ಹದಿಹರೆಯದವರಿಗೆ ಮಾರ್ಗದರ್ಶನ ಅವಶ್ಯ

KannadaprabhaNewsNetwork |  
Published : Sep 27, 2024, 01:22 AM IST
ತುಮಕೂರು ರಾಮಕೃಷ್ಣ - ವಿವೇಕಾನಂದ ಆಶ್ರಮದಲ್ಲಿ ನೆರವೇರಿದ ವಿದ್ಯಾರ್ಥಿ ದೇವೋಭವ ಕಾರ್ಯಕ್ರಮವನ್ನು ಬೆಂಗಳೂರಿನ ಸುಪ್ರಸಿದ್ಧ ಸ್ತ್ರೀರೋಗ ತಜ್ಞೆ ಹಾಗು ವಿದ್ಯಾಶಂಕರ್ ಲರ್ನಿಂಗ್ ಸೆಂಟರ್‌ನ ಹಿರಿಯ ವಿದ್ಯಾರ್ಥಿನಿ ಡಾ. ಸೌಪರ್ಣಿಕಾ ಉದ್ಘಾಟಿಸಿದರು. ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀ, ಸ್ವಾಮಿ ಧೀರಾನಂದಜೀ, ಅರ್ಚನಾ ಸಚಿನ್, ವಿದ್ಯಾಶಂಕರ್, ಶ್ಯಾಮಲಾ ವಿದ್ಯಾಶಂಕರ್ ಹಾಗು ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ತುಮಕೂರು: ಹದಿಹರೆಯದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಹಿಂದೆಂದಿಗಿಂತಲೂ ಇಂದು ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ. ಇದನ್ನು ಪೋಷಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ಸಮಯೋಚಿತವಾಗಿ, ಬದ್ಧತೆಯಿಂದ ನೀಡಬೇಕು ಎಂದು ಬೆಂಗಳೂರಿನ ಸ್ತ್ರೀ ರೋಗ ತಜ್ಞೆ ಡಾ.ಸೌಪರ್ಣಿಕಾ ಅಭಿಪ್ರಾಯಪಟ್ಟರು.

ತುಮಕೂರು: ಹದಿಹರೆಯದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಹಿಂದೆಂದಿಗಿಂತಲೂ ಇಂದು ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ. ಇದನ್ನು ಪೋಷಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ಸಮಯೋಚಿತವಾಗಿ, ಬದ್ಧತೆಯಿಂದ ನೀಡಬೇಕು ಎಂದು ಬೆಂಗಳೂರಿನ ಸ್ತ್ರೀ ರೋಗ ತಜ್ಞೆ ಡಾ.ಸೌಪರ್ಣಿಕಾ ಅಭಿಪ್ರಾಯಪಟ್ಟರು.ವಿದ್ಯಾಶಂಕರ್ ಲರ್ನಿಂಗ್ ಸೆಂಟರ್ ಸಂಸ್ಥೆಯು ತುಮಕೂರು ರಾಮಕೃಷ್ಣ - ವಿವೇಕಾನಂದ ಆಶ್ರಮದ ಸಹಯೋಗದೊಂದಿಗೆ ಆಯೋಜಿಸಿದ್ದ ವಿದ್ಯಾರ್ಥಿ ದೇವೋಭವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಹದಿಹರೆಯದವರ ಸಮಸ್ಯೆಗಳು ಮತ್ತು ಪರಿಹಾರಗಳು ಎಂಬ ವಿಷಯದ ಕುರಿತು ಮಾತನಾಡಿದರು.ಹಾರ್ಮೋನ್ಸ್ ಅಸಮತೋಲನದಿಂದ ಯುವಕ-ಯುವತಿಯರಲ್ಲಿ ದೈಹಿಕ ಬದಲಾವಣೆಗಳ ಜೊತೆಗೆ ಸಣ್ಣಪುಟ್ಟ ವಿಷಯಗಳಿಗೆ ಕೋಪಗೊಳ್ಳುವುದು, ಸೌಂದರ್ಯ ಪ್ರಜ್ಞೆ ಹೆಚ್ಚುವುದು, ಭಿನ್ನ ಲಿಂಗದವರ ಜೊತೆ ಸ್ನೇಹ - ಸಲುಗೆ ಬೆಳೆಸುವ ಇಚ್ಛೆ, ಒಂಟಿತನ, ಖಿನ್ನತೆ, ಏಕಾಗ್ರತೆಯ ಕೊರತೆ ಇವೇ ಮೊದಲಾದ ಮಾನಸಿಕ ಏರುಪೇರುಗಳಾಗುವುದು ಸಹಜ. ಆದರೆ ಇದನ್ನು ಉಪೇಕ್ಷಿಸದೇ ಇವುಗಳ ಯೋಗ್ಯ ನಿರ್ವಹಣೆಯ ಬಗ್ಗೆ ತಿಳುವಳಿಕೆ ನೀಡುವ ಜವಾಬ್ದಾರಿ ಪೋಷಕರು ಹಾಗೂ ಸಮಾಜದ ಹಿರಿಯರದ್ದು ಎಂದರು.ವಿದ್ಯಾರ್ಥಿಯ ಸುತ್ತಮುತ್ತಲಿನ ಪರಿಸರ, ಸ್ನೇಹಿತರೊಡಗಿನ ಒಡನಾಟ, ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲಗಳ ಬಳಕೆ, ಆಹಾರ, ಮನೋರಂಜನೆ, ವ್ಯಾಯಾಮ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮೊದಲಾದವು ಹಾರ್ಮೋನ್‌ಗಳ ಮೇಲೆ ತನ್ನ ಪ್ರಭಾವವನ್ನು ಬೀರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ, ಶಿಕ್ಷಣವೆಂಬುದು ಓದು-ಬರಹಕ್ಕೆ ಸೀಮಿತವಾಗದೆ ವಿವೇಕಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಕ್ರಿಯೆಯಾಗಬೇಕು. ತಾಯಿ, ತಂದೆ ಮತ್ತು ಶಿಕ್ಷಕರು ಈ ದಿಸೆಯಲ್ಲಿ ನಿಷ್ಕ್ರಿಯರಾದರೆ ಮಕ್ಕಳು ಮತ್ತು ಸಮಾಜ ಅನಾಥವಾದಂತೆ. ಕಳೆದ ಹದಿನಾಲ್ಕು ವರ್ಷಗಳಿಂದ ತಮ್ಮ ಸಂಸ್ಥೆಯ ಮಕ್ಕಳು ಹಾಗೂ ಪೋಷಕರನ್ನು ಆಶ್ರಮಕ್ಕೆ ಕರೆತಂದು ಈ ವಿಶೇಷ ಕಾರ್ಯಕ್ರಮದ ಮೂಲಕ ಕ್ರಿಯಾಶೀಲವಾಗಿರುವ ಶಿಕ್ಷಣ ತಜ್ಞ ವಿದ್ಯಾಶಂಕರ್ ನಿಜಕ್ಕೂ ಅಭಿನಂದನೀಯರು ಎಂದು ನುಡಿದರು.ಕಾರ್ಯಕ್ರಮದಲ್ಲಿ ಅಮೆರಿಕಾದಿಂದ ಆಗಮಿಸಿದ್ದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅರ್ಚನಾ ಸಚಿನ್, ಶ್ಯಾಮಲಾ ವಿದ್ಯಾಶಂಕರ್ ಹಾಗೂ ಶಿಕ್ಷಕ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

ಶಿಕ್ಷಕ ಸುನೀಲ್ ಹುಲಿಕಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಕಪ್ ವಾಹನ ಅಡ್ಡಗಟ್ಟಿ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಹಸಿ ಅಡಕೆ ದರೋಡೆ
ಪೋಕ್ಸೋ ಕಾಯ್ದೆ ಸರಿಯಾಗಿ ಜಾರಿಯಾದರೆ ಮಾತ್ರ ಅಪ್ರಾಪ್ತೆಯರ ರಕ್ಷಣೆ