ಬಿಆರ್ ವಿ ಶ್ರೀ ರಾಮಕೃಷ್ಣ ಆಂಗ್ಲಮಾದ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ
ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ರೂವಾರಿಗಳು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಎ.ಎಸ್.ನಯನಾ ಹೇಳಿದರು.
ಪಟ್ಟಣದ ಬಿಆರ್ ವಿ ಶ್ರೀ ರಾಮಕೃಷ್ಣ ಆಂಗ್ಲಮಾದ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳು ದೇಶದ ಮುಂದಿನ ಪ್ರಜೆಗಳು. ಮಕ್ಕಳು ತಪ್ಪು ಮಾಡಿದರೆ ಶಿಕ್ಷೆಯೊಂದೆ ಮಾನದಂಡವಲ್ಲ. ಅವರಲ್ಲಿರುವ ತಪ್ಪು, ಲೋಪದೋಷಗಳನ್ನು ತಿದ್ದಿ ಸರಿಪಡಿಸಿ ಅವರನ್ನು ಸರಿದಾರಿಗೆ ತರುವುದು ಶಿಕ್ಷಕರ ಕರ್ತವ್ಯ ಹಾಗೂ ಬಹುದೊಡ್ಡ ಜವಾಬ್ದಾರಿಯಾಗಿದೆ.ಇತ್ತೀಚಿನ ದಿನಗಳಲ್ಲಿ ಮಾನವೀಯ, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಅವರಲ್ಲಿ ಉತ್ತಮ ಸಂಸ್ಕಾರ, ಮೌಲ್ಯ, ಉದಾತ್ತ ಚಿಂತನೆಗಳನ್ನು ಬೆಳೆಸಬೇಕಿದೆ. ಮಕ್ಕಳು ಮನುಕುಲದ ಮೊಳಕೆಗಳು. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಹೊರತಂದು ಬೆಳೆಸುವ ಕೆಲಸ ನಡೆಯಬೇಕು. ಶಿಕ್ಷಣವೆಂದರೆ ಕೇವಲ ಓದು, ಅಂಕಗಳಿಕೆ, ಪಲಿತಾಂಶ ಇವುಗಳಿಗೆ ಮಾತ್ರ ಸೀಮಿತ ವಾಗಿರದೇ ಭವಿಷ್ಯದ ಜೀವನಕ್ಕೆ ಬುನಾದಿಯಾಗುವಂತಿರಬೇಕು.
5 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಬಿಆರ್ ವಿ ಶ್ರೀ ರಾಮಕೃಷ್ಣ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಿಕ್ಛಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸ್ವಾಗತ ನೀಡುತ್ತಿರುವುದು.