ಟೀಮ್ ಏಕತಾ ಸದಸ್ಯರ ಸಮಾಗಮ ಭರ್ಜರಿ ಯಶಸ್ಸು

KannadaprabhaNewsNetwork |  
Published : Apr 26, 2026, 03:45 AM IST
 ಟೀಮ್ ಏಕತಾ ಟ್ರಸ್ಟ್ ಸದಸ್ಯರ ಸಮಾಗಮ  | Kannada Prabha

ಸಾರಾಂಶ

ಸಮುದಾಯದಲ್ಲಿನ ಅನಾರೋಗ್ಯಪೀಡಿತರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದಿರುವ ಸಮಾನಮನಸ್ಕರ ಗುಂಪಾದ ಟೀಮ್ ಏಕತಾ ಟ್ರಸ್ಟ್ ಸದಸ್ಯರ ಸಮಾಗಮ ಕುಂದಾಪುರದ ಶ್ರೀವ್ಯಾಸರಾಜ ಕಲ್ಯಾಣಮಂಟಪದಲ್ಲಿ ಶನಿವಾರ ನಡೆಯಿತು.

ಕುಂದಾಪುರ: ಸಮುದಾಯದಲ್ಲಿನ ಅನಾರೋಗ್ಯಪೀಡಿತರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದಿರುವ ಸಮಾನಮನಸ್ಕರ ಗುಂಪಾದ ಟೀಮ್ ಏಕತಾ ಟ್ರಸ್ಟ್ ಸದಸ್ಯರ ಸಮಾಗಮ ಕುಂದಾಪುರದ ಶ್ರೀವ್ಯಾಸರಾಜ ಕಲ್ಯಾಣಮಂಟಪದಲ್ಲಿ ಶನಿವಾರ ನಡೆಯಿತು. ಏಳು ವರ್ಷಗಳಿಗೂ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಟೀಮ್ ಏಕತಾ ಇದುವರೆಗೆ 212 ಫಲಾನುಭವಿಗಳಿಗೆ ಒಟ್ಟು 52.94 ಲಕ್ಷ ರು. ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ಗುಂಪಿನ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುಂದಾಪುರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಸತೀಶ್ ಹಾಗೂ ಟೀಮ್ ಏಕತಾದ ಹಿರಿಯರು ಜೊತೆಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮರಹಿತವಾಗಿ ನಡೆದ ಈ ಸಮಾರಂಭವನ್ನು ಟೀಮ್ ಏಕತಾದ ಸುಮಾರು 200 ಸದಸ್ಯರನ್ನೇ ಮುಖ್ಯ ಅತಿಥಿಗಳಾಗಿ ಪರಿಗಣಿಸಿ ಆಯೋಜಿಸಿದ್ದು ವಿಶೇಷವಾಗಿತ್ತು. ಬಂದ ಅಷ್ಟೂ ಸದಸ್ಯರಿಗೆ ವಿಶೇಷ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಅಷ್ಟೂ ಮಂದಿಗೆ ಭೋಜನ ಹಾಗೂ ಐಸ್‌ಕ್ರೀಮ್ ಸಹಿತ ಸತ್ಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಮಾನ್‌ನಲ್ಲಿ ತುಂಬೆ ಹೆಲ್ತ್‌ಕೇರ್‌ ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ ಘಟಕ ಉದ್ಘಾಟನೆ
ಪಿವಿಎಸ್‌ ಬಸ್‌ಸ್ಟಾಪ್‌ನಲ್ಲಿ ಕುಡಿವ ನೀರು ಘಟಕಕ್ಕೆ ಶಾಸಕ ಚಾಲನೆ