ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲ್ಲೂಕಿನ ಹತ್ತೂರು ಗ್ರಾಮದಲ್ಲಿ ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಎಸ್.ಜೆ.ವಿ.ಪಿ. ಬಿಇಡಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು.
3 ದಿನ ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಚತೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಸಂದೇಶಗಳನ್ನು ನೀಡಲು ತಮ್ಮ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಈ ಪೌರತ್ವ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಶ್ರೇಷ್ಠ ಗ್ರಾಮ:
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಪ್ರಸನ್ನ ಪ್ರಶಿಶಿಕ್ಷಣಾರ್ಥಿಗಳಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವ ಹೊಣೆಗಾರಿಕೆಯ ಜತೆಗೆ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಪೌರತ್ವ ಶಿಬಿರವು ಸಹಕಾರಿಯಾಗಲಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಮಮತಾ ಮಾತನಾಡಿ, ಸಮುದಾಯದ ನಾಯಕತ್ವ ಗುಣಗಳ ಜತೆಗೆ ಪರಸ್ಪರ ಗೌರವ ಮತ್ತು ಸಹಕಾರ ಮನೋಭಾವವನ್ನು ಪ್ರಶಿಶಿಕ್ಷಣಾರ್ಥಿಗಳಲ್ಲಿ ಬೆಳೆಸುವ ಸದುದ್ದೇಶದಿಂದ ಪೌರತ್ವ ತರಬೇತಿ ಶಿಬಿರವು ಸಹಕಾರಿಯಾಗಲಿದೆ ಎಂದರು. ಬಿಇಡಿ ತರಬೇತಿ ಮುಗಿಸಿ ಶಿಕ್ಷಕರಾಗುವವರಿಗೆ ಮುಂದಿನ ಶಿಕ್ಷಕ ವೃತ್ತಿಯಲ್ಲಿ ಉತ್ತಮ ಶಿಕ್ಷಕರನ್ನಾಗಿಸುವ ನಿಟ್ಟಿನಲ್ಲಿ ಈ ಶಿಬಿರವು ಎಲ್ಲಾ ರೀತಿಯಲ್ಲೂ ಸಹಕಾರಿಯಾಗಲಿದ್ದು, ಶಿಬಿರವನ್ನು ಸದುಪಯೋಗ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚ.ವಿ.ನಿರ್ದೇಶಕ ಅಮೃತಗೌಡ ದೊಡ್ಡಮನಿ, ಪ್ರಶಿಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ಶ್ರೀ ತಿರುಮಲ ಸೇವಾ ಸಮಿತಿಯ ಕಾರ್ಯದರ್ಶಿ ಚಂದ್ರಪ್ಪ, ಸದಸ್ಯರಾದ ಎಂ.ಜಯಪ್ಪ, ಶಿವಮೊಗ್ಗದ ಅಂಬೇಡ್ಕರ್ ವಸತಿಯುತ ಶಾಲೆಯ ದೈಹಿಕ ಶಿಕ್ಷಕ ಜಿ.ಆರ್.ಕಾಂತಕುಮಾರ್, ಸಹ ಪ್ರಾಧ್ಯಾಪಕರಾದ ಡಿ.ಎಂ.ನಿರುಪಮ, ಡಿ.ಬಿ.ರವೀಂದ್ರನಾಥ್, ಉಪನ್ಯಾಸಕರಾದ ಎಚ್.ಬಿ.ಲೋಕೇಶ್‌ಗೌಡ, ಯು.ಡಿ.ಜ್ಯೋತಿ, ಶಾಂಭವಿ ವಿ.ಪಾಟೀಲ್ ಮತ್ತು ಕಾಲೇಜಿನ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.