ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವ ಶಕ್ತಿ ಶಿಕ್ಷಕರಲ್ಲಿದೆ

KannadaprabhaNewsNetwork |  
Published : Sep 19, 2026, 02:45 AM IST
ಕರೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನದೊಂದಿಗೆ ಉತ್ತಮ ಸಂಸ್ಕಾರ, ದೇಶದ ಮೇಲೆ ಅಭಿಮಾನ ಬೆಳೆಸುವಂತ ಅಗಾಧ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನದೊಂದಿಗೆ ಉತ್ತಮ ಸಂಸ್ಕಾರ, ದೇಶದ ಮೇಲೆ ಅಭಿಮಾನ ಬೆಳೆಸುವಂತ ಅಗಾಧ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ನಗರದ ಗುಂದಗಿ ಫಂಕ್ಷನ್ ಹಾಲ್‌ನಲ್ಲಿ ಗುರುವಾರ ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಶಿಕ್ಷಕರ ದಿನೋತ್ಸವ ಸಮಿತಿ, ಹಮ್ಮಿಕೊಂಡ ಶಿಕ್ಷಕರ ದಿನೋತ್ಸವ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಕರಿಗೆ ಪೂಜ್ಯನೀಯ ಸ್ಥಾನ ಕಲ್ಪಿಸಲಾಗಿದೆ. ಸರ್ವಪಲ್ಲಿ ಡಾ.ರಾಧಾಕೃಷ್ಣನ ತತ್ವ ಆದರ್ಶ ಜೀವನದಲ್ಲಿ ರೂಡಿಸಿಕೊಂಡು ಶಿಕ್ಷಕರು ಸದೃಢ ಸಮಾಜ ಹಾಗೂ ಭವ್ಯ ಭಾರತ ಕಟ್ಟುವ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸುವ ಹೊಣೆ ಶಿಕ್ಷಕರದ್ದು ಎಂದು ಹೇಳಿದರು.ಯರನಾಳ ವಿರಕ್ತಮಠ ಸಂಸ್ಥಾನದ ಗುರು ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಶಿಕ್ಷಕರು ಗುರುವಿನ ಸ್ಥಾನದಲ್ಲಿರುವ ಜೀವಂತ ದೇವರು. ಸಮಾಜ ಅಂಥವರನ್ನು ಗೌರವಿಸುತ್ತಿದೆ. ಶಿಕ್ಷಕರು ನಿವೃತ್ತಿ ಹೊಂದಿದರು ತಮ್ಮ ಹತ್ತಿರ ಶಾಲೆಗೆ ಹೋಗಿ ಬಡ ಮಕ್ಕಳಿಗೆ ನಿರಂತರವಾಗಿ ಉಚಿತ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.ತಾಲೂಕು ಪಂಚಾಯತಿ ಇಒ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಅಧ್ಯಕ್ಷ ಅನೀಲ ಹಳ್ಳಿ ಮಾತನಾಡಿ, ಸಮಾಜದಲ್ಲಿ ಶಿಕ್ಷಕರಿಗೆ ಪೂಜ್ಯನೀಯ ಸ್ಥಾನ ಕಲ್ಪಿಸಲಾಗಿದೆ ಎಂದರು.ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ(ಇಂಡಿ) ಬಿ.ಎಸ್.ಕವಲಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂತೋಷ ಸಾಲಿ, ಆಲಮೇಲ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ತೆಲ್ಲೂರ, ದೇವರಹಿಪ್ಪರಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಅಕ್ಷರ ದಾಸೋಹ ಮಧ್ಯಾಹ್ನ ಬಿಸಿಊಟ, ಸಹಾಯಕ ನಿರ್ದೇಶಕರು, ಅರವಿಂದ್ರ ಡೋಣೂರ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಮೇಶ ಬಿರಾದಾರ, ಶಿಕ್ಷಣ ಸಂಯೋಜಕರು ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ, ನೋಡಲ್ ಅಧಿಕಾರಿ ಎಸ್.ಐ.ರಾಂಪೂರ. ಸಿಂದಗಿ, ಆಲಮೇಲ, ದೇವರಹಿಪ್ಪರಗಿಯ ಎಲ್ಲಾ ಶಿಕ್ಷಕರ ಸಂಘಗಳ- ಕ.ರಾ.ಪ್ರಾ.ಶಾ.ಶಿ. ಸಂಘ, ಸರ್ಕಾರಿ ನೌಕರರ ಸಂಘ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ, ಜಿ.ಪಿ.ಟಿ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಉರ್ದು ಶಾಲಾ ಶಿಕ್ಷಕರ ಸಂಘ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಎಸ್ಸಿ/ಎಸ್ಟಿ ಶಿಕ್ಷಕರ ಸಂಘ ಮುಂತಾದ ಎಲ್ಲಾ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ವೇದಿಕೆ ಮೇಲೆ ಇದ್ದರು.ತಾಲೂಕಿನ ಅಪಾರ ಶಿಕ್ಷಕರ ವೃಂದ, ಇಸಿಓ, ಬಿಆರ್ಪಿ, ಸಿಆರ್ಪಿ, ಬಿಇಓ ಆಫೀಸ್ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದರು. ಶಾಸಕರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ನೂತನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಾಮಣ್ಣ ರಾಂಪೂರ, ಶಿಕ್ಷಕ ವೈ.ಪಿ. ಕಣಮೇಶ್ವರ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರಿಗೂ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿ, ಶಿಕ್ಷಕರ ದಿನೋತ್ಸವ ಸಮಿತಿ, ಟಿ.ಎಸ್.ಅಲಗೂರ ಸ್ವಾಗತಿಸಿದರು. ಸಿಆರ್ಪಿ ವಿಜಯಲಕ್ಷ್ಮೀ ನವಲಿ ಪ್ರಾರ್ಥನೆ ಗೀತೆ ಹೇಳಿದರು. ಶಿಕ್ಷಕ ಜೆ.ಎನ್.ಸಿಂಗೆ .ಶಿಕ್ಷಕ ಶರಣಬಸು ಲಂಗೂಟಿ .ಶಿಕ್ಷಕ ಸಿದ್ದಲಿಂಗ ಚೌಧರಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಗಾಮಾರ್ಟ್ ಕಾಮಗಾರಿ ಶೀಘ್ರ ಪೂರ್ಣ
ಡಿಸಿಸಿ ಬ್ಯಾಂಕಿಗೆ 140 ಹುದ್ದೆಗಳ ನೇಮಕಾತಿಗೆ ಹೊಸ ಪ್ರಸ್ತಾವ