ಗಂಗಾವತಿ:ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಆಗದು. ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರವಿದ್ದು , ಸತತ ಪರಿಶ್ರಮದಿಂದ ಗುರಿಯತ್ತ ಗಮನಹರಿಸಬೇಕು. ಪ್ರತಿಯೊಬ್ಬರು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸ್ವರ್ಣಾ ಸಮೂಹ ಸಂಸ್ಥೆ ಚೇರ್‌ಮನ್ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಇಲ್ಲಿಯ ವಿದ್ಯಾನಗರದಲ್ಲಿರುವ ಶಾರದ ವಿದ್ಯಾ ಸಂಸ್ಥೆಯಲ್ಲಿ 78ನೇ ಕಲ್ಯಾಣ ಕರ್ನಾಟಕ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕ ಪ್ರಯತ್ನದೊಂದಿಗೆ ಮಕ್ಕಳ ಭವಿಷ್ಯ ರೂಪಿಸಬೇಕು. ಶಿಕ್ಷಕರ ವೃತ್ತಿ ಪವಿತ್ರವಾದದ್ದು. ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರು ತನಗೆ ಶಿಕ್ಷಣ ನೀಡಿದ ಶಿಕ್ಷಕರ ಬಗ್ಗೆ ಗೌರವ ಮತ್ತು ವಿಶ್ವಾಸವಿರುತ್ತದೆ ಎಂದರು.ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಕರು ಒಗ್ಗಟಿನಿಂದ ಕೆಲಸ ಮಾಡಬೇಕು ಎಂದ ಅವರು, ತಾಂತ್ರಿಕತೆ ಬೆಳೆದಂತೆ ಡಿಜಿಟಲ್ ಮಾಯಾಲೋಕಕ್ಕೆ ಮರುಳಾಗುತ್ತಿರುವ ಯುವ ಸಮೂಹ ಓದಿನಿಂದ ವಿಮುಖವಾಗಿದೆ. ಇದರಿಂದ ಯುವ ಜನಾಂಗದಲ್ಲಿ ಜ್ಞಾನದ ಸಂಪತ್ತು ಕುಂಟುತ್ತಾ ಹೋಗುತ್ತಿದೆ. ಈಗಿನ ಪೀಳಿಗೆ ಸಾಮಾಜಿಕ ಜಾಲತಾಣದಿಂದ ಹೊರಬಂದು ಜ್ಞಾನ ಹೆಚ್ಚಿಸಿಕೊಳ್ಳಬೇಕಾದರೆ ಓದುವ ಹವ್ಯಾಸ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಅನೇಕ ವಿದ್ಯಾ ಸಂಸ್ಥೆ ಹಾಗೂ ಸಮಾಜಸೇವೆಗೆ ಸಹಾಯ, ಸಹಕಾರ ಮಾಡುತ್ತಿದ್ದು ಅದರ ಭಾಗವಾಗಿ ಶಾರದ ವಿದ್ಯಾ ಸಂಸ್ಥೆಯ ಮೊದಲನೇ ಮಹಡಿಯ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಅನುದಾನ ನೀಡುತ್ತೇನೆ. ಮುಂದಿನ ದಿನದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ವಿವಿ ಸಂಘದ ಉಪಾಧ್ಯಕ್ಷ ಜಾನನ ಕುಂಟೆ ಬಸವರಾಜ್ , ತುಂಗಭದ್ರಾ ಸ್ಟೋನ್ ಕ್ರಷರ್‌ನ ಮುರಳಿಶಿವ ನಾಗೇಶ್ವರರಾವ್, ಮನ್ನೆ ರಾಮಚಂದ್ರ ಮೂರ್ತಿ, ಬಿಇಒ ಎಚ್.ವಿ. ನಟೇಶ, ಉಪನಿರ್ದೇಶಕ ಸೋಮಶೇಖರ ಬಿ. ಆಗಮಿಸಿದ್ದರು. ಶಾರದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಕ್ರಾತಿ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ವೀರಶೈವ ವಿದ್ಯಾವರ್ಧಕ ಸಂಘದ ಚೇರ್‌ಮ್‌ನ್ ರಾವ್ ಬಹದ್ದೂರ್ ಮಹಾಬಲೇಶ್ವರ, ಆರ್. ರಾಜಶೇಖರ, ಟಿ.ವಿ. ಸತ್ಯನಾರಾಯಣ್, ಡಿ. ರಾಮಕೃಷ್ಣ, ಎಂ. ಸತ್ಯನಾರಾಯಣ್, ಕಮ್ಮಾ ಕೋಟೇಶ್ವರರಾವ್, ಕೆ. ತ್ರಿನಾಥ, ಗೊಟ್ಟಿಪಾಟಿ ರವಿಕುಮಾರ, ಎನ್.ಆರ್. ಶ್ರೀನಿವಾಸ, ಸಿ.ಎಚ್. ರಾಮಕೃಷ್ಣ ಕಲ್ಯಾಣಂ ಜಾನಕಿರಾಮ, ಜಿ. ರಾಯುಡು, ಕೆ.ಬಿ. ಗೋಪಾಲಕೃಷ್ಣ ರೆಡ್ಡಿ, ಪಿ. ಲಕ್ಷ್ಮಣ್‍ರಾವ್, ಜಿ. ಕೃಷ್ಣಾರಾವ್, ಟಿ.ವಿ. ಸುಬ್ಬರಾವ್, ಎಸ್. ವೆಂಕಟೇಶ್ವರ ರಾವ್, ಜವ್ವಾದಿ ಸಾಯಿಬಾಬು, ವೈ ಸುದರ್ಶನ್ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.