ಹಿಂದೂ ಧರ್ಮ ರಕ್ಷಣೆಗೆ ಮಕ್ಕಳಿಗೆ ಶಸ್ತ್ರಾಸ್ತ್ರದ ವಿದ್ಯೆ ಕಲಿಸಿ: ಗೋಪಾಲ್ ಭಟ್

KannadaprabhaNewsNetwork |  
Published : Jan 20, 2025, 01:31 AM IST
ಸುಳೆಬಾವಿ ಗ್ರಾಮದಲ್ಲಿ ಆಯೋಜಿಸಿದ್ದ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಮುಖಂಡ ಗೋಪಾಲ್ ಭಟ್ ಮಾತನಾಡಿದರು. | Kannada Prabha

ಸಾರಾಂಶ

ಹಿಂದೂ ಸಮಾಜವನ್ನು ಅಪಮಾನ ಮಾಡುವವರಿಗೆ ತಕ್ಕ ಪಾಠ ಕಲಿಸಲು ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಶಸ್ತ್ರಾಸ್ತ್ರದ ವಿದ್ಯೆ ಕಲಿಸಬೇಕು ಎಂದು ಶ್ರೀರಾಮ ಮಂದಿರ ನಿರ್ಮಾಣದ ಮುಖ್ಯಸ್ಥ ಗೋಪಾಲ್ ಭಟ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಂದೂ ಸಮಾಜವನ್ನು ಅಪಮಾನ ಮಾಡುವವರಿಗೆ ತಕ್ಕ ಪಾಠ ಕಲಿಸಲು ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಶಸ್ತ್ರಾಸ್ತ್ರದ ವಿದ್ಯೆ ಕಲಿಸಬೇಕು ಎಂದು ಶ್ರೀರಾಮ ಮಂದಿರ ನಿರ್ಮಾಣದ ಮುಖ್ಯಸ್ಥ ಗೋಪಾಲ್ ಭಟ್ ಸಲಹೆ ನೀಡಿದರು.

ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಆಯೋಜಿಸಿದ್ದ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ದೇಶದಲ್ಲಿ ಲವ್ ಜಿಹಾದ್ ಆಗಬಾರದು, ಹಿಂದೂಗಳ ಮೇಲೆ ದಬ್ಬಾಳಿಕೆ ಆಗಬಾರದು. ಇಲ್ಲದಿದ್ದರೆ ಹಿಂದೂಗಳು ಪರಾಕ್ರಮ ಮೆರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿಂದೂತ್ವ ಇದ್ದರೆ ಭಾರತ ಇರುತ್ತದೆ. ಭಾರತದ ಮೇಲೆ ದಾಳಿಯಾದಾಗ ಅಯೋಧ್ಯೆಯಯಲ್ಲಿ ರಾಮಮಂದಿರ ಧ್ವಂಸವಾಯಿತು. ಹಿಂದೂಗಳು ಪರಾಕ್ರಮ ಮೆರೆದಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಯಿತು. ಬಾಬರ್ ಅಯೋಧ್ಯೆ ಧ್ವಂಸ ಮಾಡಿ ರಾಮನ ನಷ್ಟ ಮಾಡಿದ್ದ. ಬಾಬರ್ ಸತ್ತು‌ ಹೋದ. ಆದರೆ ರಾಮನ ಆದರ್ಶ, ರಾಮನ ಮಂದಿರ ಭವ್ಯವಾಗಿ ನಿರ್ಮಾಣ ಮಾಡಲಾಗಿದೆ ಎಂದರು.

ಸಮಾಜದಲ್ಲಿ ಪರಾಕ್ರಮ ನಿರ್ಮಾಣವಾಗಬೇಕು. ಉತ್ತರ ಪ್ರದೇಶದಲ್ಲಿ ಸಾವಿರಾರು ಜನರು ರಾಮ ಜಾನಕಿ ಲಾಠಿ ಹಿಡಿದು ಹೋರಟರು. ಮತಾಂಧರು ಯಾರೂ ಮುಂದೆ ಬರಲಿಲ್ಲ. ರಾಮಮಂದಿರ ನಿರ್ಮಾಣಕ್ಕಾಗಿ ದಾವಣಗೆರೆಯಲ್ಲಿ ಗಲಭೆ ಮಾಡಿದರು‌. ಅದರಲ್ಲಿ ಹಿಂದೂಗಳು ಪರಾಕ್ರಮ ಮೆರೆದರು. ಈಗ ಗುಜರಾತಿನಲ್ಲಿ ಯಾವುದೇ ಮುಸ್ಲಿಮರು ಬಾಲ‌‌ ಬಿಚ್ಚುತ್ತಿಲ್ಲ ಎಂದರು.

ಶ್ರೀ ಜೀತೇಂದ್ರಾನಾಥ ಸ್ವಾಮೀಜಿ ಮಾತನಾಡಿ, ಗೋ ಹತ್ಯೆ, ಗೋ ರಕ್ಷಣೆ ಮಾಡಬೇಕೆಂದು ಹಿಂದೂಗಳು ಹೋರಾಟ ಮಾಡುವ ಪ್ರಸಂಗ ಭಾರತ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ನಮ್ಮ ದೇಶದಲ್ಲಿದ್ದುಕೊಂಡು ದೇಶ ಒಡೆಯುವ ಕುತಂತ್ರ ಮಾಡುವವರೆಗೆ ದೇಶ ದ್ರೋಹಿ ಎಂದರೆ ತಪ್ಪೇನು ಎಂದು ಪ್ರಶ್ನಿಸಿದರು.ಜಾತಿ, ಮತ, ಪಂಥ ಮರೆತು ಹಿಂದೂಗಳು ಒಂದಾಗಬೇಕು. ಕೆಲವು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಅಟ್ಟಹಾಸ ಮೆರೆಯುತ್ತಿದೆ. ಹಿಂದೂಗಳ ಮೇಲೆ, ಪೊಲೀಸರು, ಹಾಗೂ ದೇಶದ ಗುಪ್ತಚರ ದಳ ಇಲಾಖೆ ಕಚೇರಿಯನ್ನು ಧ್ವಂಸ ಮಾಡಲು ಹುನ್ನಾರ ನಡೆಸಿವೆ. ಎಲ್ಲ ಹಿಂದೂಗಳ ಮನೆಯಲ್ಲಿ ಹಿಂದೂ ಗ್ರಂಥಗಳು ಇರಬೇಕು ಎಂದರು.

ಪಂಡಿತ್ ಓಗಲೆ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಎಂದಿಗೂ ಸಹಾಯ ಮಾಡಿಲ್ಲ. ಬದಲಾಗಿ ಬಾಬರಿ ಮಸೀದಿ ನಿರ್ಮಾಣಕ್ಕೆ ಸಹಾಯ ಮಾಡಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ಜಯದೀಪ್ ಸರಕಾರ, ಡಾ. ಸಿದ್ದೇಶ್ವರ ದೇವರ, ಸಮೀರ್ ಪಾಟೀಲ್, ಕಿರಣ್ ಚೌಹಾಣ್, ಜ್ಯೋತಿಬಾ ಜಾಧವ, ಧನಂಜಯ ಜಾಧವ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ