ಕಲಘಟಗಿ:
ತಾಲೂಕಿನ ಜಿನ್ನೂರು ಗ್ರಾಮದ ಬಸಮ್ಮ ವಾಲಿಕಾರ ಮೃತ ಕಾರ್ಮಿಕ ಮಹಿಳೆ. ಬುಧವಾರ ಬೆಳಗ್ಗೆ ಟಾಟಾ ಏಸ್‌ನಲ್ಲಿ ಮಹಿಳೆಯರನ್ನು ಕರೆದುಕೊಂಡು ತಾರಿಹಾಳ ಗಾರ್ಮೆಂಟ್ಸ್‌ಗೆ ತೆರಳುವಾಗ ತಡಸ ಕ್ರಾಸ್ ಬಳಿ ಹುಬ್ಬಳ್ಳಿಗೆ ತೆರಳುತ್ತಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಟಾಟಾ ಏಸ್‌ನಿಂದ ಕೆಳಗೆ ಬಿದ್ದ ಬಸಮ್ಮ ಸ್ಥಳದಲ್ಲಿಯೇ ಮೃತಪಟ್ಟರೆ ಹಲವರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ತಾಲೂಕಿನ ತಬಕದಹೊನ್ನಳ್ಳಿ, ಮಲಕನಕೊಪ್ಪ, ಮುಕ್ಕಲ, ಜಿನ್ನೂರ, ಮಡಕಿಹೊನ್ನಳ್ಳಿ ಇನ್ನುಳಿದ ಗ್ರಾಮಗಳ ಮಹಿಳೆಯರು ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದು ಎಂದು ಹೇಳಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಡ್ ಭೇಟಿ:ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ವೈದ್ಯರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಇದೇ ವೇಳೆ ತಿಳಿಸಿದ್ದಾರೆ.