ಪಾಂಡವಪುರ:
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ ಮುಖ್ಯಶಿಕ್ಷಕರು, ಸಹ ಶಿಕ್ಷಕರಿಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬದಲಾಗುತ್ತಿರುವ ಪಠ್ಯಗಳು, ಬೋಧನ ಕ್ರಮಗಳ ಬಗ್ಗೆ ಶಾಲೆಯ ಶಿಕ್ಷಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿ ತಿಂಗಳೂ ಶಿಕ್ಷಕರಿಗೆ ಕಾರ್ಯಾಗಾರ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಶಿಕ್ಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಲಿಕೆ ಎನ್ನುವುದು ನಿರಂತರವಾಗಿರುತ್ತದೆ. ಶಿಕ್ಷಕರು ಸಹ ಕಲಿಯುವುದು ಬಹಳಷ್ಟಿದೆ. ಅದರಲ್ಲೂ ಪ್ರೌಢಶಾಲೆ ಶಿಕ್ಷಕರು ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದಗೊಳಿಸುವ ಮಹತ್ತರ ಜವಾಬ್ದಾರಿಯಾಗಿದೆ. ಅದಕ್ಕೆ ಶಿಕ್ಷಕರು ಸಜ್ಜಾಗಬೇಕು, ಶಿಕ್ಷಕರ ಸಹಕಾರದಿಂದ ಮಾತ್ರ ಇಂತಹ ಕಾರ್ಯಗಾರ ಯಶಸ್ವಿಯಾಗಲು ಸಾಧ್ಯ ಎಂದರು.ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮಕ್ಕಳು ಪ್ರೌಢಶಾಲೆ ಹಂತದಲ್ಲಿ ಕಲಿಯುವ ಶಿಕ್ಷಣವೇ ಮಕ್ಕಳ ಮನಸ್ಸಿನಲ್ಲಿ ಬಹಳ ದಿನಗಳ ಕಾಲ ಶಾಶ್ವತವಾಗಿ ಉಳಿಯುತ್ತದೆ. ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಕಲಿಕೆಗೆ ಕೊನೆ ಇರುವುದಿಲ್ಲ ಎಂದರು.
ನಂತರ ಮಕ್ಕಳ ಪಂಥಸಂಚಲನದ ಮೂಲಕ ಧ್ವಜವಂದನೆ ಸಲ್ಲಿಸಿ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ಪ್ರತಿಯೊಬ್ಬರು ಕನ್ನಡಿಗರು ಕನ್ನಡ ಭಾಷೆ ಹೆಚ್ಚು ಬಳಕೆ ಮಾಡಿ ಮತ್ತಷ್ಟು ಶ್ರೀಮಂತಗೊಳಿಸಬೇಕು ಎಂದು ಮನವಿ ಮಾಡಿದರು.ಬೆಂಗಳೂರು ನಗರದಂತಹ ಪ್ರದೇಶದಲ್ಲಿ ಅನ್ಯಭಾಷಿಗರು ಹೆಚ್ಚಾಗಿದ್ದಾರೆ. ಅಂತವರಿಗೂ ಸಹ ಕನ್ನಡಿಗರು ಕನ್ನಡ ಭಾಷೆ ಮಾತನಾಡುವಂತೆ ಕಲಿಸುವ ಕೆಲಸವಾಬೇಕು. ನಾಡಿಗೆ ಗಡಿಭಾಗಗಳಲ್ಲಿ ಕನ್ನಡ ಭಾಷಗೆ ಅನ್ಯಭಾಷಿಗರಿಂದ ಹೊಡೆದ ಬೀಳುತ್ತಿದೆ. ಅವರಿಗೆ ರಕ್ಷಣೆ ಮಾಡಬೇಕು ಎಂದರು.