಡಿ ಯೋಜನಾ ಪ್ರಾಧಿಕಾರ224 636.38

4ನೆಲಮಂಗಲ ಯೋಜನಾ ಪ್ರಾಧಿಕಾರ281 585.35

5ಆನೇಕಲ್ ಯೋಜನಾ ಪ್ರಾಧಿಕಾರ170 406.32

6ಚನ್ನಪಟ್ಟಣ ಯೋಜನಾ ಪ್ರಾಧಿಕಾರ116 440.03

7ಕನಕಪುರ ಯೋಜನಾ ಪ್ರಾಧಿಕಾರ235 1496.59

8ಹೊಸಕೋಟೆ ಯೋಜನಾ ಪ್ರಾಧಿಕಾರ265 478.48

9ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ331 1019.52

10ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ38 141.54

11ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ37 169.00

--------------------------------------------------------------------------------------------

ಒಟ್ಟು2214 6576.66

--------------------------------------------------------------------------------------------

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ