ಕನ್ನಡಪ್ರಭ ವಾರ್ತೆ ನರಗುಂದ
ಪಟ್ಟಣದ ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 2010-11ನೇ ಸಾಲಿನ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗುರುವಿಗೆ ಸದಾ ಗೌರವ ನೀಡಬೇಕು. ಬದುಕಿನಲ್ಲಿ ಅಂದುಕೊಂಡ ಗುರಿ ತಲುಪಲು ಸಾಧ್ಯವಾಗದೇ ಯಶಸ್ಸು ಕೈತಪ್ಪಿದರೂ ವಿಚಲಿತರಾಗದೆ, ತೃಪ್ತಿ ಹಾಗೂ ಸಮಾಧಾನದ ಬದುಕು ನಡೆಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ನಿಮ್ಮಂತೆಯೇ ನಿಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಎಂದರು.
ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಮಾತನಾಡಿ, ಲಯನ್ಸ್ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡಿದೆ. 16 ವರ್ಷಗಳ ನಂತರವೂ ಹಳೆಯ ವಿದ್ಯಾರ್ಥಿಗಳು ಕಾಲೇಜಿಗೆ ಮರಳಿ ಬಂದು ಗುರುವಂದನೆ ಸಲ್ಲಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಜೀವನದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.ಕನ್ನಡ ಉಪನ್ಯಾಸಕ ಡಾ. ಬಸವರಾಜ ಹಲಕುರ್ಕಿ ಮಾತನಾಡಿ, ಪ್ರೌಢಶಾಲೆ ಹಾಗೂ ಪದವಿ ಹಂತದ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವುದು ಸಾಮಾನ್ಯ. ಆದರೆ ಪಿಯುಸಿ ಹಂತದ ವಿದ್ಯಾರ್ಥಿಗಳು ಒಗ್ಗೂಡಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿರುವುದು ನರಗುಂದ ತಾಲ್ಲೂಕಿನಲ್ಲೇ ವಿಶೇಷವಾಗಿದೆ ಎಂದರು.
ಈ ಸಂದರ್ಭ ಉಪನ್ಯಾಸಕರಾದ ಎಚ್.ವೈ. ಜೊತೆನ್ನವರ, ಎನ್.ವಿ. ಚಂದ್ರತ್ನವರ, ನೀಲಮ್ಮ, ಇಮಾಮ್ ಕಾಸಿಂ, ವಿ.ಎಸ್. ಗಂಗೂರ, ವಿ.ಎಫ್. ಹದ್ಲಿ, ಸಿ.ವಿ. ಜಗಲಿ, ಪ್ರವೀಣ ದೇವಾಂಗದ, ಎಫ್.ಬಿ. ಆನಿ, ಸಿ.ಪಿ. ನೀಲಗುಂದ, ಸಂಜೀವ ಸತರಡ್ಡಿ, ನಾಗರಾಜ ಬೊಬ್ಬಿ, ಚಂದ್ರಶೇಖರ ಮುಳಗುಂದ, ಪಿ.ಎಸ್. ದಂಡಿನ, ರಾಘವೇಂದ್ರ ಗೆಜ್ಜೆ, ವೆಂಕರಡ್ಡಿಯವರ, ಪಿ.ಎಸ್. ಕವಲೂರ ಹಾಗೂ ರವಿ ಬೋಗಾರ ಉಪಸ್ಥಿತರಿದ್ದರು.