ಅಭಿವೃಧ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರ: ಚಲುವ । ರಾಜಕೀಯವಾಗಿ ನೋಡದೆ ವಾಸ್ತವ ದೃಷ್ಟಿಯಲ್ಲಿ ನೋಡಿ: ಸುಮಲತಾ ಕನ್ನಡಪ್ರಭ ವಾರ್ತೆ ಮಂಡ್ಯಕೇಂದ್ರದ ತೆರಿಗೆ ಹಣ ತಾರತಮ್ಯ ವಿಚಾರವಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಏಟು-ಎದಿರೇಟು ನೀಡಿದ ಘಟನೆ ಸೋಮವಾರ ನಡೆಯಿತು.ನಗರದ ರೈಲ್ವೆ ನಿಲ್ವಾಣದ ಬಳಿ ನಡೆದ ಮಂಡ್ಯ ರೈಲು ನಿಲ್ದಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ತೆರಿಗೆ ಹಣದ ಅನುದಾನದ ವಿಚಾರ ಪ್ರಸ್ತಾಪಗೊಂಡು ಇಬ್ಬರೂ ತಮ್ಮ ಭಾಷಣದ ಮೂಲಕ ಜುಗಲ್ ಬಂಧಿ ನಡೆಸಿದರು.ಮೊದಲು ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಅಭಿವೃದ್ಧಿಗೆ ಯಾರೂ ಅವರ ಜೇಬಿನಿಂದ ತೆಗೆದು ಹಣ ಕೊಡುತ್ತಿಲ್ಲ. ಕೇಂದ್ರ-ರಾಜ್ಯಗಳೆರಡೂ ಕೊಡುತ್ತಿರುವುದು ರಾಜ್ಯದ ಜನರ ತೆರಿಗೆ ಹಣ. ಕರ್ನಾಟಕ ವಾರ್ಷಿಕ ೪.೫೦ ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದೆ. ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಅದರ ಅರ್ಧದಷ್ಟು ಹಣವೂ ಬರುತ್ತಿಲ್ಲ. ಹಾಗಾಗಿ ಕೇಂದ್ರ ರಾಜ್ಯದ ಅಭಿವೃದ್ಧಿಗೆ ಎಷ್ಟು ಹಣ ನೀಡಿದರೂ ಅದು ಕಡಿಮೆಯೇ ಎಂದರು.ಜನಸಂಖ್ಯೆಯನ್ನು ಆಧರಿಸಿ ಅನುದಾನ ನೀಡುವ ಕೇಂದ್ರ ಹಣಕಾಸು ಆಯೋಗದ ನಿಯಮಾವಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಇದು ಬದಲಾವಣೆಯಾಗಬೇಕು. ಕರ್ನಾಟಕದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಜನಸಂಖ್ಯೆ ಹೆಚ್ಚಿರುವ ಉತ್ತರ ಪ್ರದೇಶ ಕಡಿಮೆ ತೆರಿಗೆ ಪಾವತಿಸುತ್ತಿದೆ. ಜನಸಂಖ್ಯೆ ಆಧರಿಸಿ ಅನುದಾನ ನೀಡುವ ಮಾನದಂಡ ಬದಲಾಗಬೇಕಿದೆ ಎಂದು ಹೇಳಿದರು.ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಜನರ ತೆರಿಗೆ ಹಣವನ್ನು ಆದ್ಯತಾನುಸಾರ ಆರ್ಥಿಕ ದುರುಪಯೋಗವಾಗದಂತೆ ಖರ್ಚು ಮಾಡುವುದು ಕೇಂದ್ರ-ರಾಜ್ಯಸರ್ಕಾರಗಳ ಜವಾಬ್ದಾರಿ. ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು. ಎಷ್ಟು ಖರ್ಚು ಮಾಡಬೇಕು, ಎಷ್ಟು ಕಾಲಮಿತಿಯೊಳಗೆ ಮುಗಿಯಬೇಕೆಂಬ ನಿರ್ದಿಷ್ಟ ಗುರಿಯೊಂದಿಗೆ ಸರ್ಕಾರಗಳು ಆರ್ಥಿಕ ಶಿಸ್ತನ್ನು ಕಾಪಾಡುವ ಮೂಲಕ ಅಭಿವೃದ್ಧಿಗೆ ಒತ್ತಾಸೆಯಾಗಿ ನಿಲ್ಲುತ್ತವೆ. ಅದಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರಗಳ ನಡುವೆ ಪರಸ್ಪರ ಪೂರಕ ಸಹಕಾರವಿರಬೇಕು ಎಂದು ತಿಳಿಸಿದರು.ಸಚಿವರು ಮಾತು ಮುಗಿಸಿ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರ್ಗಮಿಸಿದ ಬಳಿಕ ಮಾತನಾಡಿದ ಸಂಸದೆ ಸುಮಲತಾ, ತೆರಿಗೆ ಹಣದ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಕೇಂದ್ರ ರಾಜ್ಯಗಳಿಗೆ ಅನುದಾನ ನೀಡುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೂ ಹಣ ಕೊಡುತ್ತಿದೆ. ಬೆಂ-ಮೈಸೂರು ದಶಪಥ ಹೆದ್ದಾರಿ, ರೈಲ್ವೆ ನಿಲ್ದಾಣ ನವೀಕರಣ, ಅಂಡರ್‌ಪಾಸ್, ಮೇಲ್ಸೇತುವೆಗಳು, ರೈತರು, ಮಹಿಳೆಯರು, ಯುವಕರು, ಮಕ್ಕಳಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಹಣ ನೀಡುತ್ತಿಲ್ಲವೇ. ಅದು ಅಭಿವೃದ್ಧಿಗೆ ಕೇಂದ್ರ ಕೊಡುತ್ತಿರುವ ಅನುದಾನವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.ಕೇಂದ್ರಕ್ಕೆ ಪ್ರತ್ಯೇಕವಾದ ರಾಜ್ಯಗಳೇನಿಲ್ಲ. ಅವರೂ ರಾಜ್ಯಗಳ ಅಭಿವೃದ್ಧಿಯನ್ನೇ ಗಮನದಲ್ಲಿಟ್ಟುಕೊಂಡು ಹಣ ಕೊಡುತ್ತಿದ್ದಾರೆ. ತೆರಿಗೆ ಹಣವನ್ನು ಬ್ಯಾಂಕ್‌ನಲ್ಲಿಟ್ಟುಕೊಂಡು ಬೇರೆಡೆ ಖರ್ಚು ಮಾಡಲು ಆಗುವುದಿಲ್ಲ. ಆ ಹಣವನ್ನು ಎಲ್ಲಾ ರಾಜ್ಯಗಳ ಅಭಿವೃದ್ಧಿ ಖರ್ಚು ಮಾಡುತ್ತಿದ್ದಾರೆ. ತೆರಿಗೆ ಹಣ ಎಷ್ಟು ವಾಪಾಸ್ ಬಂತು ಎನ್ನುವುದರ ಜೊತೆಗೆ ರಾಜ್ಯಕ್ಕೆ ಸಿಗುತ್ತಿರುವ ಯೋಜನೆಗಳನ್ನು ಗಮನಿಸಬೇಕು. ಪ್ರಧಾನಿ ಮೋದಿ ಎಲ್ಲ ರಾಜ್ಯದವರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಇದನ್ನು ರಾಜಕೀಯವಾಗಿ ನೋಡದೆ ವಾಸ್ತವ ದೃಷ್ಟಿಯಲ್ಲಿ ನೋಡಬೇಕು ಎಂದು ಹೇಳಿದರು. ಕಾಂಗ್ರೆಸ್ ನಾಯಕರೆದುರೇ ಜೈಶ್ರೀರಾಮ್ ಘೋಷಣೆಮಂಡ್ಯ: ಮಂಡ್ಯದ ರೈಲು ನಿಲ್ದಾಣದ ಆಧುನೀಕರಣದ ಶಂಕುಸ್ಥಾಪನಾ ಸಮಾರಂಭದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಸಂಸದೆ ಸುಮಲತಾ, ಶಾಸಕ ಪಿ.ರವಿಕುಮಾರ್ ವೇದಿಕೆಗೆ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್, ನರೇಂದ್ರ ಮೋದಿ ಕೀ ಜೈ ಎಂದು ಘೋಷಣೆ ಕೂಗಿ ಕಾಂಗ್ರೆಸ್ ನಾಯಕರಿಗೆ ಇರಿಸು-ಮುರಿಸುವ ಉಂಟುಮಾಡುವ ಪ್ರಯತ್ನ ನಡೆಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಸಚಿವ ಚಲುವರಾಯಸ್ವಾಮಿ ಪರ ಜೈಕಾರ ಮೊಳಗಿಸಿದ ಘಟನೆ ಸೋಮವಾರ ನಡೆಯಿತು.
ಸಮಾರಂಭಕ್ಕೆ ಸಚಿವ ಚಲುವರಾಯಸ್ವಾಮಿ ಆಗಮಿಸಿದ 5 ನಿಮಿಷದ ಬಳಿಕ ಸಂಸದೆ ಸುಮಲತಾ ಆಗಮಿಸಿದರು. ವೇದಿಕೆಗೆ ಗಣ್ಯರನ್ನು ಆಹ್ವಾನಿಸಿದ ಸಮಯದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್, ನರೇಂದ್ರ ಮೋದಿಜೀ ಕೀ ಜೈ ಎಂದು ಘೋಷಣೆ ಕೂಗಿದರೆ, ಅಲ್ಲೇ ಇದ್ದ ದೇವೇಗೌಡರ ಅಭಿಮಾನಿಯೊಬ್ಬ ದೇವೇಗೌಡಾ ಕೀ ಜೈ ಎಂದು ಘೋಷಣೆ ಕೂಗಿದನು. ಇದೇ ರೀತಿ ಎರಡೂ ಕಡೆಯವರು ಘೋಷಣೆ ಕೂಗಲಾರಂಭಿಸಿದ್ದರಿಂದ ಸಮಾರಂಭದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.ಆಗ ಮಧ್ಯಪ್ರವೇಶಿಸಿದ ಸಚಿವ ಎನ್.ಚಲುವರಾಯಸ್ವಾಮಿ, ನೋಡ್ರಪ್ಪ, ಇದು ಯಾವುದೋ ರಾಜಕೀಯ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮ. ಎಲ್ಲರಿಗೂ ಒಬ್ಬೊಬ್ಬರ ಮೇಲೆ ಅಭಿಮಾನ ಇರುತ್ತದೆ. ಆದರೆ, ಇದು ನಾಯಕರಿಗೆ ಅಭಿಮಾನ ತೋರುವ ಜಾಗವಲ್ಲ. ಅದಕ್ಕೆ ಬೇರೆ ಜಾಗವೇ ಇದೆ. ಅಭಿವೃದ್ಧಿ ಕೆಲಸಗಳು ನಡೆಯುವಾಗ ಈ ರೀತಿಯಾಗಿ ಘೋಷಣೆಗಳನ್ನು ಕೂಗುವುದು ಸಮಂಜಸವೂ ಅಲ್ಲ. ಮಂಡ್ಯಕ್ಕೆ ಬಂದಿರುವ ಸಂಸ್ಕಾರವೂ ಅಲ್ಲ. ಗೊಂದಲ ಸೃಷ್ಟಿಸುವುದನ್ನು ಬಿಟ್ಟು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.ಸಚಿವರ ಮಾತು ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಚಲುವರಾಯಸ್ವಾಮಿ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗಿದರು. ಅಭಿವೃದ್ಧಿಯಲ್ಲಿ ಸಕ್ಕರೆ ನಾಡಿಗೆ ಹೊಸ ರೂಪ: ರವಿಕುಮಾರ್ಮಂಡ್ಯ: ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಮಂಡ್ಯ ನಗರದ ಅಭಿವೃದ್ಧಿಗೆ ಶೀಘ್ರವೇ ಹೊಸ ರೂಪ ನೀಡುವುದಾಗಿ ಶಾಸಕ ಪಿ.ರವಿಕುಮಾರ ಹೇಳಿದರು. ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಮಂಡ್ಯ ರೈಲು ನಿಲ್ದಾಣದ ನವೀಕರಣ ಸಮಾರಂಭದಲ್ಲಿ ಮಾತನಾಡಿದ ಅವರು, ರೈಲು ನಿಲ್ದಾಣ ನವೀಕರಣ ಮಾಡಿದರಷ್ಟೇ ಸಾಲದು. ನಿಲ್ದಾಣಕ್ಕೆ ಬರುವ ರಸ್ತೆಯನ್ನೂ ದುರಸ್ತಿಪಡಿಸಬೇಕು. ಉಮ್ಮಡಹಳ್ಳಿ ಗೇಟ್‌ನಿಂದ ಕಿರಗಂದೂರು ರಸ್ತೆವರೆಗೆ 33 ಕೋಟಿ ರು. ವೆಚ್ಚದಲ್ಲಿ ರಸ್ತೆ, ಫುಟ್‌ಪಾತ್, ವೃತ್ತಗಳನ್ನು ಅಭಿವೃದ್ಧಿಪಡಿಸಲಾಗುವುದು. ೮೦ ಲಕ್ಷ ರು. ವೆಚ್ಚದಲ್ಲಿ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು. ನಗರದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ೪೦ ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಅದೀಗ ಟೆಂಡರ್ ಹಂತದಲ್ಲಿದ್ದು ಶೀಘ್ರವೇ ಕೆಲಸ ಆರಂಭವಾಗಲಿದೆ. ಮಹಾವೀರ ವೃತ್ತದಿಂದ ಪೇಟೆಬೀದಿ ಸಂಪರ್ಕಿಸುವ ಅಂಡರ್‌ಪಾಸ್ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ೧.೭೦ ಕೋಟಿ ರು. ವೆಚ್ಚದಲ್ಲಿ ಗಾಂಧಿ ಉದ್ಯಾನವನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಮಂಡ್ಯ ನಗರದ ಪ್ರಗತಿಗೆ ಹೊಸ ರೂಪ ನೀಡುವುದಾಗಿ ಹೇಳಿದರು. ಕೊನೆಯಲ್ಲಿ ರಾಮ ರಾಮೇತು..ಎಂಬ ಶ್ಲೋಕ ಹೇಳಿ, ನಾನೂ ರಾಮಭಕ್ತ. ರಾಮನನ್ನು ಪೂಜಿಸುತ್ತೇನೆ. ನಿಜವಾದ ರಾಮಭಕ್ತರು ನಾವೇ ಎಂದು ಹೇಳಿ ಮಾತಿಗೆ ಇತಿಶ್ರೀ ಹಾಡಿದರು. ನನಗೇ ಮಂಡ್ಯ ಕ್ಷೇತ್ರದ ಮೈತ್ರಿ ಟಿಕೆಟ್: ಸುಮಲತಾ ವಿಶ್ವಾಸಮೈತ್ರಿಯಲ್ಲಿ ಜೆಡಿಎಸ್ ವಿಶ್ವಾಸದಿಂದಿರುತ್ತೆ ಎಂದು ನಂಬಿದ್ದೇನೆ । ದರ್ಶನ್ ಪುಟ್ಟಣ್ಣಯ್ಯ ಬೆಂಬಲವನ್ನೂ ಕೇಳುತ್ತೇನೆಮಂಡ್ಯ:ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಟಿಕೆಟ್ ನನಗೆ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮಂಡ್ಯ ಕ್ಷೇತ್ರದ ಮೈತ್ರಿ ಟಿಕೆಟ್ ಸಿಗುತ್ತೋ, ಇಲ್ಲವೋ ಎಂಬುದರ ಬಗ್ಗೆ ನನಗೆ ಯಾವುದೇ ಅನುಮಾನ, ಆತಂಕವಿಲ್ಲ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಖಚಿತ ವಿಶ್ವಾಸದಲ್ಲಿದ್ದೇನೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ತಿಳಿಸಿದರು. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿಯಾದ ಮೇಲೆ ದ್ವೇಷ ಎಲ್ಲಿಂದ ಬರಲು ಸಾಧ್ಯ. ಜೆಡಿಎಸ್ ಎನ್‌ಡಿಎ ಪಕ್ಷದ ಒಂದು ಭಾಗ. ಅದೇ ರೀತಿ ನಾನೂ ಸಹ ಎನ್‌ಡಿಎ ಒಂದು ಭಾಗವಾಗಿರುತ್ತೇನೆ. ಮೈತ್ರಿ ಎಂದಾದ ಮೇಲೆ ಜೆಡಿಎಸ್‌ನವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿಯಾದರೆ ಜೆಡಿಎಸ್ ಅವರನ್ನು ಹೋಗಿ ವಿಶ್ವಾಸದಿಂದ ಇರುವಂತೆ ಕೇಳುತ್ತೇನೆ. ಮೈತ್ರಿಯಲ್ಲಿ ಜೆಡಿಎಸ್ ನನ್ನೊಂದಿಗೆ ವಿಶ್ವಾಸದಲ್ಲಿ ಇರುತ್ತೆ ಎಂಬ ನಂಬಿರುವುದಾಗಿ ಸ್ಪಷ್ಟಪಡಿಸಿದರು. ಟಿಕೆಟ್ ಗೊಂದಲ ಬಗೆಹರಿಸಬೇಕಿರೋದು ವರಿಷ್ಠರು. ಎಲ್ಲವನ್ನು ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಮಹಿಳಾ ಮಿಸಲಾತಿಯನ್ನು ತಂದಿದ್ದೇ ಬಿಜೆಪಿ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತದೆ. ಅದರಂತೆ ನನಗೆ ಮಂಡ್ಯ ಟಿಕೆಟ್ ಬಿಜೆಪಿ ನೀಡುತ್ತೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ನಾನು ಸಂಸದೆಯಾದ ಬಳಿಕ ಮೇಲುಕೋಟೆ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಅವರ ಮೇಲೆ ಅಪಾರ ಗೌರವವಿದೆ. ಪಾಂಡವಪುರದಲ್ಲಿ ನಾನು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿ ಪ್ರಚಾರವನ್ನೂ ಮಾಡಿದ್ದೆ. ಹಾಗಾಗಿ ನಾನು ದರ್ಶನ್ ಪುಟ್ಟಣ್ಣಯ್ಯನನ್ನು ಬೆಂಬಲ ಕೇಳುತ್ತೇನೆಂದರು.ಅವರಿಗೂ ಆತ್ಮಸಾಕ್ಷಿ ಇರಬೇಕಲ್ವಾ. ಅಕ್ರಮ ಗಣಿಗಾರಿಕೆ ಪರ ನಾನು ಹೋರಾಡುವಾಗ ಅವರು ಅಮೆರಿಕಾದಲ್ಲಿದ್ದರು. ಆ ಸಮಯದಲ್ಲಿ ರೈತ ಸಂಘದ ಜೊತೆ ನಾನು ನಿಂತಿದ್ದೆ. ಅವರು ಬೆಂಬಲ ಕೊಡುತ್ತಾರೋ, ಇಲ್ಲವೋ ನಾನು ಕೇಳೋದು ಕೇಳುತ್ತೇನೆ ಎಂದು ತಿಳಿಸಿದರು.