ತತ್ವಪದಗಳು ಮನುಷ್ಯನನ್ನು ಆಧ್ಯಾತ್ಮಿಕ ಜೀವನಕ್ಕೆ ಹಚ್ಚುತ್ತವೆ-ಡಾ. ಗೋಡಿಹಾಳ

KannadaprabhaNewsNetwork |  
Published : Jun 18, 2024, 12:52 AM IST
ಫೋಟೊ ಶೀರ್ಷಿಕೆ: 17ಆರ್‌ಎನ್‌ಆರ್3ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ತಾಲೂಕಿನ ಹಲಗೇರಿ ಗ್ರಾಮದ ಪುಟ್ಟಯ್ಯನ ಮಠ ಆವರಣದಲ್ಲಿ ಏರ್ಪಡಿಸಲಾಗಿರುವ ನಗರದ ಬಸವ ಚೇತನ ಬಿ ಇಡಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಕಾಂತೇಶರೆಡ್ಡಿ ಗೋಡಿಹಾಳ ಮಾತನಾಡಿದರು. | Kannada Prabha

ಸಾರಾಂಶ

ತತ್ವಪದಗಳು ಮನುಷ್ಯನನ್ನು ಆಧ್ಯಾತ್ಮಿಕ ಜೀವನಕ್ಕೆ ಹಚ್ಚುತ್ತವೆ ಎಂದು ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು.

ರಾಣಿಬೆನ್ನೂರು: ತತ್ವಪದಗಳು ಮನುಷ್ಯನನ್ನು ಆಧ್ಯಾತ್ಮಿಕ ಜೀವನಕ್ಕೆ ಹಚ್ಚುತ್ತವೆ ಎಂದು ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು. ತಾಲೂಕಿನ ಹಲಗೇರಿ ಗ್ರಾಮದ ತಾಲೂಕಿನ ಹಲಗೇರಿ ಗ್ರಾಮದ ಪುಟ್ಟಯ್ಯನ ಮಠ ಆವರಣದಲ್ಲಿ ಏರ್ಪಡಿಸಲಾಗಿರುವ ನಗರದ ಬಸವ ಚೇತನ ಬಿ ಇಡಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು. ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ತತ್ವ ಪದ್ಯಗಳು ಸಹಕಾರಿಯಾಗಿವೆ. ತತ್ವಪದ ಸಾಹಿತ್ಯ ಕೇಳುವುದಕ್ಕೂ ಸಹ ಮಧುರವಾಗಿವೆ. ಅವು ಸ್ವರ ತಾಳ ಮೇಳದೊಂದಿಗೆ ಇಂದು ಭಜನಾ ಪದಗಳಾಗಿ ಮಾರ್ಪಟ್ಟಿದೆ. ಪ್ರತಿ ಹಳ್ಳಿಗಳಲ್ಲಿಯೂ ಭಜನಾ ಕಲಾವಿದರು ತತ್ವಪದಗಳನ್ನು ಜೀವಂತವಾಗಿಟ್ಟಿದ್ದಾರೆ ಎಂದರು.ಬಿಎಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಎಂ.ಡಿ. ಹೊನ್ನಮ್ಮನವರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿವೆ. ಸಮಾಜದ ಹಾಗೂ ಹೋಗುಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿವೆ ಎಂದರು.ಕಾಲೇಜಿನ ಪ್ರಾ. ಗಿರಿಜಾ ಬೇವಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಕಟ್ಟಿಮನಿ, ಪವಿತ್ರ ಯಡಚಿ, ಕೃಷ್ಣ ಯರಬಾಳ, ರೇಖಾ ಬೇಲೂರ, ಹಾಲೇಶ ಓಲೇಕಾರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ
ರಾಜಕೀಯಕ್ಕಾಗಿ ಪಿಣರಾಯಿ ಮಾತು: ಪ್ರಿಯಾಂಕ್‌ ಆಕ್ರೋಶ