ವಿದ್ಯಾರ್ಥಿಗಳ ಯಶಸ್ಸಿಗೆ ಶಿಕ್ಷಕರೇ ಬೆನ್ನೆಲುಬು

KannadaprabhaNewsNetwork |  
Published : Mar 13, 2026, 01:30 AM IST
12ಎಚ್ಎಸ್ಎನ್5 :  | Kannada Prabha

ಸಾರಾಂಶ

ವಿಜಯಶಾಲೆಯಲ್ಲಿ ನಡೆದ ‘ವಿದ್ಯಾರ್ಥಿ-ಪೋಷಕ-ಶಿಕ್ಷಕ ಸೌಹಾರ್ದಕೂಟ’ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಹಾಗೂ ಪೋಷಕರ ಸೂಕ್ತ ಮಾರ್ಗದರ್ಶನ ಅಗತ್ಯವಿದೆ. ಯಶಸ್ಸೆಂದರೆ ಕೇವಲ ಉನ್ನತ ಪದವಿ ಪಡೆಯುವುದಲ್ಲ, ಒಂದು ನಿರ್ದಿಷ್ಟ ಸಾಧನೆಯ ಹಂತವನ್ನು ತಲುಪಿದಾಗ ನಿಜವಾದ ಯಶಸ್ಸು ಸಿಗುತ್ತದೆ. ಪ್ರೌಢಶಾಲಾ ಹಂತದಲ್ಲಿ ವ್ಯಾಸಂಗದ ಹೊರತಾಗಿ ವಿದ್ಯಾರ್ಥಿಗಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಅನೇಕ ವಿಷಯಗಳಿರುತ್ತವೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರು ವ್ಯಾಸಂಗದತ್ತ ಗಮನಹರಿಸುವಂತೆ ಪ್ರೋತ್ಸಾಹಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಗುರಿ ಇದ್ದಾಗ ಆ ಗುರಿಯನ್ನು ತಲುಪಲು ಶಿಕ್ಷಕರು ಯಾವಾಗಲೂ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಹಾಸನ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರು ಹಾಗೂ ಡೀನ್ ಆದ ರಾಜಣ್ಣ ಬಿ ಅವರು ತಿಳಿಸಿದರು.ನಗರದ ವಿಜಯಶಾಲೆಯಲ್ಲಿ ನಡೆದ ‘ವಿದ್ಯಾರ್ಥಿ-ಪೋಷಕ-ಶಿಕ್ಷಕ ಸೌಹಾರ್ದಕೂಟ’ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಹಾಗೂ ಪೋಷಕರ ಸೂಕ್ತ ಮಾರ್ಗದರ್ಶನ ಅಗತ್ಯವಿದೆ. ಯಶಸ್ಸೆಂದರೆ ಕೇವಲ ಉನ್ನತ ಪದವಿ ಪಡೆಯುವುದಲ್ಲ, ಒಂದು ನಿರ್ದಿಷ್ಟ ಸಾಧನೆಯ ಹಂತವನ್ನು ತಲುಪಿದಾಗ ನಿಜವಾದ ಯಶಸ್ಸು ಸಿಗುತ್ತದೆ. ಪ್ರೌಢಶಾಲಾ ಹಂತದಲ್ಲಿ ವ್ಯಾಸಂಗದ ಹೊರತಾಗಿ ವಿದ್ಯಾರ್ಥಿಗಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಅನೇಕ ವಿಷಯಗಳಿರುತ್ತವೆ. ಇಂತಹ ಸಮಯದಲ್ಲಿ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರು ವ್ಯಾಸಂಗದತ್ತ ಗಮನಹರಿಸುವಂತೆ ಪ್ರೋತ್ಸಾಹಿಸಬೇಕು .ಆಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ತಿಳಿಸಿದರು. ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡುತ್ತಾ ವಿಜಯ ಶಾಲೆಯು ಪ್ರಾರಂಭವಾಗಿ ಮೂರು ದಶಕಗಳು ಸಂದಿವೆ. ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನುರಿತರನ್ನಾಗಿ ಮಾಡಲು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಶ್ರಮಿಸುತ್ತಿದೆ. ವಿಜಯ ಶಾಲೆಯ ಮೇಲೆ ಪೋಷಕರು ಇಟ್ಟಿರುವ ನಂಬಿಕೆಗೆ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸುತ್ತದೆ. ಮಕ್ಕಳ ಫಲಿತಾಂಶದ ಬಗ್ಗೆ ಅತಿಯಾಗಿ ಆತಂಕ ಪಡಬೇಡಿ .ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಿ ಅವರ ಮೇಲೆ ಮಾನಸಿಕ ಒತ್ತಡ ಹೇರಬೇಡಿ. ಕೇವಲ ಅಂಕಗಳಷ್ಟೇ ಅಲ್ಲದೆ ಮಕ್ಕಳಲ್ಲಿ ಕೌಶಲ್ಯವರ್ಧನೆ ಮಾಡುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು. ಶಾಲಾ ಶೈಕ್ಷಣಿಕ ಮುಖ್ಯಸ್ಥರಾದ ಡಾ. ಶ್ರೀಲಕ್ಷ್ಮೀ ಎಸ್ ಅವರು ಮಾತನಾಡುತ್ತಾ ಹತ್ತನೇ ತರಗತಿಯ ನಂತರ ವಿದ್ಯಾರ್ಥಿಗಳ ಜೀವನ ಶೈಲಿ ಬದಲಾಗುತ್ತದೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಬಗ್ಗೆ ತಾವೇ ಜವಾಬ್ದಾರಿ ತೆಗೆದುಕೊಳ್ಳುವುದು ಮುಖ್ಯ . ಮುಂದಿನ ಎರಡು ವರ್ಷಗಳು ನಿಮ್ಮ ಭವಿಷ್ಯಕ್ಕೆ ನಿರ್ಣಾಯಕ ಸಮಯವಾಗಿದೆ. ಕೇವಲ ಓದಿನ ಕಡೆಗೆ ಮಾತ್ರವಲ್ಲದೆ ದೈಹಿಕ, ಮಾನಸಿಕ ಮತ್ತು ಡಿಜಿಟಲ್ ಹೆಲ್ತ್ ಕಡೆಗೂ ಗಮನ ನೀಡಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಂದ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ನಿಮ್ಮ ಗುರಿಯತ್ತ ಏಕಾಗ್ರತೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ತಮ್ಮಮಕ್ಕಳ ವಿದ್ಯಾರ್ಥಿ ಜೀವನ ಹಾಗೂ ಶಾಲೆಯ ಕೊಡುಗೆಯ ಬಗ್ಗೆ ತಮ್ಮಅನಿಸಿಕೆ ಹಂಚಿಕೊಂಡರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ವೈ .ಎನ್ ಸುಬ್ಬಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನಂದೀಶ ಕೆ.ಎಸ್., ಶಿಕ್ಷಕರು, ಪೋಷಕರು, ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ