ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅಪಾರ: ಕೆ.ಎಸ್‌.ಆನಂದ್‌

KannadaprabhaNewsNetwork |  
Published : Sep 19, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಶಿಕ್ಷಕರು ಮಕ್ಕಳ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ನಿರ್ಮಾಪಕರಾಗಿದ್ದು ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದು ಶಾಸಕ ಕೆ.ಎಸ್.ಆನಂದ್‌ ಶ್ಲಾಘಿಸಿದರು.

ಕಡೂರು ಶೈಕ್ಷಣಿಕ ವಲಯದ 65ನೇ ಶಿಕ್ಷಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶಿಕ್ಷಕರು ಮಕ್ಕಳ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ನಿರ್ಮಾಪಕರಾಗಿದ್ದು ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದು ಶಾಸಕ ಕೆ.ಎಸ್.ಆನಂದ್‌ ಶ್ಲಾಘಿಸಿದರು.

ಮಲ್ಲೇಶ್ವರದ ಶ್ರೀ ಸ್ವರ್ಣಾಂಬ ದೇವಾಲಯದದಲ್ಲಿ ಶುಕ್ರವಾರ ನಡೆದ ಕಡೂರು ಶೈಕ್ಷಣಿಕ ವಲಯದ 65ನೇ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ ಸ್ವಾತಂತ್ರ್ಯ ನಂತರದಲ್ಲಿ ನಮ್ಮ ದೇಶ ಬಲಿಷ್ಠವಾಗಿ ರೂಪುಗೊಳ್ಳುವಲ್ಲಿ ಶಿಕ್ಷಕರ ಕೊಡುಗೆ ಮಹತ್ವದ್ದಾಗಿದೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ಇದ್ದೇ ಇರುತ್ತದೆ. ಆದರೆ, ನಮ್ಮ ರಾಜ್ಯ ದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಹೆಚ್ಚಬೇಕಿದೆ. ಸಮಾನತೆ ಆಶಯ ಈಡೇರುವಲ್ಲಿ ಮಹಿಳೆಯರು ಸುಶಿಕ್ಷಿತರಾ ಗಲೇ ಬೇಕು ಎಂದು ಕಳಕಳಿ ವ್ಯಕ್ತ ಪಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕಾಗಿಯೇ ಸಾಕಷ್ಟು ಹಣ ವೆಚ್ಚ ಮಾಡುತ್ತವೆ. ನಮ್ಮ ಕ್ಷೇತ್ರ ದಲ್ಲಿ ವಿಶೇಷ ವಾಗಿ ಶಿಕ್ಷಣ ಇಲಾಖೆಯಲ್ಲಿ ಕಂಡು ಬರುವ ಯಾವುದೇ ಸಮಸ್ಯೆ ಬಗೆಹರಿಸಲು ತಾವು ಸರ್ಕಾರದ ಗಮನ ಸೆಳೆಯಲು ಸಿದ್ಧ. ಕಡೂರು ಜಿಲ್ಲೆ ಶೈಕ್ಷಣಿಕ ಮತ್ತು ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದು ನುಡಿದರು.

ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ವಸತಿ ಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಅಭಿವೃದ್ಧಿ ಸೇರಿದಂತೆ ₹160 ಕೋಟಿ ಹೆಚ್ಚು ಹಣ ಮಂಜೂರಾಗಿ ಬಹುತೇಕ ಕೆಲಸ ಮುಕ್ತಾಯದ ಹಂತ ತಲುಪಿವೆ. 4 ಕೆಪಿಎಸ್‌ ಶಾಲೆಗಳ ಸ್ಥಾಪನೆ ಮೂಲಕ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸುವ ಕೆಲಸ ನಡೆದಿದೆ. ಜನರ ಸಹಕಾರವಿದ್ದರೆ ಸರ್ಕಾರಿ ಶಾಲೆ ಗಳನ್ನು ಉಳಿಸುವುದು ಕಷ್ಟವೇನೂ ಅಲ್ಲ. ಶಿಕ್ಷಕರು ತಾವು ಪಾಠ ಮಾಡುವ ಸರ್ಕಾರೀ ಶಾಲೆ ಜಾಗವನ್ನು ಯಾವುದೇ ಕಾರಣ ಕ್ಕೂ ಪರರ ಪಾಲಾಗಲು ಬಿಡದೆ ಉಳಿಸಲು ಯತ್ನಿಸಬೇಕು ಎಂದು ಸಲಹೆ ನೀಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು ಮಾತನಾಡಿ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ವೃತ್ತಿ ಬಗ್ಗೆ ಗೌರವ ಹೊಂದಿ ತಮ್ಮನ್ನು ಅರ್ಪಿಸಿಕೊಂಡರೆ ಖಾಸಗಿ ಶಾಲೆಗಳು ಯಾವ ಕಾರಣಕ್ಕೂ ಮುಂದುವರಿಯುವುದಿಲ್ಲ. ಮಕ್ಕಳ ಕೊರತೆ ಯಿಂದ ಬಾಗಿಲು ಹಾಕುತ್ತಿರುವ ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರು ಶ್ರಮಿಸಬೇಕು. ಸರ್ಕಾರ ಕೂಡಾ ಏಷಿಯನ್‌ ಡೆವಲಪ್‌ ಮೆಂಟ್‌ ₹2 ಸಾವಿರ ಕೋಟಿ ನೆರವಿನಿಂದ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಎಡಿಬಿ-ಕೆಪಿಎಸ್ಮೂಲಕ ಪ್ರಯತ್ನಿಸುತ್ತಿದೆ. ಕೆಪಿ ಎಸ್ಶಾಲೆಗಳಲ್ಲಿ ಎಐ ಬೋಧಿಸುವ ಶಿಕ್ಷಕರನ್ನೂ ನೇಮಕ ಮಾಡಲಾಗುತ್ತಿದೆ. ಶಿಕ್ಷಕರು ಗುಣಮಟ್ಟದ ತರಬೇತಿ ಪಡೆದಿದ್ದು ನಿಮ್ಮ ಸಾಮರ್ಥ್ಯದ ಸದ್ಬಳಕೆಯಾಗಲಿ, ಇಲಾಖೆಯೊಂದಿಗೆ ಸಹಕರಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಎಸ್.ರಾಧಾಕೃಷ್ಣನ್ಮತ್ತು ಸಾವಿತ್ರಿಬಾಯಿ ಫುಲೆ ಭಾವಚಿತ್ರವನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕುವೆಂಪು ವಿವಿಯ ಪ್ರಾಧ್ಯಾಪಕಿ ಶುಭಾ ಮರವಂತೆ ಉಪನ್ಯಾಸ ನೀಡಿದರು. ಶಿಕ್ಷಕ ಬ್ಯಾಗಡೆ ಹಳ್ಳಿ ಬಸವ ರಾಜು ರಾಧಾಕೃಷ್ಣನ್‌ ವೇಷಧರಿಸಿ ಸಭೆ ಗಮನ ಸೆಳೆದರು. ಪ್ರಾಥಮಿಕ ಶಾಲೆಗಳ 30 ಮತ್ತು ಪ್ರೌಢಶಾಲೆಗಳ 10 ನಿವೃತ್ತ ಶಿಕ್ಷಕರು, ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿಶೇಷವಾಗಿ ಮಹಿಳಾ ಶಿಕ್ಷಕಿಯರನ್ನು ಅರಿಶಿನ-ಕುಂಕುಮ ನೀಡಿ, ಬಾಗಿನ ಅರ್ಪಿಸಿ ಬೀಳ್ಕೊಟ್ಟಿದ್ದು ಹೃದಯಸ್ಪರ್ಶಿಯಾಗಿತ್ತು. ಬುನಾದಿ ಕಲಿಕಾ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಕ್ಲಸ್ಟ ರ್‌ ಹಂತದ ಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು. ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಬಿಇಒ ಎಂ.ಎಚ್.ತಿಮ್ಮಯ್ಯ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ಮಂಜುನಾಥ್, ಎನ್.ಎಸ್.ದೇವರಾಜ್, ಕೆ.ಎಂ.ಹರೀಶ್, ಕೆ.ಆರ್.ಪ್ರಭಾಕರ್, ಜಿ.ತಿಮ್ಮಯ್ಯ, ಲತಾಮಣಿ, ಶಾರದಮ್ಮ, ಬಿ.ಜೆ.ಜಗದೀಶ್, ಮುರಳೀಧರ, ದಾಕ್ಷಾಯಣಿ, ಕೆ.ಡಿ.ನಾಗರಾಜ್, ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಮತ್ತಿತರರು ಇದ್ದರು.

18ಕೆಡಿಆರ್೧ಕಡೂರು ಸಮೀಪದ ಮಲ್ಲೇಶ್ವರದಲ್ಲಿ ಶುಕ್ರವಾರ ಕಡೂರು ಶೈಕ್ಷಣಿಕ ವಲಯ 65ನೇ ಶಿಕ್ಷಕರ ದಿನಾಚರಣೆಯನ್ನು ಶಾಸಕ ಕೆ.ಎಸ್.ಆನಂದ್ಉದ್ಘಾಟಿಸಿದರು. ಡಿಡಿಪಿಐ ತಿಮ್ಮರಾಜು, ಬಿಇಓ ಎಂ.ಎಚ್.ತಿಮ್ಮಯ್ಯ, ಅಶೋಕ್ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಡಾಳು ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು
ಜನಮನ ಸೆಳೆದ ಕಲ್ಯಾಣ ಕರ್ನಾಟಕ ಉತ್ಸವ