ಮೇ ೧೭ರಂದು ಮಂಡ್ಯದಲ್ಲಿ ಶಿಕ್ಷಕರ ಉದ್ಯೋಗ ಮೇಳ

KannadaprabhaNewsNetwork | Published : May 6, 2025 12:18 AM
Follow Us

ಸಾರಾಂಶ

ಉದ್ಯೋಗ ಮೇಳವು ಬೆಳಗ್ಗೆ ೮ ರಿಂದ ೪ ಗಂಟೆಯವರೆಗೆ ನಡೆಯಲಿದ್ದು, ಮೈಸೂರು ಶೈಕ್ಷಣಿಕ ವಿಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಇನ್ನಿತರ ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಸಂದರ್ಶನದ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅರಿವು ಬೋಧಿ ಫೌಂಡೇಷನ್, ಶಿಕ್ಷಕರ ವರ್ಲ್ಡ್ ಡಾಟ್ ಕಾಮ್ ಸಹಯೋಗದೊಂದಿಗೆ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿಗಾಗಿ ಮೇ ೧೭ರಂದು ನಗರದ ಸರ್ಕಾರಿ ಮಹಿಳಾ ಕಾಲೇಜು, ರೋಟರಿ ವಿದ್ಯಾಸಂಸ್ಥೆ, ಬಾಲಕಿಯರ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ), ಸಂತ ಜೋಸೆಫರ ವಿದ್ಯಾ ಮಂದಿರದಲ್ಲಿ ಶಿಕ್ಷಕರ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಧ್ಯಕ್ಷ ಪ್ರಕಾಶ್ ಸಿ.ಕಾರಿಯಪ್ಪ ತಿಳಿಸಿದರು.

ಉದ್ಯೋಗ ಮೇಳವು ಬೆಳಗ್ಗೆ ೮ ರಿಂದ ೪ ಗಂಟೆಯವರೆಗೆ ನಡೆಯಲಿದ್ದು, ಮೈಸೂರು ಶೈಕ್ಷಣಿಕ ವಿಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಇನ್ನಿತರ ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಮಿಸಿ ಸಂದರ್ಶನದ ಮೂಲಕ ಶಿಕ್ಷಕರನ್ನು ಆಯ್ಕೆ ಮಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಉದ್ಯೋಗ ಮೇಳದಲ್ಲಿ ಅರ್ಹತೆ ಹೊಂದಿದ ಅಂದಾಜು ೨೫೦೦ಕ್ಕೂ ಹೆಚ್ಚು ಶಿಕ್ಷಕ ಹುದ್ದೆ ಬಯಸುವ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳ ನೋಂದಣಿ ಉಚಿತವಾಗಿರುತ್ತದೆ. ಈ ಉದ್ಯೋಗ ಮೇಳವನ್ನು ಕುಣಿಗಲ್ ತಾಲೂಕಿನ ಕಾಡು ಮತ್ತೀಕೆರೆಯ ಅರೆ ಶಂಕರಮಠದ ಶ್ರೀಸಿದ್ದರಾಮ ಚೈತನ್ಯ ಸ್ವಾಮಿ ನೆರವೇರಿಸಲಿದ್ದು, ಶಾಸಕ ಪಿ.ರವಿಕುಮಾರ್ ಅಧ್ಯಕ್ಷ ವಹಿಸುವರು ಎಂದರು.ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ೬೫ ಕನ್ನಡ ಶಿಕ್ಷಕರು, ೧೦೫ ಇಂಗ್ಲಿಷ್, ೧೧೦ ಗಣಿತ, ೧೫೦ ವಿಜ್ಞಾನ, ೧೬೦ ಸಮಾಜ ವಿಜ್ಞಾನ, ೯೦ ಹಿಂದಿ, ೫೫ ದೈಹಿಕ ಶಿಕ್ಷಕರು ಹಾಗೂ ಕಾಲೇಜಿನ ಉಪನ್ಯಾಸಕರು, ವಿಜ್ಞಾನ, ಭೌತಶಾಸ್ತ್ರ, ಜೀವಶಾಸ್ತ್ರ, ಇತಿಹಾಸ ಬೋಧಿಸುವ ಶಿಕ್ಷಕರು ಬೇಕಾಗಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ವಿಷಯವಾರು ಮಾಧ್ಯಮವಾರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿದರು.

ಶಿಕ್ಷಕ ಹುದ್ದೆ ಬಯಸುವ ಅಭ್ಯರ್ಥಿಗಳು ಪ್ರಾಯೋಗಿಕ ಪಾಠಕ್ಕೆ ಸಿದ್ಧರಾಗಿ ಬಂದಿರಬೇಕು. ಬಯೋಡೇಟಾ, ಶೈಕ್ಷಣಿಕ ಅರ್ಹತೆಯ ಸರ್ಟಿಫಿಕೇಟ್ ೧೦ ಜೆರಾಕ್ಸ್ ಪ್ರತಿ ಇರಬೇಕು. ಪ್ರತಿಯೊಬ್ಬ ಅಭ್ಯರ್ಥಿಗೆ ೧೦ ಶಿಕ್ಷಣ ಸಂಸ್ಥೆಗಳಿಗೆ ಸಂದರ್ಶನ ಕೊಡಿಸಲಾಗುತ್ತದೆ. ಅಭ್ಯರ್ಥಿಗಳು ೯೪೮೨೦೪೯೨೬೩ಗೆ ಮಿಸ್ಡ್‌ ಕಾಲ್ ಕೊಡುವ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.

ಗೋಷ್ಠಿಯಲ್ಲಿ ಗಣೇಶ್‌ಮಾಂಡ್ರೆ, ಸುರೇಶ್, ಕ್ರಾಂತಿಸಿಂಹ ಇದ್ದರು.