ಬೇಲೂರು: ಹಲವಾರು ವರ್ಷಗಳಿಂದ ಖಾಸಗಿ ಕಾಫಿ ಎಸ್ಟೇಟ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಗ್ರಾಮಠಾಣಾ ಪ್ರದೇಶವನ್ನು ತಹಸೀಲ್ದಾರ್ ಎಂ.ಮಮತಾ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ತೆರವು ಕಾರ್‍ಯಾಚರಣೆ ನಡೆಸಿ, ಆ ಪ್ರದೇಶವನ್ನು ಪುನಃ ಗ್ರಾಮ ಪಂಚಾಯಿಯು ತನ್ನ ಸುಪರ್ದಿಗೆ ತೆಗೆದುಕೊಂಡ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಪಂ ವ್ಯಾಪ್ತಿಯ ಬ್ಯಾದನೆ ಗ್ರಾಮದಲ್ಲಿ ನಡೆದಿದೆ.
ನಾರ್ವೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡಿ, ಶಾಸಕರ ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮಠಾಣಾ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ಬ್ಯಾದನೆ ಗ್ರಾಮದಲ್ಲಿರುವ ಗ್ರಾಮಠಾಣಾ ಪ್ರದೇಶವನ್ನು ಇದೇ ಗ್ರಾಮದ ಗ್ರಾಮಸ್ಥರಿಗೆ ಮೀಸಲಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಕಾರ್‍ಯಾಚರಣೆ ವೇಳೆ ಪಿಡಿಒ ಚಂದ್ರಯ್ಯ, ಆರ್‌ಐ ಚಂದ್ರೆಗೌಡ,ತಾಪಂ ಇಒ ವಸಂತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ್ ನಾರ್ವೆ, ಚಿದಾನಂದ್, ಮಂಜುನಾಥ್, ಪವಿತ್ರ, ಬೇಬಿ, ವೀಣಾ, ಮುಖಂಡರಾದ ಇಸ್ಮಾಯಿಲ್, ಸೋಮಯ್ಯ, ನಿಂಗರಾಜು, ಕಾರ್‍ಯದರ್ಶಿ ಚಾಮರಾಜ್,ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾದನೆ ಗ್ರಾಮಸ್ಥರು ಇದ್ದರು.